ಗೋಹತ್ಯೆ ನಿಷೇಧ ವಿಧೇಯಕಕ್ಕೆ ಹಿನ್ನಡೆ: ವಿಧಾನ ಪರಿಷತ್​ನಲ್ಲಿ ಮಂಡನೆಯೇ ಆಗಲಿಲ್ಲ

|

Updated on: Dec 10, 2020 | 7:50 PM

ಪಶು ಸಂಗೋಪನಾ ಸಚಿವರು ಕಲಾಪದಲ್ಲಿ ಹಾಜರಿಲ್ಲ ಎಂಬ ನೆಪ ಹೇಳಿ ಸಭಾಪತಿ ವಿಧೇಯಕ ಮಂಡನೆಗೆ ಅವಕಾಶ ನೀಡಲಿಲ್ಲ.

ಗೋಹತ್ಯೆ ನಿಷೇಧ ವಿಧೇಯಕಕ್ಕೆ ಹಿನ್ನಡೆ: ವಿಧಾನ ಪರಿಷತ್​ನಲ್ಲಿ ಮಂಡನೆಯೇ ಆಗಲಿಲ್ಲ
ವಿಧಾನಸೌಧ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 (ಗೋಹತ್ಯೆ ನಿಷೇಧ ಕಾನೂನು) ಮಂಡನೆಯಾಗುವ ಮೊದಲೇ ಸಭಾಪತಿ ವಿಧಾನ ಪರಿಷತ್ ಕಲಾಪವನ್ನು ಮುಂದೂಡಿದರು. ಹೀಗಾಗಿ ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವ ಬಿಜೆಪಿ ಆಶಯ ಕೈಗೂಡಲಿಲ್ಲ.

ಪಶು ಸಂಗೋಪನಾ ಸಚಿವರು ಕಲಾಪದಲ್ಲಿ ಹಾಜರಿಲ್ಲ ಎಂಬ ನೆಪ ಹೇಳಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ವಿಧೇಯಕ ಮಂಡನೆಗೆ ಅವಕಾಶ ನೀಡಲಿಲ್ಲ. ವಿಧೇಯಕ ಮಂಡನೆಯಾಗದೇ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಕಾರಣ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಜಾರಿ ಮಾಡಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ.

ವಿಧಾನ ಪರಿಷತ್​ ಸದಸ್ಯ ಅಯನೂರು ಮಂಜುನಾಥ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದರು. ಇದಕ್ಕೆ ಅವಕಾಶಕೊಡದ ಸಭಾಪತಿ, ಈ ಕುರಿತು ನನ್ನ ನಿರ್ಧಾರ ಕಡತದಲ್ಲಿ ನಮೂದು ಮಾಡಲಾಗಿದೆ. ಸದಸ್ಯರಿಗೆ ಅಧಿಕಾರಿಗಳು ತಿಳಿಸುತ್ತಾರೆ ಎಂದು ಹೇಳಿದರು. ಸಭಾಪತಿ ಮಾತನ್ನು ಆಡಳಿತ ಪಕ್ಷದ ಸದಸ್ಯರು ವಿರೋಧಿಸಿ, ಈಗಲೇ ನಿಮ್ಮ ನಿರ್ಧಾರ ತಿಳಿಸಿ ಎಂದು ಪಟ್ಟುಹಿಡಿದರು. ಸದನದಲ್ಲಿ ಗದ್ದಲ ಹೆಚ್ಚಾದ ಕಾರಣ ಕಲಾಪವನ್ನು ಸಭಾಪತಿ ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಆಡಳಿತ-ಪ್ರತಿಪಕ್ಷಗಳ ಗದ್ದಲದ ಮಧ್ಯೆ ಕಲಾಪದ ಮಧ್ಯೆಯೇ ಕಲಾಪ ಮುಂದೂಡಿರುವ ರೂಲಿಂಗ್ ನೀಡಿ ಸಭಾಪತಿ ಮೇಲೆದ್ದು ಹೊರಟರು. ಈ ವೇಳೆ ರಾಷ್ಟ್ರಗೀತೆ ಆರಂಭವಾಯಿತು. ಅದನ್ನು ಗಮನಿಸಿದ ಸಭಾಪತಿ ಮತ್ತೆ ಸಭಾಧ್ಯಕ್ಷರ ಪೀಠಕ್ಕೆ ಮರಳಿ ಬಂದರು. ರಾಷ್ಟ್ರಗೀತೆ ಮುಕ್ತಾಯವಾದ ಮೇಲೆ ಹೊರ ನಡೆದರು.

ಗೋ ಹತ್ಯೆ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ; ಪ್ರತಿಭಟನೆ ಬಿಡದ ಕಾಂಗ್ರೆಸ್​

Published On - 7:33 pm, Thu, 10 December 20