ಎಲ್ಲವೂ ತಾಯಿಗಾಗಿ… ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನಕ್ಕೆ ಇದುವೇ ಅಸಲಿ ಕಾರಣ
Yuzvendra Chahal - Dhanashree Verma: ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿರುವುದು ಗೊತ್ತೇ ಇದೆ. ಆದರೆ ಇಬ್ಬರು ಬೇರೆಯಾಗಲು ಕಾರಣವೇನು ಎಂಬುದು ಮಾತ್ರ ಬಹಿರಂಗವಾಗಿರಲಿಲ್ಲ. ಆದರೀಗ ಬಾಲಿವುಡ್ನ ಖ್ಯಾತ ಪತ್ರಕರ್ತ ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ಅವರ ವಿಚ್ಛೇದನಕ್ಕೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಟೀಮ್ ಇಂಡಿಯಾ ವೇಗಿ ಯುಜ್ವೇಂದ್ರ ಚಹಲ್ (Yuzvendra Chahal) ಹಾಗೂ ಧನಶ್ರೀ ವರ್ಮಾ (Dhanashree Verma) ಕೆಲ ದಿನಗಳ ಹಿಂದೆಯಷ್ಟೇ ವಿಚ್ಛೇದನ ಪಡೆದಿದ್ದರು. ಮಾರ್ಚ್ 20 ರಂದು ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿಯು ಅಧಿಕೃತವಾಗಿ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ಆದರೆ ಈ ತಾರಾ ಜೋಡಿಯ ವಿಚ್ಛೇದನಕ್ಕೆ ಕಾರಣವೇನು ಎಂಬುದು ಮಾತ್ರ ಬಹಿರಂಗವಾಗಿರಲಿಲ್ಲ. ಆದರೀಗ ಇಬ್ಬರು ದೂರವಾಗಲು ಅಸಲಿ ಕಾರಣವೇನು ಎಂಬುದು ಹೊರಬಿದ್ದಿದೆ.
ಅಷ್ಟಕ್ಕೂ ದೂರವಾಗಿದ್ದೇಕೆ?
ಪತ್ರಕರ್ತ ವಿಕ್ಕಿ ಲಾಲ್ವಾನಿ ಅವರ ಮಾಹಿತಿ ಪ್ರಕಾರ, ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಅವರ ಸಂಬಂಧದಲ್ಲಿ ಬಿರುಕು ಮೂಡಲು ಮುಖ್ಯ ಕಾರಂ ವಾಸ ಸ್ಥಳದಲ್ಲಿನ ಭಿನ್ನಾಭಿಪ್ರಾಯ. ಇಬ್ಬರೂ ತಮ್ಮ ವಾಸಸ್ಥಳದ ಬಗ್ಗೆ ಒಮ್ಮತಕ್ಕೆ ಬಂದಿರಲಿಲ್ಲ. ಈ ಕಾರಣದಿಂದಾಗಿ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದರು.
ಡಿಸೆಂಬರ್ 2020 ರಲ್ಲಿ ಮದುವೆಯಾದ ನಂತರ, ಧನಶ್ರೀ ಹರಿಯಾಣದಲ್ಲಿ ಚಹಲ್ ಮತ್ತು ಅವರ ಪೋಷಕರೊಂದಿಗೆ ವಾಸಿಸಲು ತೆರಳಿದ್ದರು. ಆದರೆ, ಕೆಲವು ದಿನಗಳ ನಂತರ ಧನಶ್ರೀ ಮುಂಬೈನಲ್ಲಿ ಉಳಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂಬೈನಲ್ಲೇ ಮನೆ ಮಾಡಬೇಕೆಂದು ಅಗ್ರಹಿಸಿದ್ದರು. ಆದರೆ ಇದು ಯುಜ್ವೇಂದ್ರ ಚಹಲ್ ಅವರಿಗೆ ಇಷ್ಟವಿರಲಿಲ್ಲ.
ಮುಂಬೈ ಮೇರಿ ಜಾನ್:
ಧನಶ್ರೀ ವರ್ಮಾ ಮುಂಬೈನಲ್ಲೇ ವಾಸಿಸಲು ಬಯಸುತ್ತಿದ್ದರು. ಆದರೆ ಯುಜ್ವೇಂದ್ರ ಚಹಲ್ ತನ್ನ ಪತ್ನಿಯು ಹರಿಯಾಣದಲ್ಲಿರುವ ತಾಯಿಯೊಂದಿಗೆ ಇರಬೇಕೆಂದು ಆಗ್ರಹಿಸಿದ್ದರು. ಆದರೆ ಇದಕ್ಕೆ ಧನಶ್ರೀ ವರ್ಮಾ ಸಿದ್ಧರಿರಲಿಲ್ಲ ಎಂದು ಹೇಳಲಾಗಿದೆ.
ಇತ್ತ ತನ್ನ ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ಯುಜ್ವೇಂದ್ರ ಚಹಲ್ ಸಹ ಸಿದ್ಧನಾಗಿರಲಿಲ್ಲ. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸಿದೆ. ಈ ಭಿನ್ರಾಭಿಪ್ರಾಯವೇ ಡೈವೋರ್ಸ್ ಹಂತಕ್ಕೆ ಹೋಗಿದೆ ಎಂದು ವಿಕ್ಕಿ ಲಾಲ್ವಾನಿ ಹೇಳಿಕೊಂಡಿದ್ದಾರೆ.
ಮಾರ್ಚ್ 20 ರಂದು ಡೈವೋರ್ಸ್:
ಐಪಿಎಲ್ 2025 ಪ್ರಾರಂಭವಾಗುವ ಕೇವಲ ಎರಡು ದಿನಗಳ ಮೊದಲು, ಅಂದರೆ ಮಾರ್ಚ್ 20 ರಂದು ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯದಿಂದ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ವಿಚ್ಛೇದನ ಪಡೆದಿದ್ದಾರೆ. ಈ ವಿಚ್ಛೇದನದ ಅಡಿಯಲ್ಲಿ, ಚಹಲ್ ತನ್ನ ಮಾಜಿ ಪತ್ನಿಗೆ ಅವರಿಗೆ 4.75 ಕೋಟಿ ರೂ.ಗಳನ್ನು ಪಾವತಿಸಬೇಕಿದೆ. ಅದರಂತೆ ಈಗಾಗಲೇ ಧನಶ್ರೀಗೆ 2.37 ಕೋಟಿ ರೂ.ಗಳನ್ನು ನೀಡಿದ್ದು, ಉಳಿದ ಮೊತ್ತವನ್ನು ಶೀಘ್ರದಲ್ಲೇ ನೀಡುವುದಾಗಿ ಯುಜ್ವೇಂದ್ರ ಚಹಲ್ ಕೋರ್ಟ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: David Warner: ಡೇವಿಡ್ ವಾರ್ನರ್ಗೆ ಒಲಿದ ನಾಯಕತ್ವ..!
ಪಂಜಾಬ್ ಕಿಂಗ್ಸ್ ತಂಡದಲ್ಲಿ ಚಹಲ್:
ವೈವಾಹಿಕ ಜೀವನವನ್ನು ಅಂತ್ಯಗೊಳಿಸಿರುವ ಯುಜ್ವೇಂದ್ರ ಚಹಲ್ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಚಹಲ್ ಅವರನ್ನು ಈ ಬಾರಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 18 ಕೋಟಿ ರೂ.ಗೆ ಖರೀದಿಸಿದೆ. ಈ ಬಾರಿಯ ಐಪಿಎಲ್ ಮುಕ್ತಾಯದೊಂದಿಗೆ ಯುಜ್ವೇಂದ್ರ ಚಹಲ್ ಅವರಿಗೆ 18 ಕೋಟಿ ರೂ. ಸಿಗಲಿದ್ದು, ಇದೇ ಹಣದಿಂದ ಅವರು ಧನಶ್ರೀ ವರ್ಮಾ ಅವರ ಪರಿಹಾರ ಮೊತ್ತ ನೀಡುವ ಸಾಧ್ಯತೆಯಿದೆ.
Published On - 8:32 am, Wed, 26 March 25