ಬ್ಲ್ಯಾಕ್ ಫಂಗಸ್ ಸೋಂಕು ಬಾರದಂತೆ ತಡೆಗಟ್ಟಲು ಇಲ್ಲಿದೆ ಸರಳ ಸಲಹೆಗಳು
ಪ್ರತಿನಿತ್ಯವೂ ನಿಮ್ಮ ಆರೋಗ್ಯದ ಕುರಿತು ಕಾಳಜಿವಹಿಸಿ ರೋಗ ಬಾರದಂತೆ ಎಚ್ಚರ ವಹಿಸಿ. ಬ್ಲ್ಯಾಕ್ ಫಂಗಸ್ ಸೋಂಕು ಹರಡದಂತೆ ತಡೆಗಟ್ಟಲು ಇಲ್ಲಿದೆ ಸರಳ ವಿಧಾನಗಳು.
ಕೊವಿಡ್-19 ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಇದೀಗ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಎಂಬ ಅಪರಿಚಿತ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಲ್ಲಿಯವರೆಗೆ ಕೇಳರಿಯದ ಸೋಂಕು ಇದೀಗ ಜನರನ್ನು ಭಯಭೀತರನ್ನಾಗಿ ಮಾಡಿದೆ. ಮ್ಯೂಕೋರ್ಮೈಕೋಸಿಸ್ ಎಂದು ಕರೆಯಲ್ಪಡುವ ಬ್ಲ್ಯಾಕ್ ಫಂಗಸ್ ಸೋಂಕಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಮಾರಕವಾಗಬಹುದು. ಹಾಗಿದ್ದಾಗ, ಪ್ರತಿನಿತ್ಯವೂ ನಿಮ್ಮ ಆರೋಗ್ಯದ ಕುರಿತು ಕಾಳಜಿವಹಿಸಿ ರೋಗ ಬಾರದಂತೆ ಎಚ್ಚರ ವಹಿಸಿ. ಸೋಂಕು ಹರಡದಂತೆ ತಡೆಗಟ್ಟಲು ಇಲ್ಲಿದೆ ಸರಳ ವಿಧಾನಗಳು.
ಕೊವಿಡ್ನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಚೇತರಿಸಿಕೊಂಡ ಜನರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ, ಸ್ಟೀರಾಯ್ಡ್ಗಳ ಅತಿಯಾದ ಬಳಕೆಯಿಂದ ಹಾಗೂ ಮಧುಮೇಹಿಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಂಡು ಬರುವ ಸಾಧ್ಯತೆ ಹೆಚ್ಚಾಗಿದೆ.
ಅಸ್ವಸ್ಥತೆ, ದೇಹಕ್ಕೆ ಸುಸ್ತು, ಒಸಡು ನೋವು, ಉಸಿರುಗಟ್ಟಿಕೊಳ್ಳುವಿಕೆ, ತಲೆನೋವು, ಜ್ವರ ಹಾಗೂ ಕಣ್ಣುಗಳ ಕೆಳಭಾಗ ಭಾರ ಎನಿಸುವುದು ಇವುಗಳು ಬ್ಲ್ಯಾಕ್ ಫಂಗಸ್ನ ಲಕ್ಷಣಗಳಾಗಿವೆ. ಹೀಗಿರುವಾಗ ಬ್ಲ್ಯಾಕ್ ಫಂಗಸ್ ಬಾರದಂತೆ ತಡೆಗಟ್ಟುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ದಿನಕ್ಕೆ 2-3 ಬಾರಿ ಹಲ್ಲುಜ್ಜಬೇಕು ಕೊವಿಡ್19 ಸೋಂಕಿನ ಚೇತರಿಕೆ ಬಳಿಕ ಸ್ಟೀರಾಯ್ಡ್ಗಳು ಮತ್ತು ಇತರ ಔಷಧಿಗಳನ್ನು ಸೇವಿಸುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರವು ಹುಟ್ಟಿಕೊಳ್ಳಬಹುದು. ಇದು ಶ್ವಾಸಕೋಶ, ಸೈನಸ್ ಮತ್ತು ಮೆದುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಿರುವಾಗ ದಿನಕ್ಕೆ ಎರಡರಿಂದ ಮೂರು ಬಾರಿ ಹಲ್ಲುಜ್ಜುವ ಮೂಲಕ ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಬಾಯಿ ಮುಕ್ಕಳಿಸುವುದು ರೋಗದ ಕಾರಣದಿಂದ ನಾಲಿಗೆ ರುಚಿಗೆಟ್ಟಿರುತ್ತದೆ. ಕೊವಿಡ್ ಸೋಂಕಿನಿಂದ ದೂರವಾದರೂ ಕೂಡಾ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ದಿನಕ್ಕೆ ಎರಡರಿಂದ ಮೂರು ಬಾರಿ ಹಲ್ಲುಜ್ಜುವುದರ ಜತೆಗೆ ಆಹಾರ ಸೇವಿಸಿದ ಬಳಿಕವೇ ಬಾಯಿ ಮುಕ್ಕಳಿಸುವುದನ್ನು ರೂಢಿಯಲ್ಲಿಟ್ಟುಕೊಳ್ಳಿ.
ಟೂತ್ ಬ್ರಷ್ ಜತೆಗೆ ಟಂಗ್ ಕ್ಲೀನರ್ ಬಳಸಿ ದಿನನಿತ್ಯವೈ ಬಾಯಿ ಮುಕ್ಕಳಿಸಬಹುದು ಆದರೆ ಕೆಲವು ಬಾರಿ ನಾಲಿಗೆಗೆ ಅಂಟಿಕೊಂಟ ಆಹಾರ ಪದಾರ್ಥಗಳು ನಾಲಿಗೆಯಿಂದ ಸ್ವಚ್ಛವಾಗಿರುವುದಿಲ್ಲ. ಹಾಗಾಗಿ ನಾಲಿಗೆಯನ್ನು ಟಂಗ್ ಕ್ಲೀನರ್ ಮೂಕ ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ನಾಲಿಗೆಗೆ ಅಂಟಿಕೊಂಡಿರುವ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಬಹುದು. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮನೆಯ ಸದಸ್ಯರು ಇರಿಸಿಕೊಳ್ಳುವ ಟೂತ್ ಬ್ರಶ್ ಮತ್ತು ಟಂಗ್ ಕ್ಲೀನರ್ ಜತೆಗೆ ಸೋಂಕಿಗೆ ಒಳಗಾದ ವ್ಯಕ್ತಿಯ ಬ್ರಶ್ ಮತ್ತು ಟಂಗ್ ಕ್ಲೀನರ್ಗಳನ್ನು ಇರಿಸಿಕೊಳ್ಳುವುದನ್ನು ಆದಷ್ಟು ತಪ್ಪಿಸಿ.
ಮುಂದಿನ 2 ರಿಂದ 3 ದಿನಗಳಲ್ಲಿ ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್ ಸೋಂಕಿನ ಔಷಧ ಬರಲಿದೆ: ಸಚಿವ ಡಾ.ಸುಧಾಕರ್