ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಜುಲೈ ತಿಂಗಳಲ್ಲಿ ಅಪಘಾತಗಳಿಂದ ಸಾವಿನ ಸಂಖ್ಯೆ ಇಳಿಕೆ -ಎಡಿಜಿಪಿ ಅಲೋಕ್ ಕುಮಾರ್

|

Updated on: Aug 04, 2023 | 5:34 PM

ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಪ್ರಕಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮಾರ್ಗದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಿಂದ ಮೇ ಮತ್ತು ಜೂನ್‌ನಲ್ಲಿ ತಿಂಗಳುಗಳಲ್ಲಿ ಅನುಕ್ರಮವಾಗಿ 29 ಮತ್ತು 28 ಸಾವುಗಳು ವರದಿಯಾಗಿವೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಜುಲೈ ತಿಂಗಳಲ್ಲಿ ಅಪಘಾತಗಳಿಂದ ಸಾವಿನ ಸಂಖ್ಯೆ ಇಳಿಕೆ -ಎಡಿಜಿಪಿ ಅಲೋಕ್ ಕುಮಾರ್
ಜುಲೈ ತಿಂಗಳಲ್ಲಿ ಅಪಘಾತಗಳಿಂದ ಸಾವಿನ ಸಂಖ್ಯೆ ಇಳಿಕೆ -ಎಡಿಜಿಪಿ ಅಲೋಕ್ ಕುಮಾರ್
Follow us on

ಬೆಂಗಳೂರು, ಆಗಸ್ಟ್​ 4: ಜುಲೈನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru Mysuru Expressway) ಸಂಭವಿಸಿದ ರಸ್ತೆ ಅಪಘಾತಗಳಿಂದ ಸಾವನ್ನಪ್ಪಿದವರ ಸಂಖ್ಯೆ (casualties and deaths) ಜೂನ್ 28 ಇದ್ದಿದ್ದು ಜುಲೈನಲ್ಲಿ 8 ಕ್ಕೆ ಇಳಿದಿದೆ ಎಂದು ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ. ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರು (Karnataka ADGP Alok Kumar) ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ಕುರಿತಾದ ಡೇಟಾವನ್ನು ಹಂಚಿಕೊಂಡಿದ್ದಾರೆ. ಪೊಲೀಸರ ಪೂರ್ವಭಾವಿ ಪ್ರಯತ್ನಗಳ ಮೂಲಕ ಸಾವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಆ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರ ಪೂರ್ವಭಾವಿ ಪ್ರಯತ್ನಗಳಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಇನ್ನೂ ಕಡಿಮೆಯಾಗಿದ್ದು, ಜುಲೈ 23 ರ ವೇಳೆಗೆ 8 ಕ್ಕೆ ಇಳಿದಿದೆ. ಜುಲೈ ತಿಂಗಳಿನಲ್ಲಿ ಹೈವೇಯಲ್ಲಿ ಸಾವಿನ ಸಂಖ್ಯೆ ಕೇವಲ 8ಕ್ಕೆ ಇಳಿದಿದೆ. ರಾಮನಗರ ವ್ಯಾಪ್ತಿಯಲ್ಲಿ 3, ಮಂಡ್ಯದ ವ್ಯಾಪ್ತಿಯಲ್ಲಿ ಐವರು ಸಾವಿಗೀಡಾಗಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಮ್ಮ ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮೇ ತಿಂಗಳಲ್ಲಿ ಎಕ್ಸ್‌ಪ್ರೆಸ್‌ವೇಯಲ್ಲಿ 29 ಸಾವುಗಳು ವರದಿಯಾಗಿವೆ ಎಂದು ಕುಮಾರ್ ಹೇಳಿದರು. “ಅತಿಯಾದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡಕ್ಕೆ ಅಭಿನಂದನೆಗಳು. ಸಾವುಗಳನ್ನು ಒಂದು ಅಂಕೆಗೆ ಇಳಿಸುವ ಅಗತ್ಯವಿದೆ” ಎಂದು ಅಧಿಕಾರಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು 118 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ಅಂದಿನಿಂದ ಮತ್ತು ಉದ್ಘಾಟನೆಗೆ ಮುಂಚೆಯೇ ಎಕ್ಸ್‌ಪ್ರೆಸ್‌ವೇ ಭಾಗಶಃ ತೆರೆದಾಗ ರಸ್ತೆ ಅಪಘಾತಗಳು ಆಗಾಗ್ಗೆ ಹೆಚ್ಚಾಗಿಯೇ ವರದಿಯಾಗುತ್ತಿವೆ.

ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷದ ಜನವರಿಯಿಂದ ಎಕ್ಸ್‌ಪ್ರೆಸ್‌ವೇಯಲ್ಲಿ 296 ಅಪಘಾತಗಳು ಮತ್ತು 132 ಸಾವುಗಳು ಸಂಭವಿಸಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆಗಸ್ಟ್ 1 ರಿಂದ ಎಕ್ಸ್‌ಪ್ರೆಸ್‌ವೇ ಮುಖ್ಯ ಮಾರ್ಗದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಟ್ರಾಕ್ಟರ್‌ಗಳು, ಆಟೋರಿಕ್ಷಾಗಳು ಮತ್ತು ಮೋಟಾರುರಹಿತ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

ಜುಲೈ 28 ರಂದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾಗಳ ಪ್ರಾಯೋಗಿಕ ಚಾಲನೆಯನ್ನು ನಡೆಸಲಾಯಿತು. ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುವ ವಾಹನಗಳ ವೇಗವನ್ನು ಕ್ಯಾಮೆರಾಗಳು ಪತ್ತೆ ಮಾಡುತ್ತವೆ. ಅವು ಅತಿ ವೇಗ ಮತ್ತು ಸೀಟ್ ಬೆಲ್ಟ್ ಧರಿಸದಂತಹ ಉಲ್ಲಂಘನೆಗಳನ್ನು ಸಹ ಸೆರೆಹಿಡಿಯುತ್ತವೆ.

ಎಡಿಜಿಪಿ ಅಲೋಕ್ ಕುಮಾರ್ ಸಾಮಾಜಿಕ ಜಾಲತಾಣ ಪೋಸ್ಟ್​ ವಿವರ ಹೀಗಿದೆ:

ಪೊಲೀಸರ ಪೂರ್ವಭಾವಿ ಪ್ರಯತ್ನಗಳಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತದಿಂದ ಸಾವಿನ ಸಂಖ್ಯೆ ಜುಲೈ 23 ರಲ್ಲಿ 8 ಕ್ಕೆ ಇಳಿದಿದೆ.

ಮೇ -29 ಸಾವುಗಳು ಜೂನ್ -28 ಸಾವುಗಳು

ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ

ನಮ್ಮ ಅಧಿಕಾರಿಗಳು ಮತ್ತು ಪುರುಷರ ತಂಡಕ್ಕೆ ಅಭಿನಂದನೆಗಳು

ಸಾವುಗಳನ್ನು ಒಂದೇ ಅಂಕೆಯಲ್ಲಿ ಇಡಬೇಕು