ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್​ಬುಕ್​ ಆದಾಯ ಹಂಚಿಕೆ ವಿವಾದ?

Facebook Australia : ಅಗ್ನಿಶಾಮಕ, ಆರೋಗ್ಯ, ಹವಾಮಾನ ಸೇವೆಗಳನ್ನು ನೀಡುವ ಫೇಸ್‌ಬುಕ್ ಪುಟಗಳು ಗುರುವಾರ ತೀವ್ರ ಸಮಸ್ಯೆ ಎದುರಿಸಿವೆ. ಈ ಪುಟಗಳಲ್ಲಿದ್ದ ಸುದ್ದಿಗಳು ಮಾಯವಾಗಿವೆ. ಇನ್ನು, ಸುದ್ದಿ ಪಬ್ಲಿಶರ್​ಗಳು ಹೊಸ ಪೋಸ್ಟ್​ಗಳನ್ನು ಹಾಕಲಾಗುತ್ತಿಲ್ಲ.

ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್​ಬುಕ್​ ಆದಾಯ ಹಂಚಿಕೆ ವಿವಾದ?
ಪ್ರಾತಿನಿಧಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on:Feb 18, 2021 | 6:37 PM

ನವದೆಹಲಿ: ಆಸ್ಟ್ರೇಲಿಯಾ ಸರ್ಕಾರ ಹಾಗೂ ಫೇಸ್​ಬುಕ್​ ನಡುವಣ ತಿಕ್ಕಾಟ ಮಿತಿಮೀರಿದೆ. ಆಸ್ಟ್ರೇಲಿಯಾ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆ ವಿರೋಧಿಸಿ ಗುರುವಾರ ಏಕಾಏಕಿ ಮಾಧ್ಯಮ ಕಂಟೆಂಟ್​ಗಳನ್ನು ಫೇಸ್​ಬುಕ್​ ನಿಷೇಧಿಸಿದೆ. ಇದರಿಂದ ಕೊವಿಡ್​-19, ಕಾಡ್ಗಿಚ್ಚು, ಚಂಡಮಾರುತದ ಬಗ್ಗೆ ಮಾಹಿತಿ ನೀಡುವ ಪೇಜ್​ಗಳು ಬ್ಲ್ಯಾಂಕ್​ ಆಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಅಗ್ನಿಶಾಮಕ, ಆರೋಗ್ಯ, ಹವಾಮಾನ ಸೇವೆಗಳನ್ನು ನೀಡುವ ಫೇಸ್‌ಬುಕ್ ಪುಟಗಳು ಗುರುವಾರ ತೀವ್ರ ಸಮಸ್ಯೆ ಎದುರಿಸಿವೆ. ಈ ಪುಟಗಳಲ್ಲಿದ್ದ ಸುದ್ದಿಗಳು ಮಾಯವಾಗಿವೆ. ಇನ್ನು, ಸುದ್ದಿ ಪಬ್ಲಿಷರ್​ಗಳು ಹೊಸ ಪೋಸ್ಟ್​ಗಳನ್ನು ಹಾಕಲಾಗುತ್ತಿಲ್ಲ.ಜತೆಗೆ ಹಳೆಯ ಸುದ್ದಿಗಳು ಕಾಣದಂತಾಗಿವೆ.

ಆಸ್ಟ್ರೇಲಿಯಾದಲ್ಲಿ ಸರ್ಕಾರ ಹಾಗೂ ಫೇಸ್​ಬುಕ್​ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಫೇಸ್​ಬುಕ್​ ಹಾಗೂ ಗೂಗಲ್​ ಹಣ ಪಾವತಿಸಬೇಕು ಎನ್ನುವ ಶಾಸನವನ್ನು ಸರ್ಕಾರ ಜಾರಿಗೆ ತಂದಿದೆ. ಇದನ್ನು ಫೇಸ್​ಬುಕ್​-ಗೂಗಲ್​ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ಆಗ್ರಹಿಸಿದೆ. ಆದರೆ, ಇದನ್ನು ಫೇಸ್​ಬುಕ್​ ವಿರೋಧಿಸುತ್ತಿದೆ. ಇದೇ ಕಾರಣಕ್ಕೆ, ಇಂದು​ ನಾಟಕೀಯ ಬೆಳವಣಿಗೆಯಲ್ಲಿ ಫೇಸ್​ಬುಕ್ ಸುದ್ದಿಗಳನ್ನೇ ಬ್ಯಾನ್​ ಮಾಡಿದೆ.

ಸುದ್ದಿ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಮಾನವ ಹಕ್ಕುಗಳ ವಕೀಲರು ಫೇಸ್​ಬುಕ್​ ಕ್ರಮವನ್ನು ಟೀಕಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಫೇಸ್​ಬುಕ್​ ತನ್ನ ಘನತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ ಎಂದು ಇವರು ಹೇಳಿದ್ದಾರೆ.

ಪಬ್ಲಿಶರ್​ಗಳಿಗೆ ಹಣ ಪಾವತಿಸಿ.. ಡಿಜಿಟಿಲ್​ ಪ್ಲಾಟ್​ಫಾರ್ಮ್​ಗಳು ತಮ್ಮ ಸುದ್ದಿಯನ್ನು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುತ್ತವೆ. ಈ ಮೂಲಕ ತಮ್ಮ ವೆಬ್​ಸೈಟ್​ಗೆ ಟ್ರಾಫಿಕ್​ ಪಡೆಯುತ್ತವೆ. ಇದಕ್ಕಾಗಿ ಸುದ್ದಿಸಂಸ್ಥೆಗಳಿಗೆ ಫೇಸ್​ಬುಕ್​ ಹಣ ಪಾವತಿ ಮಾಡುತ್ತಿಲ್ಲ. ಏಕೆಂದರೆ, ನಮ್ಮಿಂದಾಗಿ ವೆಬ್​ಸೈಟ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ ಎನ್ನುವ ಅವರ ವಾದ. ಆದರೆ, ಆಸ್ಟ್ರೇಲಿಯಾ ಸರ್ಕಾರ ಇದನ್ನು ಒಪ್ಪುತ್ತಿಲ್ಲ. ಫೇಸ್​ಬುಕ್​ ಪಬ್ಲಿಷರ್​ಗಳಿಗೆ ಹಣ ನೀಡಲೇಬೇಕು ಎಂದು ಹೇಳುತ್ತಿದೆ.

ಫೇಸ್​ಬುಕ್ ಹೇಳೋದೇನು? ಫೇಸ್‌ಬುಕ್​ನಲ್ಲಿ 100 ಜನರಲ್ಲಿ ಕೇವಲ 4 ಮಂದಿ ಮಾತ್ರ ಸುದ್ದಿ ಫೀಡ್‌ ನೋಡುತ್ತಾರಂತೆ. ಹೀಗಾಗಿ, ಫೇಸ್​ಬುಕ್​ ವಿಡಿಯೋಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಹೀಗಾಗಿ, ನ್ಯೂಸ್​ಗಳನ್ನು ಬ್ಯಾನ್​ ಮಾಡುವುದರಿಂದ ಹೆಚ್ಚು ನಷ್ಟವಿಲ್ಲ ಎನ್ನುವುದು ಫೇಸ್​ಬುಕ್​ ನಂಬಿಕೆ. ಇಂಗ್ಲೆಂಡ್​ನಲ್ಲಿ ಇತ್ತೀಚೆಗೆ ಫೇಸ್​ಬುಕ್​, ಫೇಸ್​ಬುಕ್​ ನ್ಯೂಸ್​ಅನ್ನು ಪರಿಚಯಿಸಿತ್ತು. ಎರಡನೇ ಹಂತದಲ್ಲಿ ಆಸ್ಟ್ರೇಲಿಯಾದಲ್ಲೂ ಇದನ್ನು ಜಾರಿಗೆ ತರುವ ಆಲೋಚನೆ ಫೇಸ್​ಬುಕ್​ನದ್ದಾಗಿತ್ತು. ಆದರೆ, ಈಗ ನಡೆದ ಬೆಳವಣಿಗೆಯಿಂದ ಇದು ಇನ್ನೂ ವಿಳಂವಾಗಲಿದೆ ಎನ್ನಲಾಗುತ್ತಿದೆ.

ಭಾರತಕ್ಕೂ ಬರಲಿದೆ ಹೊಸ ನೀತಿ? ಆಸ್ಟ್ರೇಲಿಯಾದಲ್ಲಿ ಜಾರಿಗೆ ತರಲಾದ ಹೊಸ ಕಾಯ್ದೆ ಬಗ್ಗೆ ಫೇಸ್​ಬುಕ್​ ಹಾಗೂ ಗೂಗಲ್​ಗೆ ಒಂದು ಆತಂಕ ಶುರುವಾಗಿದೆ. ಏಕೆಂದರೆ, ಇದೇ ಮಾದರಿಯ ಕಾಯ್ದೆಯನ್ನು ಭಾರತ ಸೇರಿ ಎಲ್ಲಾ ರಾಷ್ಟ್ರಗಳು ಜಾರಿಗೆ ತಂದರೆ ಮುಂದೇನು ಎನ್ನುವ ಪ್ರಶ್ನೆ ಅವರದ್ದು. ಆಸ್ಟ್ರೇಲಿಯಾದಲ್ಲಿ ಜಾರಿಗೆ ತಂದಿರುವುದು ಆರಂಭ ಮಾತ್ರ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಷ್ಟ್ರಗಳೂ ಈ ಕಾಯ್ದೆ ಜಾರಿಗೆ ತಂದರೆ ಫೇಸ್​ಬುಕ್ ಪಬ್ಲಿಷರ್​ಗಳಿಗೆ ಹಣ ಪಾವತಿ ಮಾಡುವುದು ಅನಿವಾರ್ಯ ಆಗಲಿದೆ.

ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಸಮಯ ವ್ಯಯಿಸುವುದನ್ನು ಕಡಿಮೆ ಮಾಡುವುದು ಹೇಗೆ?

Published On - 2:29 pm, Thu, 18 February 21

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ