ಬೆಂಗಳೂರು: ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಒಂದು ಸಮನೆ ದುಸುಮುಸು ಎಂದು ಮುನಿಸಿಕೊಳ್ಳುವ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಥ್ಯಾಂಕ್ಸ್ ಹೇಳಿಬಂದಿದ್ದಾರೆ. ಕಾರಣ ಕಳೆದ ವಾರ ಎರಡು ಬಾರಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ಹಳ್ಳಿಹಕ್ಕಿ ವಿಶ್ವನಾಥ್ ಅವರು ಸರ್ಕಾರಿ ಎಂಜಿನಿಯರ್ ಆಗಿರುವ ತಮ್ಮ ಅಳಿಯನನ್ನು ಆಯಕಟ್ಟಿನ ಜಾಗಕ್ಕೆ ಟ್ರಾನ್ಸ್ಫರ್ ಮಾಡಿಕೊಂಡುವಂತೆ ಪೆಟಿಷನ್ ಇಟ್ಟಿದ್ದರು. ಅದರಂತೆ ಅಳಿಯ ಹೆಚ್ಸಿ ರಮೇಂದ್ರ ಅವರನ್ನು ವರ್ಗಾವಣೆ (Transfer) ಮಾಡಿಕೊಟ್ಟಿದ್ದಕ್ಕೆ ಸಿಎಂಗೆ ಧನ್ಯವಾದ ಹೇಳಿಬಂದಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು (H Vishwanath) ಕಳೆದ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು (Basavaraj Bommai) ಭೇಟಿ ಮಾಡಿ, ತಮ್ಮ ಅಳಿಯ ರಮೇಂದ್ರ ಅವರನ್ನು ಆಯಕಟ್ಟಿನ ಹುದ್ದೆಗೆ ವರ್ಗಾವಣೆ ಮಾಡಿಕೊಂಡಿ ಎಂದು ಮನವಿ ಸಲ್ಲಿಸಿದ್ದರು.
ಅದರ ಫಲಶ್ರುತಿಯಾಗಿ ಹೆಚ್ ಸಿ ರಮೇಂದ್ರ ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿ ವರ್ಗಾವಣೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ ವಿಶ್ವನಾಥ್ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ, ಸಿಎಂಗೆ ಧನ್ಯವಾದ (Thanksgiving) ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಜೆಡಿಎಸ್ ಕುಟುಂಬ ರಾಕ್ಷಸ ರಾಜಕಾರಣ ಬಿಜೆಪಿಯಲ್ಲೂ ಇದೆ: ಅರುಣ್ ಸಿಂಗ್ ಎದುರು ಗುಡುಗಿದ ಹೆಚ್ ವಿಶ್ವನಾಥ್ ಏನೆಲ್ಲ ಹೇಳಿದ್ರು?
(BJP MLC H Vishwanath thanksgiving to CM Basavaraj bommai for transfer favour)
Published On - 12:24 pm, Wed, 25 August 21