ಬೆಂಗಳೂರು: ಕಸದ ಸಮಸ್ಯೆಕ್ಕೆ ಅಂತ್ಯ ಹಾಡಲು ನಗರಕ್ಕೆ ಇದೀಗ ನರೇಂದ್ರ ಮೋದಿ ಟೀಮ್ ಎಂಟ್ರಿಯಾಗಿದೆ. ಕೋಟಿ ಕೋಟಿ ಖರ್ಚು ಮಾಡಿದ್ರೂ ನಗರದಲ್ಲಿ ಕಸದ ಸಮಸ್ಯೆ ಬಗೆಹರಿಯಲಿಲ್ಲ. ಹೀಗಾಗಿ ಪ್ರಧಾನಿ ಮೋದಿ ಟೀಂ ಬಿಬಿಎಂಪಿಗೆ ಸಾಥ್ ನೀಡಲಿದೆ.
ವಾರಸಿ ಬ್ರದರ್ಸ್ಗೆ ಬೆಂಗಳೂರಿನ ಹೊಣೆ:
ಬೆಂಗಳೂರನ್ನ ಕಸ ಮುಕ್ತ ಮಾಡಲು ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನ ತಂಡದ 43 ಸದಸ್ಯರು ಆಗಮಿಸಿದ್ದು, ಈಗಾಗಲೇ ಹಲವು ರೂಪರೇಷೆಗಳನ್ನ ಸಿದ್ಧಪಡಿಸಿದ್ದಾರೆ. ಈ ಪೈಕಿ ಸಹೋದರರಾದ ಅಸದ್ ವಾರಸಿ ಮತ್ತು ಜಾವೇದ್ ವಾರಸಿಗೆ ಬೆಂಗಳೂರಿನ ಹೊಣೆ ನೀಡಲಾಗಿದೆ.
ಈ ವಾರಸಿ ಬ್ರದರ್ಸ್ ಕನ್ಸಲ್ಟನ್ಸಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದೋರ್ ನಗರಗಳನ್ನ ಕಸ ಮುಕ್ತ ಮಾಡಿ, ಮಾದರಿ ನಗರ ಮಾಡಿರುವ ಹೆಗ್ಗಳಿಕೆ ವಾರಸಿ ಬ್ರದರ್ಸ್ಗಿದೆ. ಇಂದೋರ್ ಕಸದ ಸಮಸ್ಯೆಯಿಂದ ನರಳಾಡುತ್ತಿದ್ದಾಗ, ಕೇಂದ್ರ ಸರ್ಕಾರ ವಾರಸಿ ಬ್ರದರ್ಸ್ ಅನ್ನು ನಿಯೋಜನೆಗೊಳಿಸಿತ್ತು.
ಬೆಂಗಳೂರಿನಲ್ಲಿ ಆಪರೇಷನ್ ಗಾರ್ಬೆಜ್:
ಇದೀಗ ಬೆಂಗಳೂರಿನಲ್ಲಿ ಆಪರೇಷನ್ ಗಾರ್ಬೆಜ್ ಶುರುಮಾಡಲಿರುವ ವಾರಸಿ ಬ್ರದರ್ಸ್, 8 ತಿಂಗಳಲ್ಲಿ ಬೆಂಗಳೂರನ್ನ ಕಸ ಮುಕ್ತಮಾಡುವ ಗುರಿ ಹೊಂದಿದ್ದಾರೆ. ಈಗಾಗಲೇ ಬೆಂಗಳೂರಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಿರುವ ವಾರಸಿ ಟೀಮ್, ಜನವರಿ ತಿಂಗಳಲ್ಲಿ ಅಧಿಕೃತವಾಗಿ ಕೆಲಸ ಪ್ರಾರಂಭಿಸುವ ಸಾಧ್ಯತೆಯಿದೆ.
Published On - 7:37 am, Fri, 29 November 19