ಸಿಡಿ ಪ್ರಕರಣದ ಯುವತಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಸಾಧ್ಯತೆ; ನನಗೆ ಸುಸ್ತಾಗ್ತಿದೆ ಎಂದ ಯುವತಿ
ಇತ್ತ ನ್ಯಾಯಾಧೀಶರ ಮುಂದೆ ಕಳೆದ ನಿಮಿಷಗಳಿಂದ ಯುವತಿ ಹೇಳಿಕೆ ನೀಡುತ್ತಿದ್ದಾಳೆ. ವಸಂತನಗರದಲ್ಲಿರುವ ಗುರುನಾನಕ್ ಭವನದಲ್ಲಿ ಯುವತಿ ಹೇಳಿಕೆ ನೀಡುತ್ತಿದ್ದು, ಗುರುನಾನಕ್ ಭವನದ ಮೂರು ದ್ವಾರದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಗೆ ವೈದ್ಯಕೀಯ ತಪಾಸಣೆ ಮಾಡಲು ಬೌರಿಂಗ್ ಆಸ್ಪತ್ರೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೌರಿಂಗ್ ಆಸ್ಪತ್ರೆಯ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿಯವರ ನೇತೃತ್ವದಲ್ಲಿ ವೈದ್ಯಕೀಯ ತಪಾಸಣೆಗೆ ಸಿಬ್ಬಂದಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಸಂತನಗರದಲ್ಲಿರುವ ಗುರುನಾನಕ್ ಭವನದಲ್ಲಿರುವ ವಿಶೇಷ ಕೋರ್ಟ್ ಹಾಲ್ನಲ್ಲಿ ಯುವತಿಯ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದ್ದು, ತದನಂತರ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಸುಮಾರು 2 ಗಂಟೆಗಳ ಕಾಲ ಹೇಳಿಕೆ ದಾಖಲಿಸಿರುವ ಕಾರಣ ಸಂತ್ರಸ್ತೆ ಆರೋಗ್ಯ ಪರಿಸ್ಥಿತಿ ಸರಿ ಇಲ್ಲ ಎಂದು ವಕೀಲರ ಮೂಲಕ ಯುವತಿ ತಿಳಿಸಿದ್ದಾರೆ ಎನ್ನಲಾಗಿದೆ.
ಇತ್ತ ನ್ಯಾಯಾಧೀಶರ ಮುಂದೆ ಕಳೆದ ನಿಮಿಷಗಳಿಂದ ಯುವತಿ ಹೇಳಿಕೆ ನೀಡುತ್ತಿದ್ದಾಳೆ. ವಸಂತನಗರದಲ್ಲಿರುವ ಗುರುನಾನಕ್ ಭವನದಲ್ಲಿ ಯುವತಿ ಹೇಳಿಕೆ ನೀಡುತ್ತಿದ್ದು, ಗುರುನಾನಕ್ ಭವನದ ಮೂರು ದ್ವಾರದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೆಲವೇ ಹೊತ್ತಲ್ಲಿ ಹೇಳಿಕೆ ದಾಖಲು ಪ್ರಕ್ರಿಯೆ ಅಂತ್ಯವಾಗುವ ಸಾಧ್ಯತೆಗಳಿವೆ.
ಬೆಳಗ್ಗೆಯಿಂದ ರೋಚಕ ಬೆಳವಣಿಗೆ ಬೆಂಗಳೂರಿನ ವಸಂತನಗರದಲ್ಲಿರುವ ಗುರುನಾನಕ್ ಭವನದಲ್ಲಿರುವ ವಿಶೇಷ ಕೋರ್ಟ್ ಹಾಲ್ನಲ್ಲಿ ಯುವತಿಯ ಹೇಳಿಕೆ ದಾಖಲು ಮಾಡಿಕೊಳ್ಳಲು ಮಹಿಳಾ ಟೈಪಿಸ್ಟ್ ಜತೆ ಎಸಿಎಂಎಂ ನ್ಯಾಯಾಧೀಶರು ತೆರಳಿದ್ದಾರೆ. ಯುವತಿ ಮೂರು ಗಂಟೆಯ ಹೊತ್ತಿಗೆ ಗುರುನಾನಕ್ ಭವನದಲ್ಲಿರುವ ವಿಶೇಷ ಕೋರ್ಟ್ ಹಾಲ್ನಲ್ಲಿ ಉಪಸ್ಥಿತರಿದ್ದು, ಮಧ್ಯಾಹ್ನ 3 ಗಂಟೆಗೆ ಕಾರಿನಲ್ಲಿ ಸ್ಥಳಕ್ಕೆ ನ್ಯಾಯಾಧೀಶರು ತೆರಳಿದ್ದಾರೆ ಎಂದು ತಿಳಿದುಬಂದಿದೆ. ಕೊವಿಡ್ ಹಿನ್ನೆಲೆಯಲ್ಲಿ ಗುರುನಾನಕ್ ಭವನದಲ್ಲಿ ವಿಶೇಷ ನ್ಯಾಯಾಲಯ ನಿರ್ಮಾಣವಾಗಿತ್ತು. ಈ ಸ್ಥಳಕ್ಕೆ ಹೇಳಿಕೆ ಪಡೆಯಲು ನ್ಯಾಯಾಧೀಶರು ತೆರಳಿದ್ದಾರೆ. ನ್ಯಾಯಾಧೀಶರ ಜತೆ ಮಹಿಳಾ ಟೈಪಿಸ್ಟ್, ಯುವತಿ ಮಾತ್ರ ಉಪಸ್ಥಿತರಿದ್ದಾರೆ. CRPC ಸೆಕ್ಷನ್ 164ರಡಿ ಯುವತಿಯ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಯುವತಿಯಿರುವ ಸ್ಥಳಕ್ಕೇ ತೆರಳಿ ಹೇಳಿಕೆ ಪಡೆಯಲು 24ನೇ ಎಸಿಎಂಎಂ ನ್ಯಾಯಾಧೀಶರು ನಿಶ್ಚಯಿಸಿದ್ದಾರೆ. ಎಸಿಎಂಎಂ ನ್ಯಾಯಾಲಯಕ್ಕೆ ಯುವತಿ ಆಗಮಿಸುತ್ತಾಳೆ ಎಂಬ ನಿರೀಕ್ಷೆ ಮೀರಿ ಕ್ಷಣ ಕ್ಷಣಕ್ಕೂ ಈ ಪ್ರಕರಣ ತಿರುವು ಪಡೆಯುತ್ತಿದೆ.
ಈ ಮೊದಲು ಬೆಳಗ್ಗೆ ಕೋರ್ಟ್ಗೆ ಆಗಮಿಸಿದ್ದ ಯುವತಿಪರ ವಕೀಲ ಜಗದೀಶ್, ‘ನ್ಯಾಯಾಲಯ ಯಾವಾಗ ಹೇಳುತ್ತೋ ಆವಾಗ ಯುವತಿಯನ್ನು ಕರೆದುಕೊಂಡು ಬರುತ್ತೇವೆ. ನ್ಯಾಯಾಲಯ ಕರೆತನ್ನಿ ಅಂದ್ರೆ ಕರೆದುಕೊಂಡು ಬರ್ತಿನಿ. ಸೆಕ್ಯೂರಿಟಿ ಸಿದ್ದತೆಯಾದ ತಕ್ಷಣ ಅನುಮತಿ ಕೊಡಬಹುದು. ಯುವತಿ ಇರೋ ಜಾಗದಲ್ಲಿ ಈಗಾಗಲೇ ಭದ್ರತೆ ಒದಗಿಸಲಾಗಿದೆ. ನ್ಯಾಯಾಲಯ ಅನುಮತಿ ಕೊಟ್ಟ ತಕ್ಷಣ ಕರೆದುಕೊಂಡು ಬರ್ತೀನಿ. ಕಳೆದ 28 ದಿನಗಳಿಂದ ಆಕೆ ಒತ್ತಡದಲ್ಲಿದ್ದರು. ಅವರ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದರು. ವಕೀಲರ ಹೇಳಿಕೆ ಪ್ರಕಾರ ಯುವತಿ 24ನೇ ಎಸಿಎಂಎಂ ಕೋರ್ಟ್ಗೆ ಯುವತಿ ಇಂದೇ ಹಾಜರಾಗುತ್ತಾಳೆ ಎಂದು ಹೇಳಲಾಗಿತ್ತು.
ಮೊದಲು ಕೋರ್ಟ್ನಲ್ಲೇ ಹೇಳಿಕೆ ದಾಖಲು ಮೊದಲು ಸಿಆರ್‌ಪಿಸಿ 164 ಪ್ರಕಾರ ಹೇಳಿಕೆ ದಾಖಲು ಮಾಡುತ್ತೇವೆ. ನಂತರ ಯುವತಿಯ ಹೇಳಿಕೆ ಪಡೆಯುತ್ತೇವೆ. ಹೇಳಿಕೆ ಪಡೆದ ಬಳಿಕ ತನಿಖಾಧಿಕಾರಿಗೆ ಒಪ್ಪಿಸುತ್ತೇವೆ ಎಂದು ಸಿಡಿ ಪ್ರಕರಣದ ವಿಚಾರಣೆ ವೇಳೆ 24ನೇ ಎಸಿಎಂಎಂ ನ್ಯಾಯಾಧೀಶರು ಸೂಚಿಸಿದ್ದರು. ಈ ವೇಳೆ ಕೋರ್ಟ್ನಲ್ಲಿ ಯುವತಿ ಹೇಳಿಕೆ ದಾಖಲಿಸಲು ಯಾವುದೇ ರೀತಿಯ ಆಕ್ಷೇಪ ವ್ಯಕ್ತವಾಗಿರಲಿಲ್ಲ.
ಎಸ್ಐಟಿ ಹಾಗೂ ತನಿಖಾಧಿಕಾರಿ ಮೇಲೆ ಸಂತ್ರಸ್ಥೆಗೆ ನಂಬಿಕೆ ಇಲ್ಲ ಎಂದು ವಕೀಲ ಜಗದೀಶ್ ವಾದಿಸಿದ್ದರು. ಇದೇ ವೇಳೆ ತನಿಖಾಧಿಕಾರಿ ಕವಿತಾ ಅವರು, ‘ನಾವು ಇದುವರೆಗೂ ಯುವತಿಯ ಮುಖ ನೋಡಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವೇಳೆ ಮೊದಲು ಯುವತಿಯ ಹೇಳಿಕೆ ಪಡೆಯುತ್ತೇವೆ, ನಂತರ ತನಿಖಾಧಿಕಾರಿಗಳು ಮುಂದಿನ ಹೇಳಿಕೆ ಪಡೆಯಲಿ ಎಂದು ನ್ಯಾಯಾಧೀಶರು ಆದೇಶಿಸಿದ್ದರು.
ಇದನ್ನೂ ಓದಿ: ಯುವತಿ ಕೋರ್ಟ್ ಹೇಳಿಕೆ ಹಿನ್ನೆಲೆ: ಕಂಗೆಟ್ಟ ರಮೇಶ್ ಜಾರಕಿಹೊಳಿ ಏಕಾಂಗಿಯಾಗಿ ಕೊಲ್ಹಾಪುರದ ಮಹಾಲಕ್ಷ್ಮಿ ದೇಗುಲದತ್ತ ಪಯಣ