ಬರೋಬ್ಬರಿ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್​ ಜಾಂಗ್​ ಉನ್​ ಪತ್ನಿ; ಎಲ್ಲಿ ಹೋಗಿದ್ದರು ರಿ ಸೋಲ್​ ಜು?

Kim Jong Un ಪತ್ನಿ ರಿ ಸೋಲ್​ ಜು ಗರ್ಭಿಣಿ, ಕೊರೊನಾ ಸೋಂಕಿನ ಭಯವೂ ಇರುವುದರಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿಬಂದಿತ್ತು.

ಬರೋಬ್ಬರಿ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್​ ಜಾಂಗ್​ ಉನ್​ ಪತ್ನಿ; ಎಲ್ಲಿ ಹೋಗಿದ್ದರು ರಿ ಸೋಲ್​ ಜು?
ಪತ್ನಿ ರಿ ಸೋಲ್​ ಜುರೊಂದಿಗೆ ಕಿಮ್​ ಜಾಂಗ್​ ಉನ್
Follow us
Lakshmi Hegde
|

Updated on:Feb 17, 2021 | 3:33 PM

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ (Kim Jong Un )ಪತ್ನಿ ರಿ ಸೋಲ್​ ಜು ಬರೋಬ್ಬರಿ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದಲೂ ರಿ ಸೋಲ್ ಜು ಹೊರಗೆಲ್ಲೂ ಕಾಣಿಸಿಕೊಳ್ಳದ ಕಾರಣ ಅನೇಕ ಊಹಾಪೋಹಗಳು ಎದ್ದಿದ್ದವು. ಇದೀಗ ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್, ಈಗಿನ ಅಧ್ಯಕ್ಷ ಜಿಮ್​ ಜಾಂಗ್ ಉನ್​ ತಂದೆ,​ ಜಾಂಗ್​ ಇಲ್​ ಅವರ ಜನ್ಮವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಂಗೀತ ಸಮಾರಂಭವೊಂದರಲ್ಲಿ ಪತಿಯೊಂದಿಗೆ ಭಾಗವಹಿಸಿ, ಎಲ್ಲ ಅನುಮಾನಗಳಿಗೂ ತೆರೆ ಎಳೆದಿದ್ದಾರೆ.

ಈ ಸಂಗೀತ ಸಮಾರಂಭ ಭರ್ಜರಿಯಾಗಿ ನಡೆಯಿತು. ಇಲ್ಲಿಗೆ ಆಗಮಿಸಿದ ಕಿಮ್​ ಜಾಂಗ್​ ಉನ್​ ದಂಪತಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಇವರನ್ನು ನೋಡಿ ನೆರೆದಿದ್ದ ಸಾವಿರಾರು ಜನರು ಹರ್ಷೋದ್ಘಾರ ಮಾಡಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.  ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಿನ್ ಜಾಂಗ್ ಉನ್​ ಮತ್ತು ಪತ್ನಿ ರಿ ಸೋಲ್​ ಜು ಅವರ ಫೋಟೋಗಳನ್ನು ಆಡಳಿತ ಪಕ್ಷವಾದ ವರ್ಕರ್ಸ್​ ಪಾರ್ಟಿಯ ಪತ್ರಿಕೆಯಾದ ರೊಡಾಂಗ್ ಸಿನ್ಮುನ್ ಕೂಡ ಪ್ರಕಟಿಸಿದೆ. ಪ್ಯೋಂಗ್ಯಾಂಗ್​ನ ಮನ್ಸುಡೆ ಆರ್ಟ್ ಥಿಯೇಟರ್​​ನಲ್ಲಿ ನಡೆದ ಸಮಾರಂಭದ ಹಲವು ಫೋಟೋಗಳು ವೈರಲ್​ ಆಗಿವೆ. ಹಾಗೇ, ಈ ಸಮಾರಂಭದಲ್ಲಿ ಭಾಗವಹಿಸಿದವರು ಯಾರೂ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವಂತೂ ಇರಲೇ ಇಲ್ಲ ಎಂಬುದು ಫೋಟೋದಲ್ಲಿ ಸ್ಪಷ್ಟವಾಗಿದೆ.

ಕಿಮ್​ ಜಾಂಗ್​ ಉನ್ ಪತ್ನಿಗೆ ರಿ ಸೋಲ್​ ಜುಗೆ 32ವರ್ಷ ಆಗಿರಬಹುದು. ಇವರ ಹೆಸರು, ಫೋಟೋ ಮೊದಲ ಬಾರಿಗೆ ಕೊರಿಯನ್​ ಸೆಂಟ್ರಲ್​ ನ್ಯೂಸ್​ ಏಜೆನ್ಸಿಯಲ್ಲಿ (ಕೊರಿಯನ್​ ನ್ಯೂಸ್​ ಏಜೆನ್ಸಿ) ಪ್ರಕಟವಾಗಿದ್ದು 2012ರಲ್ಲಿ. ಅಂದರೆ ಪತಿ ಕಿಮ್ ಜಾಂಗ್​ ಉನ್​ ಅಧಿಕಾರ ವಹಿಸಿಕೊಂಡು ಸುಮಾರು ಒಂದೂವರೆ ವರ್ಷದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಲ್ಲಿ ರಿ ಹೆಸರು, ಫೋಟೋ ಬಂದಿತ್ತು. ಅಲ್ಲಿಂದ ಇಲ್ಲಿಯವರೆಗೆ ನ್ಯೂಸ್ ಏಜೆನ್ಸಿಯಲ್ಲಿ ಸುಮಾರು 200 ಬಾರಿ ಅಷ್ಟೇ ಉಲ್ಲೇಖ ಆಗಿರಬಹುದು. ರಿ ಮೊದಲಿನಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪವಾದರೂ ಕಳೆದ ಒಂದೂವರೆ ವರ್ಷದಿಂದ ಅಂತೂ ಒಮ್ಮೆಯೂ ಹೊರಗೆ ಬಂದಿರಲಿಲ್ಲ. ಇದು ಅಲ್ಲಿನ ರಾಜಕೀಯ ವಲಯ, ಸಾಮಾನ್ಯ ಜನರು, ಮಾಧ್ಯಮಗಳು ಹಲವು ಪ್ರಶ್ನೆ ಎತ್ತುವಂತೆ ಮಾಡಿತ್ತು.

ಇದನ್ನೂ ಓದಿ: Greta Thunberg Toolkit Case: ವಕೀಲೆ ನಿಕಿತಾ ಜೇಕಬ್​ಗೆ ಬಾಂಬೆ ಹೈಕೋರ್ಟ್ ಜಾಮೀನು 

ರಿ ಸೋಲ್​ ಜು ಗರ್ಭಿಣಿ, ಕೊರೊನಾ ಸೋಂಕಿನ ಭಯವೂ ಇರುವುದರಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿಬಂದಿತ್ತು. ಅಷ್ಟೇ ಅಲ್ಲ, ಕೊರೊನಾ ವೈರಸ್​ ತಗುಲಿರಬಹುದು, ಚಿಕಿತ್ಸೆ ಪಡೆಯುತ್ತಿರಬಹುದು ಇದೇ ಭಯಕ್ಕೆ ಹೊರಗೆಲ್ಲೂ ಬರುತ್ತಿಲ್ಲ ಎಂದೂ ಹೇಳಲಾಗಿತ್ತು. ಇನ್ನು ಕೆಲವರು, ರಿ ಸೋಲ್​ ಜು ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ. ಕೊರೊನಾ ಭಯದಿಂದಾಗಿ ಅವರು ಮಕ್ಕಳೊಂದಿಗೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗೆ ಅನೇಕ ರೀತಿಯ ಊಹಾಪೋಹಗಳು ಎದ್ದಿದ್ದವು. ಮಾಜಿ ಗಾಯಕಿಯೂ ಆಗಿರುವ ರಿ ಸೋಲ್ ಜು ಈ ಒಂದು ವರ್ಷ ಯಾಕಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಈಗ ಸಂಗೀತ ಸಮಾರಂಭದಲ್ಲಿ ಪತಿಯೊಂದಿಗೆ ಭಾಗವಹಿಸಿ ಹಲವು ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಹಿಂದೊಮ್ಮೆ ಕಿಮ್ ಜಾಂಗ್​ ಉನ್​ ಕೂಡ ಏಕಾಏಕಿ ಕಣ್ಮರೆಯಾಗಿದ್ದರು. ಆಗಂತೂ ಅವರು ಸತ್ತೇ ಹೋಗಿದ್ದಾರೆ ಎಂದೇ ಸುದ್ದಿಯಾಗಿತ್ತು. ಅದಾದ ಮೇಲೆ ಮತ್ತೆ ಪ್ರತ್ಯಕ್ಷವಾಗಿ ಹುಟ್ಟಿದ್ದ ಊಹಾಪೋಹಕ್ಕೆ ಫುಲ್​ಸ್ಟಾಪ್​ ಇಟ್ಟಿದ್ದರು.

Published On - 3:33 pm, Wed, 17 February 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ