ಬೆಂಗಳೂರು, ಜುಲೈ.04: ಟ್ರಾಫಿಕ್ ರೂಲ್ಸ್ನ (Traffic Rules) ನಿಜಕ್ಕೂ ಜನ ಪಾಲಿಸುತಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ. ದಂಡದ ಮೌಲ್ಯ ಹೆಚ್ಚಾದರೂ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಹೆಚ್ಚಾಗಿ ಬೈಕ್ ಸವಾರರಿಂದಲೇ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾಗುತ್ತಿದೆ. ನಗರದಲ್ಲಿ ನಡೆಯುವ ಅಪಘಾತ ಪ್ರಕರಣಗಳಲ್ಲಿ ಬೈಕ್ ಸವಾರದ್ದೇ ಮೇಲುಗೈ. ಈ ಹಿನ್ನಲೆ ಪಶ್ಚಿಮ ಸಂಚಾರಿ ವಿಭಾಗದ ಪೊಲೀಸರು ನಿನ್ನೆ ದಿನವಿಡೀ ವಿಶೇಷ ಕಾರ್ಯಾಚರಣೆ ನಡೆಸಿದ್ದು ಒಂದೇ ದಿನ 851 ಪ್ರಕರಣಗಳು ದಾಖಲಾಗಿವೆ. ಬರೋಬ್ಬರಿ 4.33 ಲಕ್ಷ ದಂಡ ಹಾಕಿದ್ದಾರೆ.
ಕಾರ್ಯಾಚರಣೆ ವೇಳೆ ಬೈಕ್ ಸವಾರರ ಬೇಜವಾಬ್ದಾರಿ ಚಾಲನೆ ಪತ್ತೆಯಾಗಿದೆ. ಹೆಲ್ಮೆಟ್ ಇಲ್ಲ, ರಾಂಗ್ ರೂಟ್ನಲ್ಲಿ ಓಡಾಟ. ಸೇರಿದಂತೆ ನಾನಾ ಟ್ರಾಫಿಕ್ಸ್ ರೂಲ್ಸ್ ಉಲ್ಲಂಘನೆಯ ಕೇಸ್ಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ ಹೆಲ್ಮೆಟ್ ಇಲ್ಲದ ಬೈಕ್ ಸವಾರರ ವಿರುದ್ಧ 500ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ. ಹೆಲ್ಮೆಟ್ ಹಾಕದೇ ಬೈಕ್ ಚಾಲನೆ ಮಾಡಿದವರ ವಿರುದ್ದವೇ ಬರೋಬ್ಬರಿ ಎರಡೂವರೆ ಲಕ್ಷಕ್ಕೂ ಅಧಿಕ ರೂ ದಂಡ ಹಾಕಲಾಗಿದೆ.
ಇದನ್ನೂ ಓದಿ: ಸ್ಟ್ಯಾಂಡರ್ಡ್ ಡಿಡಕ್ಷನ್ ಒಂದು ಲಕ್ಷ ರೂಗೆ ಏರಿಕೆ ಸಾಧ್ಯತೆ; ಬಜೆಟ್ನಿಂದ ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ..!
ನಿನ್ನೆಯ ಕಾರ್ಯಾಚರಣೆಯ ದಂಡದ ವಿವರದಲ್ಲಿ ಬೈಕ್ ಸವಾರರ ಪಟ್ಟಿಯೇ ಹೆಚ್ಚು. ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದ 511 ಕೇಸ್ ಸಂಬಂಧ 2,51,500ರೂ ದಂಡ ವಿಧಿಸಲಾಗಿದೆ. ಒನ್ ವೇ ರಾಂಗ್ ರೂಟ್ನ 55 ಕೇಸ್ ಸಂಬಂಧ 27,600 ರೂ ದಂಡ ಬಿದ್ದಿದ್ದು. ರಾಂಗ್ ಪಾರ್ಕಿಂಗ್ನ 69 ಕೇಸ್ ಸಂಬಂಧ 37,800ರೂ ದಂಡ ವಿಧಿಸಲಾಗಿದೆ. ಫುಟ್ ಪಾತ್ ಪಾರ್ಕಿಂಗ್ ಸಂಬಂಧ 6 ಕೇಸ್ ಸಂಬಂಧ 5 ಸಾವಿರ ದಂಡ ವಿಧಿಸಲಾಗಿದೆ. ರೇಡಿಂಗ್ ವೇಳೆ ಮೊಬೈಲ್ ಬಳಕೆ 7 ಕೇಸ್ ದಾಖಲಾಗಿದ್ದು 10,000ರೂ ದಂಡ ಹಾಕಲಾಗಿದೆ. ತ್ರಿಬಲ್ ರೇಡಿಂಗ್ 10 ಕೇಸ್ ಸಂಬಂಧ 6 ಸಾವಿರ ರೂ ದಂಡ ಬಿದ್ದಿದೆ. ಇತರೆ ಸಂಚಾರಿ ನಿಯಮ ಉಲ್ಲಂಘನೆಯ 184 ಪ್ರಕರಣ ಸಂಬಂಧ 90,700ರೂ ದಂಡ ಹಾಕಲಾಗಿದ್ದು ಒಟ್ಟು 851 ಪ್ರಕರಣ ಸಂಬಂಧ 4,33,600ರೂ ದಂಡ ವಿಧಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ