7 ವರ್ಷ ಹಿಂದಿನ ಪ್ರಸಿದ್ಧ ಮಠದಲ್ಲೀಗ ಸ್ಮಶಾನ ಮೌನ; ಭಕ್ತರು ದೂರವಾಗಲು ಆ ನಿಗೂಢ ಸಾವುಗಳೇ ಕಾರಣ..
ಬೀದರ್: ಇಲ್ಲಿನ ಸುಶೀಕ್ಷೇತ್ರ ಚವಳಿ ಮಠ ಕೊನೇ ದಿನಗಳನ್ನು ಎಣಿಸುತ್ತಿದೆ.. ಹಾಗಂತ ಇದು ಶಿಥಿಲವಾಗುತ್ತಿದೆ ಎಂದು ಭಾವಿಸಬೇಡಿ..ಇಲ್ಲಿನ ಪರಿಸ್ಥಿತಿ ತುಸು ಭಿನ್ನವಾಗಿದೆ. ಈ ಮಠ ಒಂದು ದಶಕದ ಅವಧಿಯಲ್ಲಿ ಕರ್ನಾಟಕದಲ್ಲಿ ಬಹುಬೇಗನೇ ಪ್ರಸಿದ್ಧಿ ಪಡೆದಿತ್ತು. ಪ್ರತಿದಿನ ಸಾವಿರಾರು ಭಕ್ತರು ಬರುತ್ತಿದ್ದರು. ಆದರೆ ಏಳು ವರ್ಷಗಳ ಹಿಂದೆ ಈ ಮಠದಲ್ಲಿ ಉಂಟಾದ ನಾಲ್ಕು ಸಾವಿನ ನಂತರ ಭಕ್ತರು ಬರುವುದನ್ನೇ ನಿಲ್ಲಿಸಿದ್ದಾರೆ. ಇದೀಗ ಮಠ ಭಣಗುಟ್ಟುತ್ತಿದೆ. ಗುರು ಶಿಷ್ಯರ ನಿಗೂಢ ಸಾವು ಚವಳಿ ಮಠದಲ್ಲಿ ಪವಾಡ ಪುರುಷ ಎಂದೇ ಖ್ಯಾತಿ […]
ಬೀದರ್: ಇಲ್ಲಿನ ಸುಶೀಕ್ಷೇತ್ರ ಚವಳಿ ಮಠ ಕೊನೇ ದಿನಗಳನ್ನು ಎಣಿಸುತ್ತಿದೆ.. ಹಾಗಂತ ಇದು ಶಿಥಿಲವಾಗುತ್ತಿದೆ ಎಂದು ಭಾವಿಸಬೇಡಿ..ಇಲ್ಲಿನ ಪರಿಸ್ಥಿತಿ ತುಸು ಭಿನ್ನವಾಗಿದೆ. ಈ ಮಠ ಒಂದು ದಶಕದ ಅವಧಿಯಲ್ಲಿ ಕರ್ನಾಟಕದಲ್ಲಿ ಬಹುಬೇಗನೇ ಪ್ರಸಿದ್ಧಿ ಪಡೆದಿತ್ತು. ಪ್ರತಿದಿನ ಸಾವಿರಾರು ಭಕ್ತರು ಬರುತ್ತಿದ್ದರು. ಆದರೆ ಏಳು ವರ್ಷಗಳ ಹಿಂದೆ ಈ ಮಠದಲ್ಲಿ ಉಂಟಾದ ನಾಲ್ಕು ಸಾವಿನ ನಂತರ ಭಕ್ತರು ಬರುವುದನ್ನೇ ನಿಲ್ಲಿಸಿದ್ದಾರೆ. ಇದೀಗ ಮಠ ಭಣಗುಟ್ಟುತ್ತಿದೆ.
ಗುರು ಶಿಷ್ಯರ ನಿಗೂಢ ಸಾವು ಚವಳಿ ಮಠದಲ್ಲಿ ಪವಾಡ ಪುರುಷ ಎಂದೇ ಖ್ಯಾತಿ ಗಳಿಸಿದ್ದ, ಗಣೇಶ್ವರ ಅವಧೂತ ಸ್ವಾಮೀಜಿಗಳು ಬದುಕಿದ್ದಾಗ, ಬರಿ ನಮ್ಮ ರಾಜ್ಯದ ಜನರಷ್ಟೇ ಅಲ್ಲ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಭಕ್ತರು ಬರುತ್ತಿದ್ದರು. ದಿನಕ್ಕೆ ಏನಿಲ್ಲವೆಂದರೂ ಸಾವಿರ ಜನರು ಇಲ್ಲಿಗೆ ಭೇಟಿ ಕೊಡುತ್ತಿದ್ದರು.
ಆದರೆ ಗಣೇಶ್ವರ ಅವಧೂತ ಸ್ವಾಮೀಜಿಗಳ ನಿಗೂಢ ಸಾವು ಮತ್ತು ಅವರ ಮೂವರು ಶಿಷ್ಯರ ಆತ್ಮಹತ್ಯೆ ಪರಿಸ್ಥಿತಿಯನ್ನೇ ಬದಲಿಸಿಬಿಟ್ಟಿತು. ಮಠದಲ್ಲಿ ಎಲ್ಲೇ ನೋಡಿದರೂ ದೇವರ ಮೂರ್ತಿಗಳು, ನೂರಾರು ಲಿಂಗಗಳು ಇವೆ. ಸ್ವಚ್ಛಂದವಾದ ವಾತಾವರಣ ಇದೆ. ಆದರೆ ಭೇಟಿ ಕೊಡುವವರು ಯಾರೂ ಇಲ್ಲ.
ಅದು ಕಹಿ ಘಟನೆ ! ಪೀಠಾಧ್ಯಕ್ಷರಾಗಿದ್ದ ಗಣೇಶ್ವರ ಸ್ವಾಮೀಜಿಯವರು 2013ರ ಫೆಬ್ರವರಿ 28ರಂದು ನಿಗೂಢವಾಗಿ ಲಿಂಗೈಕ್ಯರಾದರು. ಬಳಿಕ ಅವರ ಶಿಷ್ಯರಾದ ವೀರಾರೆಡ್ಡಿ, ಜಗನ್ನಾಥ್, ಪ್ರಣವ್ ಸ್ವಾಮೀಜಿಗಳು ಏಪ್ರಿಲ್ 8ರಂದು ಡೆತ್ ನೋಟ್ ಬರೆದಿಟ್ಟು, ಮಠದ ಆವರಣದಲ್ಲೇ ಅಗ್ನಿಗೆ ಏರಿ, ಸಮಾಧಿಯಾದರು.
ಈ ಮೂವರು ಸ್ವಾಮೀಜಿಗಳ ಸಾವಿನ ತನಿಖೆಯನ್ನು ಅಂದಿನ ಬಿಜೆಪಿ ಸರ್ಕಾರ ಸಿಐಡಿಗೆ ವಹಿಸಿತ್ತು. ಆದರೆ ಆ ತನಿಖೆ ಎಲ್ಲಿವರೆಗೆ ಬಂದಿದೆ ಎಂಬುದು ಗೊತ್ತಿಲ್ಲ.. ಸಿಐಡಿ ಇನ್ನೂ ಪ್ರಾಥಮಿಕ ವರದಿಯನ್ನೂ ಸಲ್ಲಿಸಿಲ್ಲ. ಹಾಗಾಗಿ ಆ ಸಾವುಗಳು ನಿಗೂಢವಾಗಿಯೇ ಉಳಿದುಬಿಟ್ಟಿವೆ.
ಸರ್ಕಾರ ಗಮನಹರಿಸಲಿ ಘಟನೆ ನಡೆದು ಏಳು ವರ್ಷಗಳಾದರೂ ಭಕ್ತರಂತೂ ಅದನ್ನು ಮರೆಯುತ್ತಿಲ್ಲ.. ಒಬ್ಬೇ ಒಬ್ಬರೂ ಇಲ್ಲಿಗೆ ಆಗಮಿಸುತ್ತಿಲ್ಲ. ಮಠವಂತೂ ಅವಸಾನದತ್ತಲೇ ಹೋಗುತ್ತಿದೆ. ಕೆಲವೇ ಜನರು ಮಠದ ಪೂಜೆ ನೆರವೇರಿಸಿಕೊಂಡು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನಾದರೂ ಸರ್ಕಾರ ಗಮನ ಹರಿಸಿ, ಇಲ್ಲಿ ಯಾರನ್ನಾದರೂ ಪೀಠಾಧಿಪತಿಯನ್ನಾಗಿ ಮಾಡಲಿ ಎಂಬುದು ಸ್ಥಳೀಯರ ಸದಾಶಯ.