ಮಂಗಳೂರು: ರಾತ್ರಿ 1.30ರ ಸುಮಾರಿಗೆ ಮಂಗಳೂರು ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ಗೆ ಅಪಘಾತವಾಗಿದೆ. ಈ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ಕೋಡಿಯಲ್ಲಿ ಸಂಭವಿಸಿದೆ. ಅಝಾನ್ ಹೆಸರಿನ ಬೋಟ್ ದಡಕ್ಕೆ ಬಂದು ಅಪ್ಪಳಿಸಿದೆ. ಬೋಟ್ನಲ್ಲಿ 10 ಮಂದಿ ಇದ್ದರು. ಆದರೆ ಅದೃಷ್ಟವಶಾತ್ ಜೀವಾಪಾಯದಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ.
ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಮೀನುಗಾರಿಗಾ ಬೋಟ್ಗೆ ಅಪಘಾತವಾಗಿದೆ. ಕ್ಯಾಪ್ಟನ್ ಬದಲಿಗೆ ಮೀನುಗಾರ ಬೋಟ್ ಮಾಡುತ್ತಿದ್ದ. ಚಾಲನೆ ತಿಳಿಯದಿದ್ದರಿಂದ ಮೀನುಗಾರ ಬೋಟ್ನ ದಡಕ್ಕೆ ಗುದ್ದಿಸಿದ್ದಾನೆ. ದಡಕ್ಕೆ ಅಪ್ಪಳಿಸಿದಾಗ ಬೋಟ್ನಲ್ಲಿದ್ದ ಮೀನುಗಾರರಿಗೆ ವಾಂತಿಯಾಗಿದೆ. ಬೋಟ್ನಲ್ಲಿದ್ದ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬೋಟ್ನಲ್ಲಿದ್ದ ಐವರು ಮೀನುಗಾರರು ಮದ್ಯ ಸೇವನೆ ಮಾಡಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಡು ಪ್ರಾಣಿಗಳ ದಾಳಿ ಶಂಕೆ; 20ಕ್ಕೂ ಹೆಚ್ಚು ಕುರಿಮರಿಗಳ ಸಾವು
ದಾವಣಗೆರೆ: ಹರಪನಹಳ್ಳಿ ತಾಲೂಕಿನ ಶಿರಗಾನಹಳ್ಳಿ ತಾಂಡದ ಬಳಿ ಕಾಡುಪ್ರಾಣಿಗಳು ಸುಮಾರು 20 ಮರಿಗಳನ್ನು ಕೊಂದು ಆರು ಮರಿಗಳನ್ನು ಸಂಪೂರ್ಣವಾಗಿ ತಿಂದು ಹಾಕಿರುವ ಘಟನೆ ನಡೆದಿದೆ. ಕುರಿಮರಿಗಳು ಉಚ್ಚಂಗಿದುರ್ಗ ಗುಡ್ಡಪರ ಮಹಾಂತೇಶ ಎಂಬುವರಿಗೆ ಸೇರಿದ್ದು. ಘಟನಾ ಸ್ಥಳದ ಕೆಲ ಮೀಟರ್ ದೂರದಲ್ಲಿ ಅರಣ್ಯವಿದೆ. ಹೀಗಾಗಿ ಕಾಡುಪ್ರಾಣಿಗಳು ಕುರಿಮರಿಗಳನ್ನು ತಿಂದಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆ ತಡರಾತ್ರಿ ನಡೆದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಕುರಿಗಾಯಿ ಮಹಾಂತೇಶ ಪರವಾಗಿ ಸ್ಥಳೀಯರಿಂದ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೊರೊನಾ ಸೋಂಕು ದೃಢವಾದಂತೆ ಆತ್ಮಹತ್ಯೆಗೆ ಶರಣಾದ ಗದಗದ ಮಹಿಳೆ
ಬ್ಲ್ಯಾಕ್ ಫಂಗಸ್ ಸೋಂಕು ಬಾರದಂತೆ ತಡೆಗಟ್ಟಲು ಇಲ್ಲಿದೆ ಸರಳ ಸಲಹೆಗಳು
(Boat accident in Manglore and vomiting to fishermen)