ಗುಡ್ಡದ ತುದಿಯಲ್ಲಿ ನಿಗೂಢ ಟೆಂಟ್ ಪತ್ತೆ, ನಕ್ಸಲರ ಶಂಕೆ?
ಚಿಕ್ಕಮಗಳೂರು: ಗುಡ್ಡದ ತುದಿಯಲ್ಲಿ ಹೈಲಿ ಸೋಫೆಸ್ಟಿಕೇಟೆಡ್ ಶೆಡ್ ಪತ್ತೆಯಾಗಿದ್ದು ನಕ್ಸಲರು ಮಲೆನಾಡನ್ನ ಮತ್ತೆ ತಮ್ಮ ಅಡಗುತಾಣವನ್ನಾಗಿ ಮಾಡಿಕೊಳ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆಮಡಿಲು ಗ್ರಾಮದ ದುರ್ಗದ ಬೆಟ್ಟದ ತುದಿಯಲ್ಲಿ ಶೆಡ್ ಪತ್ತೆಯಾಗಿದೆ. ಈ ಶೆಡ್ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ಥಳೀಯರು ಚಾರಣಕ್ಕೆ ಹೋದಾಗ ಈ ಶೆಡ್ ಪತ್ತೆಯಾಗಿದ್ದು, ಟಾರ್ಪಲ್‍ನಿಂದ ನಿರ್ಮಿಸಿರೋ ಶೆಡ್ ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಶೆಡ್‍ನಲ್ಲಿ ಪೆಟ್ರೋಲ್ ಕ್ಯಾನ್‍ಗಳು, ಕ್ವಾಲಿಟಿ ಹಗ್ಗ, ವಾಟರ್ […]
ಚಿಕ್ಕಮಗಳೂರು: ಗುಡ್ಡದ ತುದಿಯಲ್ಲಿ ಹೈಲಿ ಸೋಫೆಸ್ಟಿಕೇಟೆಡ್ ಶೆಡ್ ಪತ್ತೆಯಾಗಿದ್ದು ನಕ್ಸಲರು ಮಲೆನಾಡನ್ನ ಮತ್ತೆ ತಮ್ಮ ಅಡಗುತಾಣವನ್ನಾಗಿ ಮಾಡಿಕೊಳ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆಮಡಿಲು ಗ್ರಾಮದ ದುರ್ಗದ ಬೆಟ್ಟದ ತುದಿಯಲ್ಲಿ ಶೆಡ್ ಪತ್ತೆಯಾಗಿದೆ. ಈ ಶೆಡ್ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ಥಳೀಯರು ಚಾರಣಕ್ಕೆ ಹೋದಾಗ ಈ ಶೆಡ್ ಪತ್ತೆಯಾಗಿದ್ದು, ಟಾರ್ಪಲ್‍ನಿಂದ ನಿರ್ಮಿಸಿರೋ ಶೆಡ್ ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಶೆಡ್‍ನಲ್ಲಿ ಪೆಟ್ರೋಲ್ ಕ್ಯಾನ್‍ಗಳು, ಕ್ವಾಲಿಟಿ ಹಗ್ಗ, ವಾಟರ್ ಬಾಟಲ್ ಹಾಗೂ ಕುರ್ಚಿಗಳು ಪತ್ತೆಯಾಗಿವೆ. ಹೀಗಾಗಿ ಸ್ಥಳೀಯರು ನಕ್ಸಲರು ಬಂದು ಹೋಗಿರಬಹುದಾ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಮಲೆನಾಡಲ್ಲಿ ಕಳೆದ ಒಂದೆರಡು ವರ್ಷಗಳಿಂದ ನಕ್ಸಲರ ಸಂಖ್ಯೆ ಸಂಪೂರ್ಣ ಕ್ಷೀಣಿಸಿದೆ. ಅವರು ಇರುವಿಕೆಯ ಬಗ್ಗೆಯೂ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ.
ಈಗ ಈ ರೀತಿಯ ಶೆಡ್ ಅದು ಗುಡ್ಡದಲ್ಲಿ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರೋದ್ರ ಜೊತೆ, ನಕ್ಸಲರು ತಮ್ಮ ಸಂಘಟನೆಯನ್ನ ಬಲಪಡಿಸಿಕೊಳ್ತಿದ್ದಾರಾ ಅಥವಾ ಟ್ರೈನಿಂಗ್ ಏನಾದ್ರು ನಡೆಸ್ತಿದ್ದಾರ ಎಂಬ ಅನುಮಾನ ಮೂಡಿದೆ. ಯಾವುದಾದರು ಕೃತ್ಯಕ್ಕೆ ಸಂಚು ರೂಪಿಸಿರಬಹುದಾ ಎಂಬ ಶಂಕೆ ಕೂಡ ಎಲ್ಲರಲ್ಲೂ ಮನೆ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಜಯಪುರ ಪೊಲೀಸರು ಹಾಗೂ ಕೊಪ್ಪ ಸರ್ಕಲ್ ಇನ್ಸ್‍ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸುತ್ತಮುತ್ತಲಿನ ಕಾಫಿ ಎಸ್ಟೇಟ್‍ನವರು ಮೋಜು-ಮಸ್ತಿಗಾಗಿಯೂ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರು ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Published On - 1:55 pm, Mon, 1 June 20