ಕೋಲಾರ: ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಮೆದುಳು ಜ್ವರ ಪತ್ತೆಯಾಗಿದೆ. ಇದು ಸಾಂಕ್ರಮಿಕ ರೋಗವಾಗಿರುವುದರಿಂದ ತಮಗೂ ರೋಗ ಹರಡಬಹುದು ಎಂಬ ಆತಂಕ ಗ್ರಾಮದ ಜನರಲ್ಲಿ ಹೆಚ್ಚಾಗಿದೆ. ಇನ್ನು ಮೆದುಳು ಜ್ವರದ ಪ್ರಕರಣ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಅಲರ್ಟ್ ಆಗಿದೆ. ಅದರಂತೆ ತೊಟ್ಲಿ ಗ್ರಾಮದ 3 ಕಿ.ಮೀ. ವ್ಯಾಪ್ತಿಯಲ್ಲಿ ಹಂದಿ ಸಾಕಣೆ ಮಾಡದಂತೆ ನಿಷೇಧ ಹೇರಲಾಗಿದೆ. ಅಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಾಗೃತಿ ಮೂಡಿಸುತ್ತಿದ್ದು, 1ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಮನವಿ ಮಾಡಿಕೊಳ್ಳುತ್ತಿದೆ. ಅಲ್ಲದೆ ಗ್ರಾಮ ಪಂಚಾಯತಿಯಿಂದ ಶುಚಿತ್ಚ ಕಾಪಾಡುವಂತೆ ಆರೋಗ್ಯ ಇಲಾಖೆಯಿಂದ ಪತ್ರ ಬರೆಯಲಾಗಿದೆ.
ಮೆದುಳು ಜ್ವರ ಅಂದ್ರೆ ಒಂದು ರೀತಿಯ ಮೆದುಳಿನ ಸೋಂಕು. ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸಲಿದೆ. ಮೆದುಳು ಸೋಂಕಿಗೆ ಪ್ರತಿ ವರ್ಷ ಸುಮಾರು 5 ಲಕ್ಷಕ್ಕೂ ಹೆಚ್ಚು ಮಕ್ಕಳು ಹಾಗೂ ವಯಸ್ಕರು ಬಲಿಯಾಗುತ್ತಿದ್ದಾರೆ. ಮೆದುಳು ಜ್ವರದ ಲಕ್ಷಣವು ಭಾರತವನ್ನೂ ಒಳಗೊಂಡಂತೆ ಜಾಗತಿಕವಾಗಿ ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಒಂದು ದೊಡ್ಡ ಸವಾಲಾಗಿ ನಿಂತಿದೆ. ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಅಥವಾ ಸೋಂಕು ದೃಢಪಟ್ಟ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು.
ಮೆದುಳು ಜ್ವರದ ಲಕ್ಷಣಗಳು
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:17 am, Sat, 29 October 22