ಹುಟ್ಟುಹಬ್ಬದ ದಿನವೇ ‘ಲಕ್ಕಿ’ ಮನೆಗೆ ಕಾಲಿಡಲಿರುವ ಬಿಎಸ್​ವೈ

|

Updated on: Feb 27, 2020 | 6:56 AM

ಬೆಂಗಳೂರು: ಸುಣ್ಣ-ಬಣ್ಣ ಜೋರಾಗಿದೆ. ಎಲ್ಲಾ ಕಡೆ ಕ್ಲೀನಿಂಗ್. ಶೈನಿಂಗ್. ಕಾರ್ಮಿಕರು ಬ್ಯುಸಿಯಾಗಿದ್ದಾರೆ. ಡಾಂಬರೀಕರಣ ಮಾಡಿದ್ದಾರೆ. ಬ್ಯಾರಿಕೇಡ್​ ಹಾಕಿದ್ದಾರೆ. ಪೊಲೀಸ್ರು ಹದ್ದಿನ ಕಣ್ಣಿಟ್ಟಿದ್ದಾರೆ. ಸಿಎಂ ಬಿಎಸ್​ವೈ ಸ್ವಾಗತಕ್ಕಾಗಿ ಬಂಗಲೆ ಕಳೆಗಟ್ಟಿದೆ. ಹುಟ್ಟುಹಬ್ಬದ ದಿನವೇ ‘ಲಕ್ಕಿ’ ಮನೆಗೆ ‘ರಾಜಹುಲಿ’ ಎಂಟ್ರಿ! ಯೆಸ್.. ಕಾವೇರಿ ನಿವಾಸ. ಮಾಜಿ ಸಿಎಂ ಸಿದ್ದರಾಮಯ್ಯಗೆ ನೆಚ್ಚಿನ ಮನೆ. ಸಿಎಂ ಬಿಎಸ್​​ವೈಗೆ ಲಕ್ಕಿ ಮನೆ. ನಾ ಕೊಡೆ ನೀ ಬಿಡೆ ಅನ್ನೋ ಜಿದ್ದಿಗೆ ಅಂದು ಕಾವೇರಿ ನಿವಾಸ ಸಿಲುಕ್ಕಿತ್ತು. ಬಿಎಸ್​​ವೈ ಸಿಎಂ ಆದ್ಮೇಲೆ ಪಟ್ಟು ಬಿಡದೇ ಸಿದ್ದರಾಮಯ್ಯ […]

ಹುಟ್ಟುಹಬ್ಬದ ದಿನವೇ ‘ಲಕ್ಕಿ’ ಮನೆಗೆ ಕಾಲಿಡಲಿರುವ ಬಿಎಸ್​ವೈ
Follow us on

ಬೆಂಗಳೂರು: ಸುಣ್ಣ-ಬಣ್ಣ ಜೋರಾಗಿದೆ. ಎಲ್ಲಾ ಕಡೆ ಕ್ಲೀನಿಂಗ್. ಶೈನಿಂಗ್. ಕಾರ್ಮಿಕರು ಬ್ಯುಸಿಯಾಗಿದ್ದಾರೆ. ಡಾಂಬರೀಕರಣ ಮಾಡಿದ್ದಾರೆ. ಬ್ಯಾರಿಕೇಡ್​ ಹಾಕಿದ್ದಾರೆ. ಪೊಲೀಸ್ರು ಹದ್ದಿನ ಕಣ್ಣಿಟ್ಟಿದ್ದಾರೆ. ಸಿಎಂ ಬಿಎಸ್​ವೈ ಸ್ವಾಗತಕ್ಕಾಗಿ ಬಂಗಲೆ ಕಳೆಗಟ್ಟಿದೆ.

ಹುಟ್ಟುಹಬ್ಬದ ದಿನವೇ ‘ಲಕ್ಕಿ’ ಮನೆಗೆ ‘ರಾಜಹುಲಿ’ ಎಂಟ್ರಿ!
ಯೆಸ್.. ಕಾವೇರಿ ನಿವಾಸ. ಮಾಜಿ ಸಿಎಂ ಸಿದ್ದರಾಮಯ್ಯಗೆ ನೆಚ್ಚಿನ ಮನೆ. ಸಿಎಂ ಬಿಎಸ್​​ವೈಗೆ ಲಕ್ಕಿ ಮನೆ. ನಾ ಕೊಡೆ ನೀ ಬಿಡೆ ಅನ್ನೋ ಜಿದ್ದಿಗೆ ಅಂದು ಕಾವೇರಿ ನಿವಾಸ ಸಿಲುಕ್ಕಿತ್ತು. ಬಿಎಸ್​​ವೈ ಸಿಎಂ ಆದ್ಮೇಲೆ ಪಟ್ಟು ಬಿಡದೇ ಸಿದ್ದರಾಮಯ್ಯ ಅವರನ್ನ ಕಾವೇರಿ ನಿವಾಸದಿಂದ ಖಾಲಿ ಮಾಡಿಸಿದ್ರು.

ಅದ್ರಲ್ಲೂ ಕಳೆದ ಆರೂವರೆ ವರ್ಷಗಳಿಂದ ಕಾವೇರಿ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದ ಸಿದ್ದು, ಇಷ್ಟದ ಮನೆಯಿಂದ ಒಲ್ಲದ ಮನಸ್ಸಲ್ಲೇ ಹೊರಗೆ ಹೆಜ್ಜೆ ಇಟ್ಟಿದ್ರು. ಆದ್ರೀಗ ಸಿದ್ದು ಕಾವೇರಿ ತೊರೆದು 20 ದಿನಗಳದ್ಮೇಲೆ ಸಿಎಂ ಬಿಎಸ್​ವೈ ಕಾವೇರಿ ನಿವಾಸಕ್ಕೆ ಎಂಟ್ರಿ ಕೊಡಲಿದ್ದಾರೆ. ಇಂದು ಬರ್ತ್​​​ಡೇ ದಿನವೇ ತಮ್ಮ ಲಕ್ಕಿ ಮನೆಗೆ ರಾಜಾಹುಲಿ ಎಂಟ್ರಿ ಕೊಡಲಿದೆ.

ಇವತ್ತು ಕಾವೇರಿ ನಿವಾಸಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಎಂಟ್ರಿ ಕೊಡ್ತಿರೋದ್ರಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾವೇರಿ ನಿವಾಸದ ಕಾಂಪೌಂಡ್​, ಗೇಟ್​ಗಳಿಗೆ ಸುಣ್ಣ ಬಣ್ಣ ಮಾಡಲಾಗಿದೆ. ಗಾರ್ಡನ್, ರಸ್ತೆಗಳಿಗೆ ಟಾರ್ ಹಾಕಿ ನವೀಕರಿಸಲಾಗಿದೆ. ಇವತ್ತು ಸಿಎಂ ಬಿಎಸ್​ವೈ ಕಾವೇರಿ ಬಂಗಲೆ ಪ್ರವೇಶಿಸಿದ ಬಳಿಕ ಬೆಳಗ್ಗೆ ವಿಶೇಷ ಹೋಮ-ಹವನ ನಡೆಸಲಿದ್ದಾರೆ. ಗೃಹ ಪ್ರವೇಶದ ಬಳಿಕ ಡಾಲರ್ಸ್​​ ಕಾಲೋನಿಯ ಧವಳಗಿರಿಯಲ್ಲೇ ಸಿಎಂ ಬಿಎಸ್​​ವೈ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ಕಾವೇರಿ ನಿವಾಸದಿಂದ ತೆರಳಿ ಬಜೆಟ್ ಮಂಡಿಸ್ತಾರಾ ಬಿಎಸ್​ವೈ?
ಇನ್ನು, ಮಾರ್ಚ್​ 5ರಂದು ಸಿಎಂ ಯಡಿಯೂರಪ್ಪ ಬಜೆಟ್​ ಮಂಡಿಸಲಿದ್ದಾರೆ. ಹೀಗಾಗಿ ಬಿಎಸ್​ವೈ ಬಜೆಟ್​ ಮಂಡನೆ ತಯಾರಿಯಲ್ಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಕಾವೇರಿ ನಿವಾಸದಲ್ಲಿನ ಸ್ವಚ್ಛತೆಯ ಕೆಲಸ ಮುಗಿದರೆ, ಕಾವೇರಿ ನಿವಾಸದಿಂದಲೇ ತೆರಳಿ ಬಜೆಟ್ ಮಂಡಿಸಲಿದ್ದಾರೆ. ಇಲ್ಲವೇ ಡಾಲರ್ಸ್ ಕಾಲೋನಿ ನಿವಾಸದಿಂದಲೇ ಬಂದು ಬಜೆಟ್ ಮಂಡಿಸಲಿದ್ದಾರೆ.

ಇನ್ನು, ಅದು ಇದು ಕಾರಣ ನೀಡಿ ಕೊನೆಗೂ ನೆಚ್ಚಿನ ನಿವಾಸ ಕಾವೇರಿಯನ್ನ ಭಾರವಾದ ಮನಸ್ಸಿನಿಂದಲೇ ಸಿದ್ದರಾಮಯ್ಯ ಖಾಲಿ ಮಾಡಿದ್ರು. ಇದೀಗ ಸಿಎಂ ಬಿಎಸ್​​ವೈ ಲಕ್ಕಿ ಮನೆ ಕಾವೇರಿ ನಿವಾಸಕ್ಕೆ ಎಂಟ್ರಿ ಕೊಡಲಿದ್ದಾರೆ. ಇದರ ಜೊತೆಗೆ ಸಿಎಂ ಬಿಎಸ್​​ವೈ ಧವಳಗಿರಿ ನಿವಾಸದಿಂದ ತೆರಳುತ್ತಿದ್ದ ವೇಳೆ ಟ್ರಾಫಿಕ್ ಕಿರಿಕಿರಿ ಅನುಭವಿಸ್ತಿದ್ದ ಜನರು ನಿಟ್ಟುಸಿರು ಬಿಡಲಿದ್ದಾರೆ.