ಬಿಜೆಪಿಯ ಹಿಂದೂತ್ವ ಸಿದ್ಧಾಂತ ನಂಬಿಕೊಂಡು ಪಕ್ಷವನ್ನು ಸೇರಿ ಕಟ್ಟಿ ಬೆಳೆಸಿದ್ದು, ಅಧಿಕಾರದ ಲಾಲಸೆಗೆ ಅಲ್ಲ: ಸಿಟಿ ರವಿ
ಆ ತತ್ವ ಸಿದ್ಧಾಂತಗಳನ್ನು ನಂಬಿಯೇ ಆಗ ತನ್ನ ತಂದೆಯವರು ದೇವೇಗೌಡರು ಹುಟ್ಟುಹಾಕಿದ್ದ ಸಮಾಜವಾದಿ ಪಕ್ಷವನ್ನು ಸೇರುವಂತೆ ಒತ್ತಾಯಿಸಿದ್ದರೂ ಬಿಎಸ್ ಯಡಿಯೂರಪ್ಪನವರ ಕೈ ಹಿಡಿದಿದ್ದು ಮತ್ತು ಆ ನಂಬಿಕೆ ಸಿದ್ಧಾಂತಗಳು ಬಿದ್ದುಹೋದ ದಿನ ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರದಿಂದ ದೂರವಾಗವುದಾಗಿ ಸಿಟಿ ರವಿ ಹೇಳಿದರು.
ಚಿಕ್ಕಮಗಳೂರು: ಮೊನ್ನೆ ಬಿವೈ ವಿಜಯೇಂದ್ರ (BY Vijayendra) ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾಗಿ ಘೋಷಣೆಯಾದಾಗ ಬೆಂಗಳೂರಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಹತಾಶೆ ಮತ್ತು ನಿರಾಸೆಯ ಭಾವದೊಂದಿಗೆ ಮಾತಾಡಿದ್ದ ಮಾಜಿ ಶಾಸಕ ಸಿಟಿ ರವಿ (CT Ravi) ಇಂದು ಚಿಕ್ಕಮಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಧಾಟಿ ಬದಲಾಯಿಸಿ ಗಡಸು ಧ್ವನಿಯಲ್ಲಿ ಮಾತಾಡಿದರು. ಬಿಜೆಪಿಯ ಹಿಂದೂತ್ವ ಸಿದ್ಧಾಂತದ ಮೇಲೆ ನಂಬಿಕೆ ಇರಿಸಿಕೊಂಡು ತಂದೆಯ ಆಶಯಗಳಿಗೆ ವಿರುದ್ಧವಾಗಿ ಪಕ್ಷವನ್ನು ಸೇರಿ ಅದನ್ನು ಕಟ್ಟಿ ಬೆಳಸುವ ಸಮಯದಲ್ಲಿ ತಮಗೆ ಜಾಮೀನು ನೀಡುವವರೂ ಗತಿಯಿರಲಿಲ್ಲ ಎಂದ ಅವರು ಅಧಿಕಾರದ ಲಾಲಸೆಯಿಂದ ತಾನ್ಯಾವತ್ತೂ ರಾಜಕಾರಣ ಮಡಿಲ್ಲ ಎಂದು ಹೇಳಿದರು. ಆ ತತ್ವ ಸಿದ್ಧಾಂತಗಳನ್ನು ನಂಬಿಯೇ ಆಗ ತನ್ನ ತಂದೆಯವರು ದೇವೇಗೌಡರು ಹುಟ್ಟುಹಾಕಿದ್ದ ಸಮಾಜವಾದಿ ಪಕ್ಷವನ್ನು ಸೇರುವಂತೆ ಒತ್ತಾಯಿಸಿದ್ದರೂ ಬಿಎಸ್ ಯಡಿಯೂರಪ್ಪನವರ (BS Yediyurappa) ಕೈ ಹಿಡಿದಿದ್ದು ಮತ್ತು ಆ ನಂಬಿಕೆ ಸಿದ್ಧಾಂತಗಳು ಬಿದ್ದುಹೋದ ದಿನ ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರದಿಂದ ದೂರವಾಗವುದಾಗಿ ಸಿಟಿ ರವಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ