
ಹಾವೇರಿ: ಕೆಟ್ಟು ನಿಂತಿದ್ದ ಸಾರಿಗೆ ಬಸ್ಗೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ ಬಳಿ ನಡೆದಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಘಟನೆ ಸಂಭವಿಸಿದೆ.
32 ವರ್ಷದ ಸಂತೋಷ ಅರಳೇಶ್ವರ ಮೃತ ಬೈಕ್ ಸವಾರ. ಸಂತೋಷ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ.