‘ಸ್ಯಾಂಡಲ್​ವುಡ್​ನಲ್ಲಿ ಏನೇ ಕಾಂಟ್ರವರ್ಸಿ ಆದ್ರೂ ನನ್ನ ಹೆಸರು ಬರುತ್ತೆ.. ನನ್ನ ಹಣೆಬರಹ’

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಏನೇ ವಿವಾದವಾದ್ರೂ ನನ್ನ ಹೆಸರು ಕೇಳಿಬರುತ್ತೆ. ಎಲ್ಲಾ ನನ್ನ ಹಣೆಬರಹ ಅಂತಾ ನಟಿ ಸಂಜನಾ ಗಲ್ರಾನಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಇಂದಿರಾನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾತನಾಡಿದ ನಟಿ ಸಂಜನಾ ನನಗೆ ಮಾಡಕ್ಕೆ ಕೆಲ್ಸ ಇಲ್ವಾ? ಸಾವಿರ ಜನ ಸಾವಿರ ರೀತಿ ಮಾತಾಡ್ತಾರೆ. ಡ್ರಗ್ ಜಾಲದ ಬಗ್ಗೆ ನನಗೇನು ಗೊತ್ತಿಲ್ಲ. ಇದುವರೆಗೂ ಯಾವೊಬ್ಬ ಅಧಿಕಾರಿಯೂ ನನ್ನನ್ನು ಸಂಪರ್ಕಿಸಿಲ್ಲ. ರಾಗಿಣಿ ಅರೆಸ್ಟ್ ಆಗಿದ್ದು ತುಂಬಾ ಬೇಜಾರಾಗ್ತಿದೆ ಎಂದು ಹೇಳಿದರು. CCB ವಿಚಾರಣೆ ಎದುರಿಸುತ್ತಿರೋ ರಾಹುಲ್ […]

‘ಸ್ಯಾಂಡಲ್​ವುಡ್​ನಲ್ಲಿ ಏನೇ ಕಾಂಟ್ರವರ್ಸಿ ಆದ್ರೂ ನನ್ನ ಹೆಸರು ಬರುತ್ತೆ.. ನನ್ನ ಹಣೆಬರಹ’
Follow us
KUSHAL V
|

Updated on: Sep 05, 2020 | 7:14 PM

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಏನೇ ವಿವಾದವಾದ್ರೂ ನನ್ನ ಹೆಸರು ಕೇಳಿಬರುತ್ತೆ. ಎಲ್ಲಾ ನನ್ನ ಹಣೆಬರಹ ಅಂತಾ ನಟಿ ಸಂಜನಾ ಗಲ್ರಾನಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಇಂದಿರಾನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾತನಾಡಿದ ನಟಿ ಸಂಜನಾ ನನಗೆ ಮಾಡಕ್ಕೆ ಕೆಲ್ಸ ಇಲ್ವಾ? ಸಾವಿರ ಜನ ಸಾವಿರ ರೀತಿ ಮಾತಾಡ್ತಾರೆ. ಡ್ರಗ್ ಜಾಲದ ಬಗ್ಗೆ ನನಗೇನು ಗೊತ್ತಿಲ್ಲ. ಇದುವರೆಗೂ ಯಾವೊಬ್ಬ ಅಧಿಕಾರಿಯೂ ನನ್ನನ್ನು ಸಂಪರ್ಕಿಸಿಲ್ಲ. ರಾಗಿಣಿ ಅರೆಸ್ಟ್ ಆಗಿದ್ದು ತುಂಬಾ ಬೇಜಾರಾಗ್ತಿದೆ ಎಂದು ಹೇಳಿದರು. CCB ವಿಚಾರಣೆ ಎದುರಿಸುತ್ತಿರೋ ರಾಹುಲ್ ನನಗೆ ಗೊತ್ತು. ಅವ್ರು ನಂಗೆ ರಾಖಿ ಬ್ರದರ್. ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ತೆಗೆದುಕೊಂಡಿರೋ ನಟ ನಟಿಯರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ. ಜೊತೆಗೆ, ನನ್ನನ್ನ ವಿಚಾರಣೆಗೆ ಕರೆದಿಲ್ಲ. ಕರೆದ್ರೆ ಖಂಡಿತ ಹೋಗ್ತಿನಿ.

ಪ್ರಶಾಂತ್ ಸಂಬರ್ಗಿ ಹಾಕಿರೋ ವೀಡಿಯೋ ಬಗ್ಗೆ ಮಾತಾಡಲ್ಲ. ಅದು ಫೇಸ್​ಬುಕ್​ನಲ್ಲಿ ನಾನೇ ಹಾಕಿರೋ ವಿಡಿಯೋ. ಕನ್ನಡದ ಯಾವುದೇ ಪಾರ್ಟಿಗೂ ನಾನು ಹೋಗುವುದಿಲ್ಲ. ಆದರೆ, ನನ್ನ ಹಣೆಬರಹ. ಇಂಡಸ್ಟ್ರಿಯಲ್ಲಿ ಏನೇ ಕಾಂಟ್ರವರ್ಸಿ ಬಂದ್ರು ನನ್ನ ಹೆಸರೇ ಬರುತ್ತೆ. #MeToo ಕೇಸ್​ನಲ್ಲೂ ಕೂಡ ನನ್ನ ಹೆಸರು ಕೇಳಿಬಂದಿತ್ತು. ಯಾವಾಗ್ಲೂ ನನ್ನ ಹೆಸರು ಯಾಕೆ ಬರತ್ತೆ ಅನ್ನೊದು ಗೊತ್ತಿಲ್ಲ ಎಂದು ಸಂಜನಾ ಹೇಳಿದ್ದಾರೆ.