BJP 2ನೇ ಅವಧಿಯ ಆರಂಭದಲ್ಲೇ ಸುರ್ವಣ ಅಧ್ಯಾಯ ಆರಂಭ -ಯಡಿಯೂರಪ್ಪ

| Updated By:

Updated on: Jun 01, 2020 | 3:02 PM

ಬೆಂಗಳೂರು: ದೇಶದ ಜ್ವಲಂತ ಸಮಸ್ಯೆಗಳಿಗೆ ಇಂದು ಪರಿಹಾರ ಸಾಧ್ಯವಾಗಿದೆ. ಇಂತಹ ಅಭಿಪ್ರಾಯ ದೇಶದ ಜನರಲ್ಲಿ ಬಂದಿದೆ. ಮುಂದಿನ ಚುನಾವಣೆಯಲ್ಲಿ ನನ್ನ ಸರ್ಕಾರದ ಸಾಧನೆಯ ಆಧಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಘೋಷಿಸಿದ್ದರು. ಅದರಂತೆ ಪ್ರಧಾನಿ ಮೋದಿ 5 ವರ್ಷ ನುಡಿದಂತೆ ನಡೆದರು ಎಂದು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ದೇಶದ ಅಭಿವೃದ್ಧಿಗೆ ಮೋದಿ ಹಲವು ಕಾರ್ಯಕ್ರಮ: ದೇಶದ ಅಭಿವೃದ್ಧಿಗೆ ಮೋದಿ ಹಲವು ಕಾರ್ಯಕ್ರಮ ನೀಡಿದ್ದರು. 5 ವರ್ಷದ ಆಡಳಿತದಲ್ಲಿ ಆಯುಷ್ಮಾನ್ ಭಾರತ್, ಜನಧನ್, ಬೇವು ಮಿಶ್ರಿತ ರಸಗೊಬ್ಬರ ಬಳಕೆ, […]

BJP 2ನೇ ಅವಧಿಯ ಆರಂಭದಲ್ಲೇ ಸುರ್ವಣ ಅಧ್ಯಾಯ ಆರಂಭ -ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ದೇಶದ ಜ್ವಲಂತ ಸಮಸ್ಯೆಗಳಿಗೆ ಇಂದು ಪರಿಹಾರ ಸಾಧ್ಯವಾಗಿದೆ. ಇಂತಹ ಅಭಿಪ್ರಾಯ ದೇಶದ ಜನರಲ್ಲಿ ಬಂದಿದೆ. ಮುಂದಿನ ಚುನಾವಣೆಯಲ್ಲಿ ನನ್ನ ಸರ್ಕಾರದ ಸಾಧನೆಯ ಆಧಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಘೋಷಿಸಿದ್ದರು. ಅದರಂತೆ ಪ್ರಧಾನಿ ಮೋದಿ 5 ವರ್ಷ ನುಡಿದಂತೆ ನಡೆದರು ಎಂದು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ದೇಶದ ಅಭಿವೃದ್ಧಿಗೆ ಮೋದಿ ಹಲವು ಕಾರ್ಯಕ್ರಮ:
ದೇಶದ ಅಭಿವೃದ್ಧಿಗೆ ಮೋದಿ ಹಲವು ಕಾರ್ಯಕ್ರಮ ನೀಡಿದ್ದರು. 5 ವರ್ಷದ ಆಡಳಿತದಲ್ಲಿ ಆಯುಷ್ಮಾನ್ ಭಾರತ್, ಜನಧನ್, ಬೇವು ಮಿಶ್ರಿತ ರಸಗೊಬ್ಬರ ಬಳಕೆ, ಸ್ಟಾರ್ಟ್‌ಅಪ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿ ನೀಡಿದ್ದರು. ಮೊದಲ ಅವಧಿಯಲ್ಲಿ ಇಷ್ಟು ಯೋಜನೆಗಳನ್ನು ಕೊಟ್ಟಿದ್ದಾರೆ. ಅಭಿವೃದ್ಧಿಯನ್ನು ಜನರ ಮುಂದಿಟ್ಟು ಪ್ರಧಾನಿ ಮತ ಕೇಳಿದ್ದರು. ಪ್ರಧಾನಿ ಮೋದಿ ಸ್ಥಿರ ಸರ್ಕಾರ ರಚಿಸಲು ಅವಕಾಶ ನೀಡಿದರು.

2ನೇ ಅವಧಿಯಲ್ಲಿ ಸುರ್ವಣ ಅಧ್ಯಾಯ ಆರಂಭ:
ಪ್ರಧಾನಿ ಮೋದಿ ಅಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್.ಮುನಿಯಪ್ಪ, ಹೆಚ್.ಡಿ.ದೇವೇಗೌಡರಂಥವರೇ ಸೋಲನುಭವಿಸಿದರು. ರಾಜ್ಯದಲ್ಲಿ ಬಿಜೆಪಿಯ 25 ಸಂಸದರು ಗೆಲುವು ಸಾಧಿಸಿದರು. ಪ್ರಪಂಚದ ನಾಯಕರಲ್ಲಿ ಮೋದಿ ಅಗ್ರಗಣ್ಯ ನಾಯಕ. 2ನೇ ಅವಧಿಯ ಆರಂಭದಲ್ಲೇ ಸುರ್ವಣ ಅಧ್ಯಾಯ ಆರಂಭವಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಮೋದಿ ಪ್ರಯತ್ನ ಮಾಡಿದರು. ಇದನ್ನು ದೇಶದ ಜನತೆ ಸ್ವಾಗತ ಮಾಡಿದ್ದಾರೆ.

3 ಸೇನೆಗೆ ಒಬ್ಬ ದಂಡ ನಾಯಕರನ್ನು ನೇಮಕ ಮಾಡಿದರು. ಬ್ಯಾಂಕ್‌ಗಳ ಅನಗತ್ಯ ವೆಚ್ಚವನ್ನು ಮೋದಿ ತಪ್ಪಿಸಿದರು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕಾಯ್ದೆ ಜಾರಿಗೆ ತಂದರು. ಮೋದಿ ಹೊಸ ಮೋಟಾರ್ ಕಾಯ್ದೆ ಜಾರಿ ಮಾಡಿದ್ದಾರೆ. ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದರು. ಜಲಸಂರಕ್ಷಣೆಗಾಗಿ ಅಟಲ್ ಭೂ ಜಲ ಯೋಜನೆ ಜಾರಿ. ಅಸಂಘಟಿತ ಕಾರ್ಮಿಕರಿಗಾಗಿ ಪಿಂಚಣಿ ಯೋಜನೆ ಜಾರಿ ಮಾಡಿದ್ದಾರೆ. ಮೊದಲ ವರ್ಷದಲ್ಲಿ ಹಲವು ಯೋಜನೆಗಳನ್ನು ನೀಡಿದ್ದಾರೆ. ಕಲಬುರಗಿ, ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆಗೆ ನೆರವು ನೀಡಿದ್ದಾರೆ.

ಕೊರೊನಾ ಎದುರಿಸುವಲ್ಲಿ ಶಕ್ತರಾಗಿದ್ದೇವೆ:
ಕೊರೊನಾ ಇಡೀ ಮನಕುಲವನ್ನೇ ನಡುಗುವಂತೆ ಮಾಡಿದೆ. ಪ್ರಧಾನಿ ಮೋದಿ ಸಕಾಲಕ್ಕೆ ನಿರ್ಧಾರವನ್ನು ತೆಗೆದುಕೊಂಡರು. ಇದರಿಂದ ಕೊರೊನಾ ಎದುರಿಸುವಲ್ಲಿ ಶಕ್ತರಾಗಿದ್ದೇವೆ. ಮೋದಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಕೊಂಡಾಡಿದೆ. ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದರು. ಆರ್ಥಿಕ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

Published On - 1:22 pm, Mon, 1 June 20