ಮೈಸೂರು: ಬೆಕ್ಕು ನಾಪತ್ತೆಯಾದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದ್ದು, ಬೆಕ್ಕನ್ನು ಯುವಕನೊಬ್ಬ ಎತ್ತಿಕೊಂಡು ಹೋದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇವರಾಜ ಅರಸು ರಸ್ತೆಯ ಬಾಟ ಶೋರೂಂನಲ್ಲಿದ್ದ ಸೃಷ್ಟಿ ಎಂಬ ಬೆಕ್ಕನ್ನು ನೋಡಿದ ಯುವಕನೊಬ್ಬ ಅದರ ಹತ್ತಿರ ಹೋಗಿ ಕರೆಯುತ್ತಾನೆ. ನಂತರ ಅದನ್ನು ಎತ್ತಿಕೊಂಡು ಹೋಗುವುದು ಸಿಸಿಕ್ಯಾಮಾರದಲ್ಲಿ ಸೆರೆಯಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಸೃಷ್ಟಿ ಹೆಸರಿನ ಬೆಕ್ಕು ಆ.4ರಂದು ಮೈಸೂರಿನ ದೇವರಾಜ ಅರಸು ರಸ್ತೆಯ ಬಾಟ ಶೋರೂಂನಿಂದ ರಾತ್ರಿ ಬೆಕ್ಕು ನಾಪತ್ತೆಯಾಗಿದೆ. ಬೆಕ್ಕನ್ನು ಹುಡುಕಿ ಕೊಟ್ಟವರಿಗೆ 5 ಸಾವಿರ ಬಹುಮಾನ ನೀಡುವುದಾಗಿ ನಾಚಪ್ಪ ಎಂಬವರು ಘೋಷಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬೆಕ್ಕಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಬೆಕ್ಕನ್ನು ಪತ್ತೆಹಚ್ಚಿದರೆ ಕರೆಮಾಡುವಂತೆ ಸೂಚಿಸಿ ಮೊಬೈಲ್ ನಂಬರ್ ಕೂಡ ಹಂಚಿಕೊಂಡಿದ್ದರು. ಈ ಫೋಟೋ ವೈರಲ್ ಆಗಿದ್ದು, ಇದೀಗ ಬೆಕ್ಕನ್ನು ಯುವಕನೊಬ್ಬ ಎತ್ತಿಕೊಂಡಿ ಹೋಗಿರುವುದು ತಿಳಿದುಬಂದಿದೆ.
ಜಾಧವ ನಗರದಲ್ಲಿ ಚಿರತೆ ಪ್ರತ್ಯಕ್ಷ
ಬೆಳಗಾವಿ: ಜಿಲ್ಲೆಯ ಜಾಧವ ನಗರದಲ್ಲಿ ಚಿರತೆ ಪ್ರತ್ಯಕ್ಷಗೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅದರಂತೆ ಅಧಿಕಾರಿಗಳು ಬೋನಿನಲ್ಲಿ ನಾಯಿಯನ್ನು ಇಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾರ್ಮಿಕ ಸಿದ್ದರಾಯಿ ಎಂಬುವರ ಮೇಲೆ ದಾಳಿ ಬಳಿಕ ಚಿರತೆ ಮರೆಯಾಗಿತ್ತು. ಇದೀಗ ಶುಕ್ರವಾರ ಮಧ್ಯಾಹ್ನ 12.26ರ ಸುಮಾರಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆ ಚಲನವಲನ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ನಿರಂತರ ಕಾರ್ಯಾಚರಣೆ ನಡುವೆಯೂ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿಲ್ಲ. ಅದಾಗ್ಯೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮುಂಜಾಗ್ರತಾ ಕ್ರಮವಾಗಿ ಅನವಶ್ಯಕವಾಗಿ ಯಾರೂ ಓಡಾಡದಂತೆ ಹಾಗೂ ಮಕ್ಕಳನ್ನು ಮನೆಯಿಂದ ಹೊರಬಿಡದಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಗುಡ್ಡಗಾಡಿನಲ್ಲಿ 2 ಚಿರತೆಗಳು ಪ್ರತ್ಯಕ್ಷ
ಬಳ್ಳಾರಿ: ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದು, ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ ಆರಂಭಗೊಂಡಿದೆ. ಜಿಲ್ಲೆಯ ಇನ್‌ಫ್ಯಾಂಟ್ರಿ ರಸ್ತೆಯ ದಯಾ ಕೇಂದ್ರದ ಬಳಿಯ ಗುಡ್ಡ ಪ್ರದೇಶದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿವೆ. ಕಳೆದ ಒಂದು ವಾರದಿಂದ ಚಿರತೆಗಳು ಗುಡ್ಡದಂಚಿನಲ್ಲಿ ಓಡಾಡುತ್ತಿದ್ದು, ಜನರು ಭಯಬೀತರಾಗಿದ್ದಾರೆ. ಅಲ್ಲದೆ ಕೂಡಲೇ ಚಿರತೆಗಳನ್ನು ಸೆರೆಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅದರಂತೆ ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರೆದಿದೆ.
ಮತ್ತಷ್ಟು ಕ್ರೈಂ ಸಿದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Sat, 6 August 22