ಲಿಂಗಾಯತ ಸಮಾಜ ನಾಯಕರ ‘ರಾಜಕೀಯ’ ಸಭೆ: ಗೃಹ ಮಂತ್ರಿ ಬೊಮ್ಮಾಯಿ ಏನಂತಾರೆ?

ಉಪ ಚುನಾವಣೆಗೆ ಎರಡು ದಿನ ಮೊದಲು ನಡೆದ ಲಿಂಗಾಯತ ಸಮಾಜದ ನಾಯಕರ ಸಭೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ತೆಗೆದುಕೊಂಡ ನಿರ್ಣಯದ ಬೆನ್ನಲ್ಲೆ ಭಾರತೀಯ ಜನತಾ ಪಕ್ಷ ಆ ಸಭೆ ಮತ್ತು ಅಲ್ಲಿ ತೆಗೆದುಕೊಂಡ ನಿರ್ಣಯವನ್ನು ಕಡೆಗಣಿಸಲು ನಿರ್ಧರಿಸಿದಂತಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಭಾಜಪಾ ನಾಯಕರು ಆ ಸಭೆ ಬಗ್ಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅವರ ನೇತೃತ್ವದಲ್ಲಿ ನಡೆದ ಭಾನುವಾರದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ […]

ಲಿಂಗಾಯತ ಸಮಾಜ ನಾಯಕರ ‘ರಾಜಕೀಯ’ ಸಭೆ: ಗೃಹ ಮಂತ್ರಿ ಬೊಮ್ಮಾಯಿ ಏನಂತಾರೆ?

Updated on: Nov 03, 2020 | 2:26 PM

ಉಪ ಚುನಾವಣೆಗೆ ಎರಡು ದಿನ ಮೊದಲು ನಡೆದ ಲಿಂಗಾಯತ ಸಮಾಜದ ನಾಯಕರ ಸಭೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ತೆಗೆದುಕೊಂಡ ನಿರ್ಣಯದ ಬೆನ್ನಲ್ಲೆ ಭಾರತೀಯ ಜನತಾ ಪಕ್ಷ ಆ ಸಭೆ ಮತ್ತು ಅಲ್ಲಿ ತೆಗೆದುಕೊಂಡ ನಿರ್ಣಯವನ್ನು ಕಡೆಗಣಿಸಲು ನಿರ್ಧರಿಸಿದಂತಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಭಾಜಪಾ ನಾಯಕರು ಆ ಸಭೆ ಬಗ್ಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅವರ ನೇತೃತ್ವದಲ್ಲಿ ನಡೆದ ಭಾನುವಾರದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಸಂದರ್ಭ ಬಂದಲ್ಲಿ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಮತ್ತು ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರನ್ನು ಪರಿಗಣಿಸುವಂತೆ ಭಾಜಪಾ ರಾಷ್ಟ್ರೀಯ ನಾಯಕರಿಗೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಕುರಿತು TV9 ಡಿಜಿಟಲ್ ಜೊತೆ ಮಾತನಾಡಿದ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ, ನಿವೃತ್ತ ನ್ಯಾಯಮೂರ್ತಿ ಅವರ ಬಗ್ಗೆ ಗೌರವ ಇದೆ. ಆದರೆ ಅವರು ನಡೆಸಿದ ಸಭೆ ಬಗ್ಗೆ ನನಗೆ ಯಾವ ವಿಶ್ವಾಸಾರ್ಹತೆ ಇಲ್ಲ. ತಾವು ಈ ಬೆಳವಣಿಗೆಗೆ ಯಾವ ಪ್ರತಿಕ್ರಿಯೆ ನೀಡಲ್ಲ. ಏಕೆಂದರೆ, ಈ ಸಭೆ ಯಾವ ಪ್ರತಿಕ್ರಿಯೆಗೂ ಯೋಗ್ಯವಲ್ಲ ಎಂದಿದ್ದಾರೆ.

ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತ್ರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈಗ ನಾಯಕತ್ವ ಬದಲಾವಣೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಯಾಕೆಂದರೆ, ಮುಖ್ಯಮಂತ್ರಿ ಕುರ್ಚಿಯಲ್ಲಿ ಯಡಿಯೂರಪ್ಪ ಅವರು ಇದ್ದಾರೆ. ಲಿಂಗಾಯತ ನಾಯಕರು ನಡೆಸಿದ್ದಾರೆ ಎನ್ನುವ ಸಭೆ ಕುರಿತು ಮಾತನಾಡಿದ ರೇಣುಕಾಚಾರ್ಯ, ಒಂದು ರಾಜಕೀಯ ಪಕ್ಷಕ್ಕೆ ಅದರದ್ದೇ ಆದ ನೀತಿ ನಿಯಮ ಇರುತ್ತೆ.

ಅದನ್ನು ಗಾಳಿಗೆ ತೂರಲು ಸಾಧ್ಯವಿಲ್ಲ. ಯಾರೋ ಕೆಲವು ಲಿಂಗಾಯತ ಸಮಾಜ ನಾಯಕರು ಸಭೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅದಕ್ಕೆ ಮಾನ್ಯತೆ ನೀಡಬೇಕಾಗಿಲ್ಲ. ಯಾಕೆಂದರೆ, ಅವರಿಗೆ ಆ ಕೆಲಸ ಮಾಡುವ ಯಾವ ದಾಯಿತ್ವವನ್ನು ನೀಡಿಲ್ಲದ ಕಾರಣ ಅವರು ಆ ರೀತಿ ಮಾಡಿದ್ದರೂ ಅದಕ್ಕೆ ಯಾವ ಪ್ರಾಮುಖ್ಯತೆ ನೀಡಲಾಗದು. ಅಷ್ಟೇ ಅಲ್ಲ, ರಾಜಕೀಯ ಪಕ್ಷ ಏನು ಮಾಡಬೇಕು ಎಂಬುದನ್ನು ಆಯಾ ಪಕ್ಷಕ್ಕೆ ಬಿಡುವುದು ಒಳಿತು ಎಂದು ಪ್ರತಿಕ್ರಿಯಿದ್ದಾರೆ.