ಗದಗ: ಮೇಕೆ, ಕುರಿ, ಹಸುಗಳ ಕಳ್ಳತನ ಮಾಡುವುದನ್ನು ಸಾಮಾನ್ಯವಾಗಿ ನಾವು ಕೇಳಿದ್ದೇವೆ,ಆದರೆ ಇದೀಗ ಬೆಕ್ಕು ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅವಳಿ ನಗರದಲ್ಲಿ ಸಾಕಿದ ಕಟ್ಟುಮಸ್ತಾದ ಬೆಕ್ಕುಗಳನ್ನು ಕಳ್ಳರು ಹೊತ್ತೋಯ್ಯುತ್ತಿದ್ದಾರೆ. ಸದ್ಯ ಹಗಲು ರಾತ್ರಿ ಎನ್ನದೇ ಕಳ್ಳರ ಗುಂಪೊಂದು ಬೆಕ್ಕುಗಳನ್ನು ಕದಿಯುತ್ತಿರುವ ದೃಶ್ಯ ಈಗ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಬೆಕ್ಕು, ನಾಯಿ, ಆಕಳು ಹೀಗೆ ಪ್ರಾಣಿಪ್ರಿಯರು ಪ್ರೀತಿಯಿಂದ ತಮ್ಮ ಮನೆಗಳಲ್ಲಿ ಪ್ರಾಣಿಗಳನ್ನು ಸಾಕುತ್ತಾರೆ. ಆದರೆ ಪ್ರೀತಿಯಿಂದ ಸಾಕಿದ ಬೆಕ್ಕುಗಳು ಈಗ ಮನೆಯಿಂದ ಮಾಯವಾಗುತ್ತಿದೆ. ಗದಗ-ಬೆಟಗೇರಿ ನಗರದಲ್ಲಿ ಬೆಕ್ಕು ಕಳ್ಳತನದ್ದೇ ಸುದ್ದಿ. ಗದಗ ನಗರದ ಎಸ್ಎಂ ಕೃಷ್ಣಾ ನಗರದ ಶೈನಾಜ್ ಎಂಬ ಮಹಿಳೆ ಪುಟ್ಟ ಮರಿ ಇದ್ದಾಗ ಮನೆಯಲ್ಲೊಂದು ಮುದ್ದಾದ ಬೆಕ್ಕು ಸಾಕಿದ್ದರು. ಪುಟ್ಟ ಮರಿಗೆ ಕಾಟನ್ (ಹತ್ತಿ) ನಿಂದ ಹಾಲು ಕುಡಿಸಿ ಮುದ್ದಾಗಿ ಬೆಳಸಿದ್ದರು. ಈಗ ಆ ಬೆಕ್ಕು ಕಟ್ಟುಮಸ್ತಾಗಿ ಬೆಳೆದಿತ್ತು. ನೋಡುವುದಕ್ಕೆ ಬಲು ಸೊಗಸಾಗಿತ್ತು. ಆದರೆ ಈ ರವಿವಾರ ಮನೆ ಯಜಮಾನರು ಲಕ್ಷ್ಮೇಶ್ವರ ಪಟ್ಟಣದ ದೇವಸ್ಥಾನಕ್ಕೆ ಹೋಗಿದ್ದರು. ವಾಪಸ್ ಬರುವಷ್ಟರಲ್ಲಿ ಮನೆಯಲ್ಲಿದ್ದ ಬೆಕ್ಕು ಮಾಯವಾಗಿದೆ
ಇನ್ನು ಬೆಕ್ಕಿನ ಬಗ್ಗೆ ಮನೆಯ ಅಕ್ಕಪಕ್ಕದ ಜನರಿಗೆ ವಿಚಾರಿಸಿದ್ದಾರೆ. ಬಳಿಕ ಮನೆಯಲ್ಲಿದ್ದ ಸಿಸಿ ಕ್ಯಾಮಾರ ಚೆಕ್ ಮಾಡಿದ್ದಾರೆ. ಆಗಲೇ ಗೊತ್ತಾಗಿದ್ದು, ಸಾಕಿದ ಬೆಕ್ಕು ಕಳ್ಳತನವಾಗಿದೆ ಎಂದು. ಹೌದು ಮೂರು ಜನರ ಕಳ್ಳರ ಗುಂಪೊಂದು ಬೆಕ್ಕು ಹಿಡಿದುಕೊಂಡು ಹೋಗಿದ್ದಾರೆ. ಆದರೆ ಕೋಳಿ, ಮೇಕೆ, ಕುರಿ, ಹಸುಗಳು ಕಳ್ಳತನವಾಗುತ್ತಿರುವ ಈ ಕಾಲದಲ್ಲಿ ಬೆಕ್ಕುಗಳು ಕಳ್ಳತನ ಮಾಡುತ್ತಿರುವುದಾದರೂ ಯಾಕೆ ಎನ್ನುವ ಪ್ರಶ್ನೆ ಕಾಡುತ್ತಾ ಇದೆ. ಕೆಲವರು ಹೇಳುವ ಪ್ರಕಾರ ಬೆಕ್ಕು ವಾಮಾಚಾರಕ್ಕೆ ಬಳಸುತ್ತಿದ್ದಾರೆ ಎನ್ನಲಾಗುತ್ತಿದೆ ಇನ್ನು ಮತ್ತೆ ಕೆಲವರು ಬೆಕ್ಕು ಬೇಟೆಯಾಡಿ ತಿನ್ನುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸಾಕಿದ ಪ್ರಾಣಿಗಳು ಕಳ್ಳತನವಾಗುತ್ತಿರುವುದು ಮಾತ್ರ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:
ಕಳ್ಳತನಕ್ಕೆ ಬಂದು ಸಿಕ್ಕಿ ಬಿದ್ದ ಖದೀಮರಿಗೆ ಧರ್ಮದೇಟು.. ಸ್ವಯಂ ಚಾಕು ಇರಿದುಕೊಂಡು ಅಸ್ವಸ್ಥನಾದ ಕಳ್ಳ