ಅನರ್ಹ ಶಾಸಕರ ವಿರುದ್ಧ ಬಹುದೊಡ್ಡ ಆರೋಪ! NIA ಕೋರ್ಟ್​ನಲ್ಲೂ ದೂರು ದಾಖಲಾಯ್ತು, ಯಾಕೆ?

ಬೆಂಗಳೂರು: ದೇಶದ್ರೋಹದ ಆರೋಪದ ಮೇಲೆ 17 ಅನರ್ಹ ಶಾಸಕರ ವಿರುದ್ಧ NIA ಕೋರ್ಟ್​ನಲ್ಲಿ ದೂರು ದಾಖಲಾಗಿದೆ. ಅಪರೇಷನ್ ಕಮಲಕ್ಕೆ ಸಾವಿರಾರು‌ ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿ ಹಿರಿಯ ವಕೀಲ ಬಾಲನ್ ಎಂಬುವರು ಖಾಸಗಿ ದೂರು ನೀಡಿದ್ದಾರೆ. 17 ಅನರ್ಹ ಶಾಸಕರು ಅಕ್ರಮ ಹಣ ಪಡೆದು ಬಿಜೆಪಿಗೆ ಸೇರಿದ್ದಾರೆ. ಆಪರೇಷನ್ ಕಮಲಕ್ಕೆ ಅಕ್ರಮ ಹಣ ಬಳಕೆ ಮಾಡಲಾಗಿದೆ. ಈ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಯಬೇಕು. ಅನರ್ಹ ಶಾಸಕರಿಂದ ಸರ್ಕಾರ ಬಂತು ಎಂದು […]

ಅನರ್ಹ ಶಾಸಕರ ವಿರುದ್ಧ ಬಹುದೊಡ್ಡ ಆರೋಪ! NIA ಕೋರ್ಟ್​ನಲ್ಲೂ ದೂರು ದಾಖಲಾಯ್ತು, ಯಾಕೆ?

Updated on: Nov 25, 2019 | 1:00 PM

ಬೆಂಗಳೂರು: ದೇಶದ್ರೋಹದ ಆರೋಪದ ಮೇಲೆ 17 ಅನರ್ಹ ಶಾಸಕರ ವಿರುದ್ಧ NIA ಕೋರ್ಟ್​ನಲ್ಲಿ ದೂರು ದಾಖಲಾಗಿದೆ. ಅಪರೇಷನ್ ಕಮಲಕ್ಕೆ ಸಾವಿರಾರು‌ ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿ ಹಿರಿಯ ವಕೀಲ ಬಾಲನ್ ಎಂಬುವರು ಖಾಸಗಿ ದೂರು ನೀಡಿದ್ದಾರೆ.

17 ಅನರ್ಹ ಶಾಸಕರು ಅಕ್ರಮ ಹಣ ಪಡೆದು ಬಿಜೆಪಿಗೆ ಸೇರಿದ್ದಾರೆ. ಆಪರೇಷನ್ ಕಮಲಕ್ಕೆ ಅಕ್ರಮ ಹಣ ಬಳಕೆ ಮಾಡಲಾಗಿದೆ. ಈ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಯಬೇಕು. ಅನರ್ಹ ಶಾಸಕರಿಂದ ಸರ್ಕಾರ ಬಂತು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಹಣದ ಮೂಲ ತನಿಖೆ ನಡೆಯಲಿ: 
ಅನರ್ಹ ಶಾಸಕರು ಬಿಜೆಪಿ ಸೇರಿದ ಕೂಡಲೇ ಮಂತ್ರಿಗಳು ಎಂದು ಯಡಿಯೂರಪ್ಪ ಹೇಳಿದ್ದಾರೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಶಕ್ತಿಗಳಿಂದ ಹಣ ಬರುತ್ತಿದೆ ಎಂಬ ಆರೋಪವಿದೆ. ಹೀಗಾಗಿ ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕು ಎಂದು ವಕೀಲ ಬಾಲನ್ ಖಾಸಗಿ ದೂರು ದಾಖಲಿಸಿದ್ದಾರೆ.

Published On - 12:57 pm, Mon, 25 November 19