ಹಳ್ಳಕ್ಕೆ ಉರುಳಿದ ಕಾರು, ಬೆಂಗಳೂರು ಹೆಬ್ಬಾಳದ ಮೂವರ ಸಾವು

|

Updated on: Oct 25, 2019 | 4:28 PM

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಬಳಿ ಹಳ್ಳಕ್ಕೆ ಉರುಳಿದ ಕಾರು, ಮೂವರು ಮೃತಪಟ್ಟಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತಪಟ್ಟ ಮೂವರೂ ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಉರುಳಿಬಿದ್ದಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತಪಟ್ಟವರು ಯಶೋಧಾ (82), ಅನಿರುದ್ಧ್ (29) ಮತ್ತು ಪ್ರಕಾಶ್ ನರಸಿಂಹ ರಾವ್ (61) ಎಂದು ತಿಳಿದುಬಂದಿದೆ. ನರಸಿಂಹ, ಅನುರೂಪ (19) ಗಾಯಾಳುಗಳು ಎಂದು […]

ಹಳ್ಳಕ್ಕೆ ಉರುಳಿದ ಕಾರು, ಬೆಂಗಳೂರು ಹೆಬ್ಬಾಳದ ಮೂವರ ಸಾವು
Follow us on

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಬಳಿ ಹಳ್ಳಕ್ಕೆ ಉರುಳಿದ ಕಾರು, ಮೂವರು ಮೃತಪಟ್ಟಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತಪಟ್ಟ ಮೂವರೂ ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಉರುಳಿಬಿದ್ದಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮೃತಪಟ್ಟವರು ಯಶೋಧಾ (82), ಅನಿರುದ್ಧ್ (29) ಮತ್ತು ಪ್ರಕಾಶ್ ನರಸಿಂಹ ರಾವ್ (61) ಎಂದು ತಿಳಿದುಬಂದಿದೆ. ನರಸಿಂಹ, ಅನುರೂಪ (19) ಗಾಯಾಳುಗಳು ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರಿನ ಹೆಬ್ಬಾಳದವರು.

Published On - 4:23 pm, Fri, 25 October 19