ಬೆಂಗಳೂರು: ನಗರದಲ್ಲಿ ಬ್ಲ್ಯಾಕ್ ಫಂಗಸ್ ಮಕ್ಕಳನ್ನೂ ಬಿಡದೆ ಕಾಡುತ್ತಿದೆ. ರಾಜ್ಯದ ರಾಜಧಾನಿಯಲ್ಲಿ 10 ವರ್ಷದೊಳಗಿನ ಮೂವರು ಮಕ್ಕಳಿಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಟೈಪ್ ಒನ್ ಡಯಾಬಿಟಿಸ್ ಇರುವ ಮಕ್ಕಳಲ್ಲಿ ರೋಗ ಪತ್ತೆಯಾಗಿದೆ. ಅಂತಹ ಮಕ್ಕಳಲ್ಲಿ ಇಮ್ಯುನಿಟಿ ಕಡಿಮೆ ಇರುತ್ತದೆ. ಹೀಗಾಗಿ ಬ್ಲಾಕ್ ಫಂಗಸ್ ಮೂವರು ಮಕ್ಕಳಲ್ಲಿ ಪತ್ತೆಯಾಗಿದೆ.
ವೈದ್ಯ ವಿರುದ್ಧ ಆರೋಪಿಸಿ, ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ
ಚಿಕ್ಕಬಳ್ಳಾಪುರ: ಲ್ಯಾಪ್ರೋಸ್ಕೋಪಿಕ್ ಸರ್ಜರಿ ಬಳಿಕ ಗೃಹಿಣಿ ಮೃತಪಟ್ಟಿರುವ ಹಿನ್ನೆಲೆ ಆಕೆಯ ಕುಟುಂಬಸ್ಥರು ಆಸ್ಪತ್ರೆ ವೈದ್ಯನ ವಿರುದ್ಧ ಆರೋಪಿಸಿದ್ದಾರೆ. ವೈದ್ಯನ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆಂದು ಜಿಲ್ಲೆಯ ಚಿಂತಾಮಣಿಯಲ್ಲಿರುವ ಆರ್ಎಸ್ಎಲ್ ಆಸ್ಪತ್ರೆ ಮುಂದೆ ಮೃತ ಗೌರಮ್ಮನ ಶವವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಸರ್ಜರಿ ಬಳಿಕ ಗೌರಮ್ಮ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ಗೌರಮ್ಮನನ್ನು ಶಿಫ್ಟ್ ಮಾಡಿದ್ದರು.
ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗೌರಮ್ಮ ಕೊನೆಯುಸಿರೆಳೆದಿದ್ದಾರೆ. ಬಳಿಕ ಗೌರಮ್ಮನ ಶವ ತಂದು ಆರ್ಎಸ್ಎಲ್ ಆಸ್ಪತ್ರೆ ಬಳಿ ಆಕ್ರೋಶ ಹೊರಹಾಕಿದ್ದಾರೆ. ಪತ್ನಿ ಗೌರಮ್ಮ ಸಾವಿಗೆ ಆರ್ಎಸ್ಎಲ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತಳ ಪತಿ ಮೂರ್ತಿ ಆರೋಪಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಚಿಂತಾಮಣಿ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ
ಕೊರೊನಾದಿಂದ ಗುಣಮುಖರಾದವರಲ್ಲಿ ಮತ್ತೊಂದು ಸಮಸ್ಯೆ.. ಕಾಲುಗಳು ಕಟ್
(Black Fungus has been found in three children under the age of 10 in Bangalore)