ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರಿದ ಹಿನ್ನೆಲೆಯಲ್ಲಿ BMTC ಸೇವೆಯನ್ನು ಅವಲಂಬಿಸಿದ್ದ ಬೆಂಗಳೂರಿಗರು ಪರದಾಡುವ ಸ್ಥಿತಿ ಎದುರಾಗಿದೆ. ದುಬಾರಿ ದರ ಕೇಳುತ್ತಿರುವ ಆಟೋ ಹಾಗೂ ಟ್ಯಾಕ್ಸಿ ಗಳಲ್ಲಿ ಹೇಗೆ ಸಂಚರಿಸೋದು ಅನ್ನೋ ಯೋಚನೆಯಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ, ನಗರದ ಬೈಕ್ ರೆಂಟಲ್ ಕಂಪನಿಯಾದ ಬೌನ್ಸ್ ಬೈಕ್ ಸಿಲಿಕಾನ್ ಸಿಟಿ ಮಂದಿಗೆ ನೆರವಿನ ಹಸ್ತ ಚಾಚಿದೆ.
ಹೌದು, BMTC ಬಸ್ ಸೇವೆ ಇಲ್ಲದ ಹಿನ್ನೆಲೆಯಲ್ಲಿ ಬೌನ್ಸ್ ಬೈಕ್ ಸಂಸ್ಥೆ ಉಚಿತ ಸೇವೆ ನೀಡಲು ಮುಂದಾಗಿದೆ. ಹಾಗಾಗಿ, ನಗರದಲ್ಲಿ ಇಂದು ಉಚಿತ ಬೌನ್ಸ್ ಬೈಕ್ ಸೇವೆ ಲಭ್ಯವಿರಲಿದೆ ಎಂದು ಟಿವಿ9ಗೆ ಬೌನ್ಸ್ ಸಿಇಒ ವಿವೇಕ್ ಹೇಳಿದ್ದಾರೆ. ಈ ಮೂಲಕ ಬೆಂಗಳೂರಿಗರ ಸಹಾಯಕ್ಕೆ ಬೌನ್ಸ್ ಸಂಸ್ಥೆ ಮುಂದಾಗಿದೆ.
ಬೌನ್ಸ್ ಸಂಸ್ಥೆ CEO ವಿವೇಕ್
ಸಾರ್..BMTC ಬಸ್ಗಳನ್ನ ಮೆಕ್ಯಾನಿಕ್ಗಳು ಚಲಾಯಿಸುತ್ತಿದ್ದಾರೆ -ಸಾರಿಗೆ ನೌಕರರ ಆರೋಪ
Published On - 10:17 am, Sat, 12 December 20