Health Tips: ಕೊರೊನಾ ಸೋಂಕಿನಿಂದ ಹೊರಬಂದರೂ ಆಯಾಸವಿದೆಯೇ? ನಿಮ್ಮ ಆಹಾರ ಕ್ರಮ ಹೀಗಿರಲಿ
ಕೊರೊನಾ ಸೋಂಕಿನಿಂದ ಹೊರಬಂದರೂ ಕೂಡಾ ದೇಹದಲ್ಲಿ ಸುಸ್ತು, ಆಯಾಸ ಕಂಡುಬರುತ್ತಿದೆ ಎಂದಾದರೆ ನಿಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ.
ಕೊರೊನಾ ಸೋಂಕು ದೇಹಕ್ಕೆ ಸಾಕಷ್ಟು ಸುಸ್ತು, ಆಯಾಸವನ್ನು ಉಂಟು ಮಾಡುತ್ತದೆ. ಹೀಗಿರುವಾಗ ಆರೋಗ್ಯದ ಸುರಕ್ಷತೆಗೆ ಪ್ರೋಟೀನ್ಯುಕ್ತ ಆಹಾರದ ಜೊತೆಗೆ ಹೆಚ್ಚು ನೀರು ಕುಡಿಯುವುದು ಉತ್ತಮ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರೋಟೀನ್, ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಇನ್ಫ್ಲೆಮೇಟರಿಗಳಿಂದ ಕೂಡಿದ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಲು ಸಾಧ್ಯ.
Follow us
ಕೊರೊನಾ ಸೋಂಕು ದೇಹಕ್ಕೆ ಸಾಕಷ್ಟು ಸುಸ್ತು, ಆಯಾಸವನ್ನು ಉಂಟು ಮಾಡುತ್ತದೆ. ಹೀಗಿರುವಾಗ ಆರೋಗ್ಯದ ಸುರಕ್ಷತೆಗೆ ಪ್ರೋಟೀನ್ಯುಕ್ತ ಆಹಾರದ ಜೊತೆಗೆ ಹೆಚ್ಚು ನೀರು ಕುಡಿಯುವುದು ಉತ್ತಮ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರೋಟೀನ್, ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಇನ್ಫ್ಲೆಮೇಟರಿಗಳಿಂದ ಕೂಡಿದ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಲು ಸಾಧ್ಯ.
ಕೊರೊನಾ ವೈರಸ್ ಎಷ್ಟು ಭೀಕರವಾಗಿದೆ. ಒಬ್ಬರಿಂದ ಒಬ್ಬರಿಗೆ ವ್ಯಾಪಕವಾಗಿ ಹರಡುತ್ತಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಜತೆಗೆ ನಮಗೆ ವೈರಸ್ ತಗುಲದಂತೆ ನಾವು ಹೇಗೆ ಮುನ್ನೆಚ್ಚರಿಕೆವಹಿಸಬೇಕು ಎಂಬುದನ್ನು ತಿಳಿಯಬೇಕಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ವೈದ್ಯರು, ಪ್ರೋಟೀನ್, ಜೀವತ್ವಗಳು ಜತೆಗೆ ಖನಿಜಾಂಶದಿಂದ ಕೂಡಿರುವ ಆಹಾರ ಪದಾರ್ಥವನ್ನು ಸೇವಿಸುವಂತೆ ಸೂಚಿಸುತ್ತಿದ್ದಾರೆ. ನೀವು ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದರೆ ನಿಮ್ಮ ಆಹಾರ ಕ್ರಮ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ.
ತಾಜಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಫೈಬರ್,ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುತ್ತವೆ. ಸೋಂಕಿನ ವಿರುದ್ಧ ಹೋರಾಡಲು ಜತೆಗೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವುಗಳಲ್ಲಿ ಪಪ್ಪಾಯ, ಸ್ಟ್ರಾಬೆರಿ, ಕಿತ್ತಳೆ ಹಾಗೂ ವಿಟಮಿನ್ ಸಿ ತುಂಬಿದ ಇತರ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ಚೇತರಿಸಿಕೊಳ್ಳಲು ಸಹಾಯಕವಾಗುತ್ತದೆ.
ರೋಗದಿಂದ ಚೇತರಿಸಿಕೊಳ್ಳಬೇಕು ಎಂದಾದಾಗ ನೀವು ಪ್ರೋಟೀನ್ಯುಕ್ತ ಆಹಾರವನ್ನೇ ಸೇವಿಸಬೇಕು. ಇದು ಹಾನಿ ಉಂಟುಮಅಡುವ ರೋಗಗಳ ವಿರುದ್ಧ ಹೋರಾಡುವ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಸಸ್ಯಹಾರಿಗಳಲ್ಲಿ ಹಾಲು-ಮೊಸರು, ದ್ವಿದಳ ಧಾನ್ಯಗಳು, ಸೋಯಾಗಳನ್ನು ಸೇವಿಸಬಹುದು. ಮಾಂಸಹಾರಿಗಳು ತೆಳ್ಳಗಿನ ಮಾಂಸ, ಕೋಳಿ ಮೊಟ್ಟೆ ಮತ್ತು ಮೀನುಗಳನ್ನು ಸೇವಿಸಬಹುದು.
ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೂ ಕಾಯಿಲೆಯಿಂದ ಚೇತರಿಸಿಕೊಳ್ಳಲು ನೀರು ಕುಡಿಯುವುದು ಉತ್ತಮ. ಸಾಮಾನ್ಯ ಜ್ವರವೇ ಆಗಿರಲಿ ಅಥವಾ ಕೊರೊನಾ ಸೋಂಕಿನಷ್ಟು ತೀವ್ರವಾದ ಕಾಯಿಲೆಯೇ ಆಗಿರಲಿ, ಹೆಚ್ಚು ನೀರು ಕುಡಿದಷ್ಟು ಬಹುಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ನೀರೊಂದೇ ಅಲ್ಲದೇ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ, ಹಣ್ಣಿನ ರಸವನ್ನು ಸ್ವೀಕರಿಸಬಹುದು.
ಅನಾರೋಗ್ಯ ಉಂಟಾದಾಗ ಉಪ್ಪು-ಸಕ್ಕರೆಯನ್ನು ಮಿತವಾಗಿ ಬಳಸಿ. ದಿನನಿತ್ಯದ ಬಳಕೆಯಲ್ಲಿ ಅಯೋಡಿಕರಿಸಿದ ಉಪ್ಪನ್ನು ಬಳಸಿ. ಕುಕೀಸ್, ಚಾಕಲೇಟ್ ಮತ್ತು ಕೇಕ್ನಂತಹ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುವ ಆಹಾರ ಪದಾರ್ಥವನ್ನು ಆದಷ್ಟು ತಪ್ಪಿಸಿ.