ಬಿಗ್​ಬಾಸ್​ ಮಾಜಿ ಸ್ಪರ್ಧಿ ಸೋನಾಲಿ ಫೋಗಾಟ್ ಮನೆಯಲ್ಲಿ ಕಳ್ಳತನ; ರಿವಾಲ್ವರ್​, ಸಿಸಿಟಿವಿ ಫೂಟೇಜ್​​ನ್ನೂ ಬಿಟ್ಟಿಲ್ಲ ಕಳ್ಳರು

ಸೋನಾಲಿ ಫೋಗಾಟ್​ ಹರ್ಯಾಣಾ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ. ಇದರೊಂದಿಗೆ ದೆಹಲಿ, ಹರ್ಯಾಣ, ಚಂಡೀಘಡ್​, ಪಂಜಾಬ್​ನ ಪರಿಶಿಷ್ಟ ಪಂಗಡ ಮೋರ್ಚಾದ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ.

  • TV9 Web Team
  • Published On - 17:32 PM, 17 Feb 2021
ಬಿಗ್​ಬಾಸ್​ ಮಾಜಿ ಸ್ಪರ್ಧಿ ಸೋನಾಲಿ ಫೋಗಾಟ್ ಮನೆಯಲ್ಲಿ ಕಳ್ಳತನ; ರಿವಾಲ್ವರ್​, ಸಿಸಿಟಿವಿ ಫೂಟೇಜ್​​ನ್ನೂ ಬಿಟ್ಟಿಲ್ಲ ಕಳ್ಳರು
ಸೋನಾಲಿ ಫೋಗಾಟ್​

ಹಿಸಾರ್​: ಬಿಜೆಪಿ ನಾಯಕಿ, ಬಿಗ್​ಬಾಸ್​ 14ರ ಮಾಜಿ ಸ್ಪರ್ಧಿ ಸೋನಾಲಿ ಫೋಗಾಟ್ ಅವರ ಹರ್ಯಾಣಾದ ಹಿಸಾರ್​ನಲ್ಲಿರುವ ​ ಮನೆಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 10 ಲಕ್ಷ ರೂಪಾಯಿ ನಗದು, ಲೈಸೆನ್ಸ್​ ಇರುವ ರಿವಾಲ್ವರ್​, ಎಂಟು ಸಿಡಿಮದ್ದುಗಳು, ಬಂಗಾರ, ಬೆಳ್ಳಿಯ ವಸ್ತುಗಳು, ಆಭರಣ, ಬೆಳ್ಳಿ ಮಡಕೆಯನ್ನು ಕಳ್ಳರು ದೋಚಿದ್ದಾರೆಂದು ಸೋನಾಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಾನು ಚಂಡೀಘಡ್​ಗೆ ಹೋಗಿದ್ದೆ. ಫೆ.15ರಂದು ವಾಪಸ್ ಬರುವಷ್ಟರಲ್ಲಿ ಮನೆಯ ಬೀಗ ಮುರಿದಿತ್ತು. ಪಿಸ್ತೂಲ್​ ಸೇರಿ ಅಮೂಲ್ಯ ವಸ್ತುಗಳೆಲ್ಲ ಕಳವಾಗಿದ್ದವು ಎಂದು ತಿಳಿಸಿದ್ದಾರೆ.

ಸೋನಾಲಿ ಮನೆ ಬಳಿ ಇರುವ ಸಿಸಿಟಿವಿಯನ್ನು ಪರಿಶೀಲನೆ ಮಾಡಲಾಗಿದೆ. ಆದರೆ ಅದರಲ್ಲಿನ​ ಆದ ಡಿಜಿಟಲ್​ ವಿಡಿಯೋ ರೆಕಾರ್ಡರ್​ (DVR)ನ್ನು ಕೂಡ ಕಳ್ಳರು ಹೊತ್ತೊಯ್ದಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರವೇ ಕಳ್ಳರನ್ನು ಪತ್ತೆ ಹಚ್ಚುವುದಾಗಿ ಎಚ್​ಟಿಎಂ ಠಾಣಾಧಿಕಾರಿ ಸುಖ್​ಜಿತ್ ತಿಳಿಸಿದ್ದಾರೆ.

ಇದನ್ನೂ ಓದಿ: ‘ವಾರದಲ್ಲಿ 3ದಿನ ಪತ್ನಿಯೊಂದಿಗಿರಿ..3ದಿನ ಗರ್ಲ್​ಫ್ರೆಂಡ್ ಜತೆಗಿರಿ, 1 ದಿನ ರಜಾ ತೆಗೆದುಕೊಳ್ಳಿ’ -ಇನ್ನೊಬ್ಬಳ ಸಂಗ ಮಾಡಿದವನ ಸಮಸ್ಯೆ ಬಗೆಹರಿಸಿದ ಪೊಲೀಸರು !

ಸೋನಾಲಿ ಫೋಗಾಟ್​ ಹರ್ಯಾಣಾ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ. ಇದರೊಂದಿಗೆ ದೆಹಲಿ, ಹರ್ಯಾಣ, ಚಂಡೀಘಡ್​, ಪಂಜಾಬ್​ನ ಪರಿಶಿಷ್ಟ ಪಂಗಡ ಮೋರ್ಚಾದ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ. 2019ರಲ್ಲಿ ಅದಾಂಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಗೆಲ್ಲಲಿಲ್ಲ. ಸೋನಾಲಿ ರಾಜಕೀಯಕ್ಕೆ ಪ್ರವೇಶ ಮಾಡುವುದಕ್ಕೂ ಮೊದಲು ನಟನೆಯಲ್ಲಿ ತೊಡಗಿಕೊಂಡಿದ್ದರು.