Health Tips: ಪ್ರತಿನಿತ್ಯ ವಾಯುವಿಹಾರ ಅಭ್ಯಾಸ ರೂಢಿಯಲ್ಲಿರಲಿ; ನೆಮ್ಮದಿ ಹಾಳು ಮಾಡುವ ಕಾಯಿಲೆಗಳಿಂದ ದೂರವಿರಿ

Benefits of Daily Walking: ಪ್ರತಿನಿತ್ಯ ಅರ್ಧಗಂಟೆ ವಾಯುವಿಹಾರ ಮಾಡುವುದನ್ನು ರೂಢಿಯಲ್ಲಿಟ್ಟುಕೊಂಡರೆ ಹೃದಯ ಸಂಬಂಧಿತ ಸಮಸ್ಯೆಗಳಿಂದ ದೂರವಿರಬಹುದಾಗಿದೆ. ಹಾಗೂ ದೇಹದ ಫಿಟ್​ನೆಟ್​ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

Health Tips: ಪ್ರತಿನಿತ್ಯ ವಾಯುವಿಹಾರ ಅಭ್ಯಾಸ ರೂಢಿಯಲ್ಲಿರಲಿ; ನೆಮ್ಮದಿ ಹಾಳು ಮಾಡುವ ಕಾಯಿಲೆಗಳಿಂದ ದೂರವಿರಿ
ವಾಯುವಿಹಾರ
Follow us
|

Updated on:May 23, 2021 | 3:20 PM

ಹವಾಮಾನ ಏರುಪೇರಿನಿಂದಾಗಿ ಅಥವಾ ಸಾಂಕ್ರಾಮಿಕ ರೋಗಗಳಿಂದಾಗಿ ಆರೋಗ್ಯ ಹದಗೆಟ್ಟಿರುತ್ತದೆ. ಮಾನಸಿಕ ಒತ್ತಡ, ರಕ್ತದೊತ್ತಡದಂತಹ ಸಮಸ್ಯೆಗಳು ಕಾಡತೊಡಗುತ್ತಿರುತ್ತದೆ. ಮನಸ್ಸಿಗೆ ನೆಮ್ಮದಿ ಇಲ್ಲ. ಯಾವಾಗಲೂ ಅನಗತ್ಯ ಚಿಂತೆ. ಹೀಗಿರುವಾಗ ದೇಹಕ್ಕೆ ವಿರಾಮ ಬೇಕು. ನಿಮಗಾಗಿಯೇ ಒಂದಿಷ್ಟು ಸಮಯಬೇಕು. ಹಾಗಾಗಿ ದಿನನಿತ್ಯ ವಾಯುವಿಹಾರ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ರೋಗದಿಂದಲೂ ದೂರವಿರಬಹುದು. ಜತೆಗೆ ಬೇಡದ ಚಿಂತೆಗಳನ್ನು ಹೊಡೆದೋಡಿಸಬಹುದು. 

ಪ್ರತಿನಿತ್ಯ ಅರ್ಧಗಂಟೆ ವಾಯುವಿಹಾರ ಮಾಡುವುದನ್ನು ರೂಢಿಯಲ್ಲಿಟ್ಟುಕೊಂಡರೆ ಹೃದಯ ಸಂಬಂಧಿತ ಸಮಸ್ಯೆಗಳಿಂದ ದೂರವಿರಬಹುದು. ಹಾಗೂ ದೇಹದ ಫಿಟ್​ನೆಸ್​​ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ಕೊರೊನಾ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಜೀವನ ಶೈಲಿ ಬಹಳಷ್ಟು ಬದಲಾಗಿದೆ. ಲಾಕ್​ಡೌನ್​ ಜಾರಿಯಲ್ಲಿದೆ ಹೀಗಿರುವಾಗ ಅನಗತ್ಯವಾಗಿ ಹೊರಗಡೆ ಹೋಗುವಂತಿಲ್ಲ ಎಂದಾದರೆ ನೀವು ನಿಮ್ಮ ಮನೆಯಲ್ಲಿಯೇ ವಾಯುವಿಹಾರ ಮಾಡಬಹುದು. ಮನೆಯ ಅಂಗಳದಲ್ಲಿ ಸುಮಾರು 20ರಿಂದ ಅರ್ಧಗಂಟೆವರೆಗೆ ನಡೆಯುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ಇದಕ್ಕಿಂತಲೂ ಸುಭದ ದಾರಿ ಇಲ್ಲ.

ನೀವು ಪ್ರತಿನಿತ್ಯ ನಡೆಯುವ ಅಭ್ಯಾಸವನ್ನು ಹೊಂದಿದ್ದರೆ ಅದು ಪರಿಧಮನಿಯ ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಶೇ.19ರಷ್ಟು ಅಪಾಯವನ್ನು ಕಡಿಮೆ ಮಾಡುತ್ತದೆ. ನೀವು ಹೆಚ್ಚಿನ ವೇಗದಲ್ಲಿ ನಡೆಯುವ ಅಭ್ಯಾಸ ಹೊಂದಿರುವುದರಿಂದ ಅಪಾಯದ ಅವಕಾಶವನ್ನು ಇನ್ನೂ ಕಡಿಮೆ ಮಾಡಿಕೊಳ್ಳಬಹುದು. ದಿನನಿತ್ಯ ನಡೆಯುವ ಅಭ್ಯಾಸ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಸಂಶೋಧನೆಯ ಪ್ರಕಾರ, 15 ನಿಮಿಷಗಳ ನಡಿಗೆಯು ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

ಪ್ರತಿನಿತ್ಯ ನಡೆಯುವುದರಿಂದ ಸೊಂಟ, ಮೊಣಕಾಲು ನೋವು, ಕೀಲು ನೋವುಗಳಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುಬಹುದು. ಸ್ನಾಯುಗಳನ್ನು ಹೆಚ್ಚು ಬಲಪಡಿಸುತ್ತದೆ. ಮಾನಸಿಕ ನೆಮ್ಮದಿ ಮತ್ತು ಬೇಡದ ಚಿಂತೆಗಳಿಂದ ದೂರವಿರಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ದಿನವೂ ನಡೆಯುವುದನ್ನು ಅಭ್ಯಾಯಾಸದಲ್ಲಿಟ್ಟುಕೊಳ್ಳಬೇಕು. ಒಳ್ಳೆಯ ಗಾಳಿಯ ಸೇವನೆಯಿಂದ ಕೆಮ್ಮು, ಶೀತದಂತಹ ಕಾಯಿಲೆಗಳು ಬಹುಬೇಗ ವಾಸಿಯಾಗುತ್ತದೆ. ಹಾಗೂ ಪ್ರತಿನಿತ್ಯ 30ರಿಂದ 45 ನಿಮಿಷಗಳ ಕಾಲ ನಡೆಯುವ ರೂಢಿಯಲ್ಲಿರುವವರಿಗೆ ಅನಾರೋಗ್ಯದ ಸಮಸ್ಯೆ ಕಾಡುವುದು ಕಡಿಮೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ತೂಕ ನಿಯಂತ್ರಣ ಮಾಡಿಕೊಳ್ಳಲು ವಾಯುವಿಹಾರ ಅತ್ಯಂತ ಉತ್ತಮ ಮಾರ್ಗವಾಗಿದೆ. ಪ್ರತಿನಿತ್ಯ 30 ರಿಂದ 50 ನಿಮಿಷಗಳ ಕಾಲ ನಡೆಯುವುದರಿಂದ ದೇಹದಲ್ಲಿನ ಬೊಜ್ಜಿನ ಅಂಶ ಕರಗುತ್ತದೆ. ಮತ್ತು ಸೋಮಾರಿತನ ನಿಮ್ಮಿಂದ ದೂರವಾಗುತ್ತದೆ. ನಿಮ್ಮ ಮನಸ್ಥಿತಿಯನ್ನು ಸುಧಾರಿಸಿಕೊಳ್ಳಲು ಜತೆಗೆ ದೇಹದ ಸುಸ್ತು, ಮಾನಸಿಕ ಚಿಂತೆಯಿಂದ ದೂರವಾಗಲು ಪ್ರತಿನಿತ್ಯ ನಡೆಯುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ:

Health Tips: ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಒಂದಷ್ಟು ಮನೆ ಮದ್ದುಗಳು

Health Tips: ಕೊರೊನಾ ಸೋಂಕಿನಿಂದ ಹೊರಬಂದರೂ ಆಯಾಸವಿದೆಯೇ? ನಿಮ್ಮ ಆಹಾರ ಕ್ರಮ ಹೀಗಿರಲಿ

Published On - 3:15 pm, Sun, 23 May 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ