ಕೋಲಾರ: ವಿಳಾಸ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಉತ್ತನೂರು ಗ್ರಾಮದಲ್ಲಿ ನಡೆದಿದೆ. ಉತ್ತನೂರು ಗ್ರಾಮದ ಹೊಲದಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಾಗ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.
ಮಾಸ್ಕ್ ಧರಿಸಿ ಬೈಕ್‌ನಲ್ಲಿ ಬಂದಿದ್ದ ಕಿರಾತಕರು ಅಡ್ರೆಸ್ ಕೇಳೋ ನೆಪದಲ್ಲಿ ಶಾರದಮ್ಮ ಎಂಬುವವರ 70 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಿಯಂತ್ರಣ ತಪ್ಪಿ.. ಪಲ್ಸರ್ ಬೈಕ್ನಿಂದ ಬಿದ್ದ ಹಿಂಬದಿ ಸವಾರ ಸ್ಥಳದಲ್ಲೇ ಸಾವು, ಯಾವೂರಲ್ಲಿ?