AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಾರದಲ್ಲಿ 3ದಿನ ಪತ್ನಿಯೊಂದಿಗಿರಿ..3ದಿನ ಗರ್ಲ್​ಫ್ರೆಂಡ್ ಜತೆಗಿರಿ, 1 ದಿನ ರಜಾ ತೆಗೆದುಕೊಳ್ಳಿ’ -ಇನ್ನೊಬ್ಬಳ ಸಂಗ ಮಾಡಿದವನ ಸಮಸ್ಯೆ ಬಗೆಹರಿಸಿದ ಪೊಲೀಸರು !

ಆದರೆ..ಅದೇನಾಯಿತೋ ಒಂದಷ್ಟುದಿನಗಳಾದ ಮೇಲೆ ಗರ್ಲ್​ಫ್ರೆಂಡ್​ ಉಲ್ಟಾ ಹೊಡೆದಳು. ರಾಜೇಶ್​ ನನಗೆ ಸುಳ್ಳು ಹೇಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಮತ್ತೆ ಪೊಲೀಸರಿಗೆ ದೂರು ನೀಡಿದಳು.

‘ವಾರದಲ್ಲಿ 3ದಿನ ಪತ್ನಿಯೊಂದಿಗಿರಿ..3ದಿನ ಗರ್ಲ್​ಫ್ರೆಂಡ್ ಜತೆಗಿರಿ, 1 ದಿನ ರಜಾ ತೆಗೆದುಕೊಳ್ಳಿ’ -ಇನ್ನೊಬ್ಬಳ ಸಂಗ ಮಾಡಿದವನ ಸಮಸ್ಯೆ ಬಗೆಹರಿಸಿದ ಪೊಲೀಸರು !
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Feb 17, 2021 | 4:26 PM

ರಾಂಚಿ: ಪತ್ನಿಯಿದ್ದರೂ ಇನ್ನೊಬ್ಬಳ ಸಂಗ ಮಾಡಿದವನ ಪ್ರಕರಣವನ್ನು ಪೊಲೀಸರು ವಿಚಿತ್ರವಾಗಿ ಬಗೆಹರಿಸಿಕೊಟ್ಟು, ಇದೀಗ ಆ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂಥದ್ದೊಂದು ಘಟನೆ ನಡೆದಿದ್ದು ಜಾರ್ಖಂಡದ ರಾಂಚಿಯಲ್ಲಿ. ಇಲ್ಲಿನ ಕೋಕರ್​ ತಿರಿಲ್​ ಏರಿಯಾದ ನಿವಾಸಿ ರಾಜೇಶ್ ಮೆಹತೋ ತನಗೆ ಮದುವೆಯಾಗಿದ್ದರೂ, ಸುಳ್ಳು ಹೇಳಿ ಇನ್ನೊಬ್ಬ ಯುವತಿಯನ್ನು ಪ್ರೀತಿಸಿದ್ದ. ನಾನು ಸಿಂಗಲ್​, ನನಗಿನ್ನೂ ವಿವಾಹ ಆಗಿಲ್ಲ ಎಂದು, ಪತ್ನಿ, ಮಗುವನ್ನು ಬಿಟ್ಟು ಆಕೆಯೊಂದಿಗೆ ಓಡಿ ಹೋಗಿದ್ದ.. !

ಇತ್ತ ಪತ್ನಿಗೆ ವಿಷಯ ತಿಳಿಯುತ್ತಿದ್ದಂತೆ ಸಾದಾರ್​ ಠಾಣೆಯಲ್ಲಿ ದೂರು ನೀಡಿದ್ದರು. ಹಾಗೇ ರಾಜೇಶ್​ ಮೆಹತಾ ಗರ್ಲ್​ಫ್ರೆಂಡ್ ಕುಟುಂಬದವರೂ ಈತನ ವಿರುದ್ಧ ಕಿಡ್ನ್ಯಾಪ್​ ಕೇಸ್ ದಾಖಲಿಸಿದ್ದರು.

ಪ್ರಕರಣದ ತನಿಖೆ ಶುರು ಮಾಡಿದ್ದ ಪೊಲೀಸರು, ಅಂತೂ ರಾಜೇಶ್​ ಹಾಗೂ ಆತನ ಗೆಳತಿಯನ್ನು ಪತ್ತೆಹಚ್ಚಿದ್ದರು. ಇವರಿಬ್ಬರೂ ಪತ್ತೆಯಾಗುತ್ತಿದ್ದಂತೆ ರಾಜೇಶ್​ ಪತ್ನಿ ಮತ್ತು ಪ್ರಿಯತಮೆಯ ವಿರುದ್ಧ ದೊಡ್ಡ ವಾಗ್ವಾದವೇ ನಡೆಯಿತು. ರಾಜೇಶ್​ಗೆ ಮದುವೆ ಆಗಿರುವ ವಿಚಾರ ನನಗೆ ಗೊತ್ತಿರಲಿಲ್ಲ. ನಾವಿಬ್ಬರೂ ಇಲ್ಲಿಂದ ಓಡಿಹೋದ ಬಳಿಕ ವಿವಾಹವಾಗಿದ್ದೇವೆ ಎಂದು ಆತನ ಗರ್ಲ್​ಫ್ರೆಂಡ್ ಕೂಡ ಪಟ್ಟುಬಿಡದಂತೆ ವಾದಿಸಿದಳು. ಈ ಇಬ್ಬರು ಮಹಿಳೆಯರ ಜಗಳ, ವಿವಾದ ನೋಡಲಾಗದೆ ಮಧ್ಯಪ್ರವೇಶಿಸಿದ ಪೊಲೀಸರು ವಿಚಿತ್ರ ರೀತಿಯಲ್ಲಿ ಸಮಸ್ಯೆ ಬಗೆಹರಿಸಿಕೊಟ್ಟರು. ‘ರಾಜೇಶ್​, ನೀವು ವಾರದಲ್ಲಿ ಮೂರು ದಿನ ಪತ್ನಿಯೊಂದಿಗೆ ಇರಿ..ಮೂರು ದಿನ ಗರ್ಲ್​ಫ್ರೆಂಡ್ ಜತೆಗೆ ಕಾಲ ಕಳೆಯಿರಿ..ಒಂದು ದಿನ ರಜಾ ತೆಗೆದುಕೊಳ್ಳಿ’ ಎಂದು ಹೇಳಿ ರಾಜಿ ಮಾಡಿಸಿಕೊಟ್ಟಿದ್ದರು. ಹೀಗೆ ಹೇಳಿದ ಬಳಿಕ ಇಬ್ಬರೂ ಮಹಿಳೆಯರು ಒಪ್ಪಿಗೆ ಸೂಚಿಸಿದ್ದರು. ಈ ಒಪ್ಪಂದಕ್ಕೆ ಮೂವರೂ ಸಹಿ ಕೂಡ ಹಾಕಿದ್ದರು. ಸ್ವಲ್ಪ ಕಾಲ ಹೀಗೆ ನಡೆದಿತ್ತು. ರಾಜೇಶ್​ ವಾರದಲ್ಲಿ 3 ದಿನ ಹೆಂಡತಿಯೊಂದಿಗೆ, 3 ದಿನ ಪ್ರಿಯತಮೆಯೊಂದಿಗೆ ಸಮಯ ಕಳೆಯುತ್ತಿದ್ದರು.

ಇದನ್ನೂ ಓದಿ: ಬರೋಬ್ಬರಿ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್​ ಜಾಂಗ್​ ಉನ್​ ಪತ್ನಿ; ಎಲ್ಲಿ ಹೋಗಿದ್ದರು ರಿ ಸೋಲ್​ ಜು?

ಆದರೆ..ಅದೇನಾಯಿತೋ ಒಂದಷ್ಟುದಿನಗಳಾದ ಮೇಲೆ ಗರ್ಲ್​ಫ್ರೆಂಡ್​ ಉಲ್ಟಾ ಹೊಡೆದಳು. ರಾಜೇಶ್​ ನನಗೆ ಸುಳ್ಳು ಹೇಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಮತ್ತೆ ಪೊಲೀಸರಿಗೆ ದೂರು ನೀಡಿದಳು. ಈ ಕಂಪ್ಲೇಂಟ್​ ದಾಖಲಾಗುತ್ತಿದ್ದಂತೆ ರಾಜೇಶ್ ಪರಾರಿಯಾಗಿದ್ದಾನೆ. ಈತನ ಸಹಾಯಕ್ಕೆ ಮೊದಲ ಪತ್ನಿ ನಿಂತಿದ್ದಾರೆ. ಸದ್ಯ ಪ್ರಕರಣ ಕೋರ್ಟ್​ ಮೆಟ್ಟಿಲೇರಿದ್ದು, ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ. ಆದರೆ ರಾಜೇಶ್ ಸಿಗುತ್ತಿಲ್ಲ. ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದಾರೆ.

Published On - 4:23 pm, Wed, 17 February 21

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ