Toolkit | ಲೇಖಕಿ ಗೆಯ್ಲ್ ಕಿಂಬಾಲ್ ನಡೆಸಿದ್ದ ದಿಶಾ ರವಿ ಸಂದರ್ಶನ YouTube ​ನಿಂದ ಮಾಯ! ಅಷ್ಟಕ್ಕೂ ದಿಶಾ ಏನು ಹೇಳಿದ್ದರು?

ಗೆಯ್ಲ್ ಕಿಂಬಾಲ್, ಸುಮಾರು ಒಂದು ಗಂಟೆಯ ಕಾಲ ನಡೆಸಿದ ಸಂದರ್ಶನದಲ್ಲಿ ದಿಶಾ ರವಿ ಹಲವು ಬಾರಿ ಭಾರತದ ಮಾನಹಾನಿ ಆಗುವಂಥಾ ಮಾತನಾಡಿರುವುದು ಕಂಡುಬಂದಿದೆ.

Toolkit | ಲೇಖಕಿ ಗೆಯ್ಲ್ ಕಿಂಬಾಲ್ ನಡೆಸಿದ್ದ ದಿಶಾ ರವಿ ಸಂದರ್ಶನ YouTube ​ನಿಂದ ಮಾಯ! ಅಷ್ಟಕ್ಕೂ ದಿಶಾ ಏನು ಹೇಳಿದ್ದರು?
ದಿಶಾ ರವಿ
Follow us
TV9 Web
| Updated By: ganapathi bhat

Updated on:Apr 06, 2022 | 7:57 PM

ಅಮೆರಿಕಾ ಮೂಲದ ಲೇಖಕಿ ಮತ್ತು ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಪ್ರೊಫೆಸರ್ ಗೆಯ್ಲ್ ಕಿಂಬಾಲ್ (Gayle Kimball) ಅವರು ಬೆಂಗಳೂರಿನ ಹೋರಾಟಗಾರ್ತಿ ದಿಶಾ ರವಿ (Disha Ravi) ಜತೆ 2020ರಲ್ಲಿ ನಡೆಸಿದ್ದ ಸಂದರ್ಶನವನ್ನು ಯೂಟ್ಯೂಬ್ ಚಾನಲ್​ನಿಂದ ತೆಗೆದುಹಾಕಿದ್ದಾರೆ. ಗ್ರೆಟಾ ಥನ್​ಬರ್ಗ್ ಟೂಲ್​ಕಿಟ್ (Greta Thunberg Toolkit Case) ಪ್ರಕರಣದಲ್ಲಿ, ದೆಹಲಿ ಪೊಲೀಸರಿಂದ ದಿಶಾ ರವಿ ಬಂಧನಕ್ಕೊಳಗಾಗಿದ್ದರು. ಆ ಬಳಿಕ, ಗೆಯ್ಲ್ ಕಿಂಬಾಲ್ ನಡೆಸಿದ್ದ ಸಂದರ್ಶನ ವೈರಲ್ ಆಗಿತ್ತು.

ಟೂಲ್​ಕಿಟ್ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿ ದಿಶಾ ರವಿ ಬಂಧನವಾದ ಬಳಿಕ, ಲೇಖಕಿ ಗೆಯ್ಲ್ ಕಿಂಬಾಲ್  ನಡೆಸಿದ್ದ ಸಂದರ್ಶನವನ್ನು ಯೂಟ್ಯೂಬ್ ಚಾನಲ್​ನಿಂದ ರಿಮೂವ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈಗ ಗೆಯ್ಲ್ ಕಿಂಬಾಲ್ ನಡೆಸಿದ್ದ ಸಂದರ್ಶನದ ವೀಡಿಯೋ ಪ್ರೈವೆಸಿ ಸೆಟ್ಟಿಂಗ್​ನ್ನು ‘ಪ್ರೈವೇಟ್’ ಎಂದು ಬದಲಾಯಿಸಲಾಗಿದೆ. ಅದರಂತೆ, ಎಲ್ಲರಿಗೂ ಸಂದರ್ಶನದ ವೀಡಿಯೋ ನೋಡುವ ಅವಕಾಶ ಈಗ ಲಭ್ಯವಿಲ್ಲ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದ ದಿಶಾ ರವಿಯನ್ನು ಫೆಬ್ರವರಿ 14ರಂದು ಪೊಲೀಸರು ಬಂಧಿಸಿದ್ದರು. ಉತ್ತರ ಬೆಂಗಳೂರಿನ ಸೋಲದೇವನಹಳ್ಳಿಯ ನಿವಾಸದಿಂದ ದಿಶಾ ರವಿ ಬಂಧನವಾಗಿತ್ತು. ಟೂಲ್​ಕಿಟ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು, ಎನ್​ಜಿಒಗಳು, ಮಾಧ್ಯಮ ಸಂಸ್ಥೆಗಳು ಹಾಗೂ ಖಲಿಸ್ತಾನಿ ಚಳುವಳಿಗಾರರ ಹೆಸರು ಕೇಳಿಬಂದಿತ್ತು. ದಿಶಾ ರವಿ ದೇಶದ್ರೋಹದ ಆರೋಪ ಹೊತ್ತಿದ್ದರು.

ಇದನ್ನೂ ಓದಿ: Toolkit: ಬಂಧಿತ ದಿಶಾ ರವಿಗೆ ಕಾನೂನು ನೆರವು ನೀಡಲು ಮುಂದಾದ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ

ಇಂತಹುದೇ ಭಾವನೆಗಳನ್ನು ದಿಶಾ ರವಿ 2020ರ ವೇಳೆಯಲ್ಲಿಯೂ ತೋರಿರುವುದು ಕಂಡುಬಂದಿದೆ. ಗೆಯ್ಲ್ ಕಿಂಬಾಲ್, ಸುಮಾರು ಒಂದು ಗಂಟೆಯ ಕಾಲ ನಡೆಸಿದ ಸಂದರ್ಶನದಲ್ಲಿ ದಿಶಾ ರವಿ ಹಲವು ಬಾರಿ ಭಾರತದ ಮಾನಹಾನಿ ಆಗುವಂಥಾ ಮಾತನಾಡಿರುವುದು ಕಂಡುಬಂದಿದೆ. ಭಾರತಕ್ಕೆ ಸಂಬಂಧಪಟ್ಟ ಹಲವು ವಿಷಯಗಳನ್ನು ಗೆಯ್ಲ್ ಕಿಂಬಾಲ್ ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ದಿಶಾ, ಬಹುತೇಕ ಬಾರಿ, ಭಾರತದ ಹಾಗೂ ಮೋದಿ ಸರ್ಕಾರದ ಬಗ್ಗೆ ಋಣಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಒಂದು ಕಡೆ, ಭಾರತದಲ್ಲಿ ಆಗುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಹೇಳಿರುವ ದಿಶಾ ಮತ್ತೊಂದೆಡೆ ಬಾಲ್ಯವಿವಾಹ, ವರದಕ್ಷಿಣೆ, ಮರ್ಯಾದಾ ಹತ್ಯೆಗಳು ಸಾಮಾನ್ಯವಾಗಿದ್ದು, ಸಾಮಾಜಿಕವಾಗಿ ಅಂಗೀಕಾರವಾಗಿರುವ ಕಾರ್ಯಗಳಾಗಿಬಿಟ್ಟಿವೆ ಎಂದು ಹೇಳಿದ್ದಾರೆ. ಮೋದಿ ಸರ್ಕಾರದ ಬಗ್ಗೆ ಋಣಾತ್ಮಕವಾಗಿ ಮಾತನಾಡಿರುವ ದಿಶಾ, ತನ್ನ ಕುಟುಂಬದಲ್ಲಿರುವವರಿಗೂ ಪ್ರಧಾನಿ ಮೋದಿ ಸಮ್ಮತವಾಗಿದ್ದಾರೆ. ಆದರೆ ನನಗಲ್ಲ ಎಂದು ಗೆಯ್ಲ್ ಕಿಂಬಾಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದಾಗ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿತ್ತು. ಟ್ರಂಪ್ ಸ್ವಾಗತಿಸಲು ಹಣ ನೀಡಿ ಜನರನ್ನು ಕರೆತರಲಾಗಿತ್ತು ಎಂದೂ ದಿಶಾ ತಿಳಿಸಿದ್ದಾರೆ.

ಮೋದಿ ಸರ್ಕಾರ, ಕೊವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ವಲಸಿಗ ಕಾರ್ಮಿಕರಿಗೆ ಹಾಗೂ ಬಡವರಿಗೆ ಸೂಕ್ತ ಆರ್ಥಿಕ ಸಹಕಾರ ನೀಡಿಲ್ಲ. ಮೋದಿ ಮುಸ್ಲಿಂ ವಿರೋಧಿ, CAA ವಿರೋಧಿ ಪ್ರತಿಭಟನೆಗಳ ಬಗ್ಗೆ ಮಾತನಾಡಿದ್ದಾರೆ. ಭಾರತದ ಬಡತನವನ್ನು, ತಿಳಿವಳಿಕೆಯ ಕೊರತೆಯನ್ನು ಶೋಷಣೆಯ ಅಸ್ತ್ರವಾಗಿ ಸರ್ಕಾರ ಬಳಸಿಕೊಂಡಿದೆ. ಜಾಗತಿಕ ಹವಾಮಾನ ಸಂಕಷ್ಟಕರ ಪರಿಸ್ಥಿತಿಯನ್ನು ಮೋದಿ ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: TV9 Digital Live | ದಿಶಾ ರವಿ ಬಂಧನ ಹುಟ್ಟುಹಾಕಿದ ‘ದೇಶದ್ರೋಹ’ದ ಪ್ರಶ್ನೆಗಳು

ನರೇಂದ್ರ ಮೋದಿಗೆ ಮಾತನಾಡಲು ಗೊತ್ತು. ಭಾಷಣದಿಂದ ಸಭಿಕರನ್ನು ಸೆಳೆಯಲು ತಿಳಿದಿದೆ. ಅದರ ಹೊರತಾಗಿ ದೇಶಕ್ಕೆ ಮೋದಿ ಏನೂ ಮಾಡಿಲ್ಲ ಎಂದು ಹೇಳಿದ್ದಾರೆ. ಜತೆಗೆ, ಭಾರತದಲ್ಲಿ ಸರ್ಕಾರದ ಬದಲಾವಣೆ ಆಗಬೇಕಾದ ಅನಿವಾರ್ಯತೆ ಇದೆ ಎಂದೂ ಹೇಳಿದ್ದಾರೆ.

Published On - 3:00 pm, Wed, 17 February 21