Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL ಗಳಿಕೆಗಿಂತ ದುಬಾರಿ ಮೊತ್ತದಲ್ಲಿ 2 ಮನೆ ಖರೀದಿಸಿದ ಸೂರ್ಯಕುಮಾರ್ ಯಾದವ್

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್-18 ರ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದ್ದರು. ಕಳೆದ ಸೀಸನ್​ನ ಕೊನೆಯ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ತಪ್ಪು ಮಾಡಿದ್ದಕ್ಕಾಗಿ ಹಾರ್ದಿಕ್ ಪಾಂಡ್ಯಗೆ ಒಂದು ಮ್ಯಾಚ್​ನ ನಿಷೇಧ ಹೇರಲಾಗಿತ್ತು. ಹೀಗಾಗಿ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಕಾಣಿಸಿಕೊಂಡಿರಲಿಲ್ಲ.

IPL ಗಳಿಕೆಗಿಂತ ದುಬಾರಿ ಮೊತ್ತದಲ್ಲಿ 2 ಮನೆ ಖರೀದಿಸಿದ ಸೂರ್ಯಕುಮಾರ್ ಯಾದವ್
Suryakumar Yadav
Follow us
ಝಾಹಿರ್ ಯೂಸುಫ್
|

Updated on: Mar 26, 2025 | 11:54 AM

ಟೀಮ್ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಾಗಿರುವುದು ಐಪಿಎಲ್​ನಲ್ಲಿ ಭರ್ಜರಿ ಇನಿಂಗ್ಸ್​ನಿಂದಲ್ಲ. ಬದಲಾಗಿ ಮುಂಬೈನಲ್ಲಿ ಐಷಾರಾಮಿ ಎರಡು ಫ್ಲ್ಯಾಟ್​ಗಳನ್ನು ಖರೀದಿಸುವ ಮೂಲಕ. ಅದು ಕೂಡ 21.1 ಕೋಟಿ ರೂ.ಗೆ…!

ಸೂರ್ಯಕುಮಾರ್ ಯಾದವ್ ಮುಂಬೈನ ದಿಯೋನಾರ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಎರಡೂ ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಇದರ ಒಟ್ಟು ಬೆಲೆ 21.1 ಕೋಟಿ ರೂ. ಎಂದು ವರದಿಯಾಗಿದೆ.

ಈ ಬಾರಿಯ ಐಪಿಎಲ್​ಗೂ ಮುನ್ನ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 16.35 ಕೋಟಿ ರೂ.ಗೆ ಉಳಿಸಿಕೊಂಡಿದೆ. ಅಂದರೆ ಐಪಿಎಲ್ 2025 ಕ್ಕೆ ಅವರು ಪಡೆಯುತ್ತಿರುವ ಹಣಕ್ಕಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚು ಮೊತ್ತ ನೀಡಿ 2 ಮನೆಗಳನ್ನು ಖರೀದಿಸಿದ್ದಾರೆ.

ಇದನ್ನೂ ಓದಿ
Image
ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನಕ್ಕೆ ಇದುವೇ ಅಸಲಿ ಕಾರಣ
Image
RCB ದಾಖಲೆ ಧೂಳೀಪಟ ಮಾಡಿದ ಡೆಲ್ಲಿ ಬಾಯ್ಸ್
Image
David Warner: ಡೇವಿಡ್ ವಾರ್ನರ್​ಗೆ ಒಲಿದ ನಾಯಕತ್ವ..!
Image
VIDEO: ಎಂಎಸ್ ಧೋನಿ ಎಂಟ್ರಿಗೆ ಕಿವಿ ಮುಚ್ಚಿ ಕೂತ ನೀತಾ ಅಂಬಾನಿ

ಫ್ಲಾಟ್‌ಗಳ ವಿಶೇಷತೆಗಳೇನು?

ಸೂರ್ಯಕುಮಾರ್ ಯಾದವ್ ಅವರ ಎರಡೂ ಫ್ಲಾಟ್‌ಗಳು ಗೋದ್ರೇಜ್ ಸ್ಕೈ ಟೆರೇಸ್ ಯೋಜನೆಯಲ್ಲಿವೆ. ಇದರ ಒಟ್ಟು ಕಾರ್ಪೆಟ್ ಪ್ರದೇಶ 4,222.7 ಚದರ ಅಡಿ. ಅಲ್ಲದೆ ಫ್ಲಾಟ್‌ಗಳನ್ನು 4,568 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.

ಇದೀಗ ಸೂರ್ಯಕುಮಾರ್ ಯಾದವ್ ಖರೀದಿಸಿದ ಎರಡೂ ಫ್ಲಾಟ್‌ಗಳು ಅಪಾರ್ಟ್‌ಮೆಂಟ್‌ನ ಎರಡು ವಿಭಿನ್ನ ಮಹಡಿಗಳಲ್ಲಿವೆ. ಫ್ಲಾಟ್ ಇರುವ ಅಪಾರ್ಟ್‌ಮೆಂಟ್‌ನಲ್ಲಿ 6-ಪದರದ ಕಾರ್ ಪಾರ್ಕಿಂಗ್ ಪ್ರದೇಶವೂ ಇದೆ.

ಸದ್ಯ ಐಪಿಎಲ್​ನಲ್ಲಿ ತೊಡಗಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಮುಂದಿನ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ. ಇದರ ನಡುವೆಯೇ ಮಹಾನಗರ ಮುಂಬೈನಲ್ಲಿ ಸೂರ್ಯ ಎರಡು ಫ್ಲಾಟ್​ಗಳನ್ನು ಖರೀದಿಸಿರುವುದು ವಿಶೇಷ.

ಸೂರ್ಯಕುಮಾರ್ ಉಪನಾಯಕ:

ಈ ಬಾರಿಯ ಐಪಿಎಲ್​ನಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸೋಲನುಭವಿಸಿತ್ತು.

ಇದನ್ನೂ ಓದಿ: David Warner: ಡೇವಿಡ್ ವಾರ್ನರ್​ಗೆ ಒಲಿದ ನಾಯಕತ್ವ..!

ಮಾರ್ಚ್ 29 ರಂದು ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮುಂಬೈ ಪಡೆಯ ನಾಯಕರಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೊದಲ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ.