ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದು
MJ Akbar-Priya Ramani Case: ರಮಣಿ ನನ್ನ ಮರ್ಯಾದೆಯನ್ನು ಕಳೆದಿದ್ದಾರೆ ಎಂದು ಆರೋಪಿಸಿ ಅಕ್ಬರ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ತೀರ್ಪು ನೀಡಿದೆ.
ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ರದ್ದು ಮಾಡಿದೆ. ತನಗಾದ ಕಹಿ ಅನುಭವವನ್ನು ಹಲವು ವರ್ಷಗಳ ನಂತರವೂ ವ್ಯಕ್ತಪಡಿಸುವ ಹಕ್ಕನ್ನು ಮಹಿಳೆ ಹೊಂದಿದ್ದಾಳೆ ಎಂದು ಕೋರ್ಟ್ ಹೇಳಿದೆ.
2018ರಲ್ಲಿ #Metoo ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರರಂಗದವರು ಸೇರಿ ಅನೇಕ ಕ್ಷೇತ್ರದ ಮಹಿಳೆಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮೌನ ಮುರಿದಿದ್ದರು. ಆಗ ಪತ್ರಕರ್ತೆ ಪ್ರಿಯಾ ರಮಣಿ ಕೂಡ ಮುಂದೆ ಬಂದು, ಎಂ.ಜೆ.ಅಕ್ಬರ್ ತಮಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪಿಸಿದ್ದರು.
ಪ್ರಿಯಾ ರಮಣಿ ಹೇಳುವ ಪ್ರಕಾರ, 1993ರಲ್ಲಿ ಉದ್ಯೋಗ ನೀಡುವದಾಗಿ ಮುಂಬೈ ಹೋಟೆಲ್ಗೆ ಕರೆಸಿ ಅಕ್ಬರ್ ಲೈಂಗಿಕವಾಗಿ ಕಿರುಕುಳ ನೀಡಿದ್ದರಂತೆ. ಪ್ರಿಯಾ ರಮಣಿ ಈ ಹೇಳಿಕೆ ನೀಡುತ್ತಿದ್ದಂತೆ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ರಾಜಕೀಯ ವಯಲದಲ್ಲಿ ಈ ಸುದ್ದಿ ಅಲ್ಲೋಲ-ಲಲ್ಲೋಲ್ಲವನ್ನೇ ಎಬ್ಬಿಸಿತ್ತು. ಹೀಗಾಗಿ, 2018ರ ಅಕ್ಟೋಬರ್ 17ರಂದು ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ಇದನ್ನೂ ಓದಿ: ‘ಸ್ಯಾಂಡಲ್ವುಡ್ನಲ್ಲಿ ಏನೇ ಕಾಂಟ್ರವರ್ಸಿ ಆದ್ರೂ ನನ್ನ ಹೆಸರು ಬರುತ್ತೆ.. ನನ್ನ ಹಣೆಬರಹ’
ರಮಣಿ ನನ್ನ ಮರ್ಯಾದೆ ಕಳೆದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಅಕ್ಬರ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಮಹಿಳೆ ತನಗಾದ ಕಿರುಕುಳದ ಬಗ್ಗೆ ಅನೇಕ ವರ್ಷಗಳ ನಂತರವೂ ಮಾತನಾಡುವ ಹಕ್ಕನ್ನು ಹೊಂದಿದ್ದಾಳೆ ಎಂದಿದೆ.
ಮಧ್ಯಾಹ್ನ 2 ಗಂಟೆಗೆ ತೀರ್ಪು ಪ್ರಕಟವಾಗಬೇಕಿತ್ತು. ಆದರೆ, ತೀರ್ಪಿನಲ್ಲಿ ಸಣ್ಣ ಬದಲಾವಣೆ ಇದ್ದಿದ್ದರಿಂದ ತೀರ್ಪು ಪ್ರಕಟಣೆಯಲ್ಲಿ ಕೊಂಚ ವಿಳಂಬವಾಗಿದೆ.
Published On - 3:45 pm, Wed, 17 February 21