Sign In

By signing in or creating an account, you agree with Associated Broadcasting Company's Terms & Conditions and Privacy Policy.

RCBಯಲ್ಲಿ ಬ್ರಿಟಿಷ್ ಪಡೆ… ಸೋತು ಸುಣ್ಣವಾಗಲಿದೆ ಎಂದ ಗಿಲ್​ಕ್ರಿಸ್ಟ್

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಟ್ರೋಫಿ ಎತ್ತಿ ಹಿಡಿದ ನಾಯಕರಲ್ಲಿ ಆಸ್ಟ್ರೇಲಿಯಾದ ಆ್ಯಡಂ ಗಿಲ್​ಕ್ರಿಸ್ಟ್ ಕೂಡ ಒಬ್ಬರು. 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಮುನ್ನಡೆಸಿ ಗಿಲ್​ಕ್ರಿಸ್ಟ್​ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಹೀಗೆ ಐಪಿಎಲ್​ನ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಗಿಲ್​ಕ್ರಿಸ್ಟ್​ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಪ್ರದರ್ಶನ ಹೇಗಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

RCBಯಲ್ಲಿ ಬ್ರಿಟಿಷ್ ಪಡೆ... ಸೋತು ಸುಣ್ಣವಾಗಲಿದೆ ಎಂದ ಗಿಲ್​ಕ್ರಿಸ್ಟ್
RCB - Adam Gilchrist
Follow us
ಝಾಹಿರ್ ಯೂಸುಫ್
|

Updated on: Mar 22, 2025 | 10:25 AM

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2025) ಚೊಚ್ಚಲ ಟ್ರೋಫಿ ಎತ್ತಿ ಹಿಡಿಯಬೇಕೆಂಬ ಧ್ಯೇಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಐಪಿಎಲ್​ ಸೀಸನ್-18 ಗಾಗಿ ಸಜ್ಜಾಗಿ ನಿಂತಿದೆ. ಈ ಸಜ್ಜಾಗುವಿಕೆಯ ನಡುವೆ ಆರ್​ಸಿಬಿ ತಂಡವು ಈ ಬಾರಿ ಕೂಡ ಸೋತು ಸುಣ್ಣವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಆ್ಯಡಂ ಗಿಲ್​ಕ್ರಿಸ್ಟ್​.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್​ ನಡೆಸುವ ಕ್ಲಬ್ ಪ್ರೈರಿ ಫೈರ್ ಪಾಡ್‌ಕ್ಯಾಸ್ಟ್‌ನಲ್ಲಿ ಐಪಿಎಲ್ ಕುರಿತು ಮಾತನಾಡಿದ ಆ್ಯಡಂ ಗಿಲ್​ಕ್ರಿಸ್ಟ್​, ಈ ಬಾರಿ ಆರ್​ಸಿಬಿ ತಂಡವು ಕೊನೆಯ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇಂಗ್ಲೆಂಡ್ ಆಟಗಾರರು ಹೆಚ್ಚಿದ್ದಾರೆ. ಹೀಗಾಗಿ ಅವರು ಗೆಲ್ಲುವ ಸಾಧ್ಯತೆಯಿಲ್ಲ ಎಂದು ಗಿಲ್​ಕ್ರಿಸ್ಟ್, ಮೈಕಲ್ ವಾನ್ ಅವರ ಕಾಲೆಳೆದಿದ್ದಾರೆ.

ಈ ಮೂಲಕ ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವುದನ್ನು ನಿರೀಕ್ಷಿಸಬೇಡಿ. ನಾನು ವಿರಾಟ್ ಕೊಹ್ಲಿಯ ವಿರೋಧಿ ಏನಲ್ಲ. ಆರ್​ಸಿಬಿ ಅಭಿಮಾನಿಗಳ ವಿರುದ್ಧವೂ ಇಲ್ಲ. ಇಂತಹ ಕಠೋರ ಹೇಳಿಕೆಗೆ ಮೊದಲೇ ನಾನು ಆರ್​ಸಿಬಿ ಫ್ಯಾನ್ಸ್​ ಬಳಿ ಕ್ಷಮೆಯಾಚಿಸುತ್ತೇನೆ. ಇಂತಹ ಆಟಗಾರರನ್ನು ಆಯ್ಕೆ ಮಾಡಿದ ನಿಮ್ಮ ಆಯ್ಕೆಗಾರರ ಬಳಿ ಮಾತನಾಡಡಿದರೆ ಉತ್ತಮ ಎಂದು ಆ್ಯಡಂ ಗಿಲ್​ಕ್ರಿಸ್ಟ್ ಹೇಳಿದ್ದಾರೆ.

ಇದನ್ನೂ ಓದಿ
Image
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
Image
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
Image
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
Image
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

ಆ್ಯಡಂ ಗಿಲ್​ಕ್ರಿಸ್ಟ್ ಹೇಳಿದಂತೆ, ಈ ಬಾರಿ ಆರ್​ಸಿಬಿ ತಂಡದಲ್ಲಿ ಮೂವರು ಇಂಗ್ಲೆಂಡ್ ಆಟಗಾರರಿದ್ದಾರೆ. ಅವರೆಂದರೆ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್​ಸ್ಟೋನ್ ಹಾಗೂ ಜೇಕಬ್ ಬೆಥೆಲ್. ಈ ಮೂವರು ಆಟಗಾರರು ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಅತ್ತ ಮೂವರು ಇಂಗ್ಲೆಂಡ್ ಪ್ಲೇಯರ್​ಗಳು ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಆರ್​ಸಿಬಿ ತಂಡವು ಇಂಗ್ಲೆಂಡ್ ಆಟಗಾರರ ನೆರವಿನಿಂದ ಕಪ್ ಗೆಲ್ಲಲು ಸಾಧ್ಯವಿಲ್ಲ. ಈ ಬಾರಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಲಿದೆ ಎಂದು ಆ್ಯಡಂ ಗಿಲ್​ಕ್ರಿಸ್ಟ್ ಹೇಳಿದ್ದಾರೆ.

RCB ತಂಡದಲ್ಲಿರುವ ವಿದೇಶಿ ಆಟಗಾರರು:

  1. ಫಿಲ್ ಸಾಲ್ಟ್ (ಇಂಗ್ಲೆಂಡ್)
  2. ಲಿಯಾಮ್ ಲಿವಿಂಗ್​ಸ್ಟೋನ್ (ಇಂಗ್ಲೆಂಡ್)
  3. ಜೇಕಬ್ ಬೆಥೆಲ್ (ಇಂಗ್ಲೆಂಡ್)
  4. ಟಿಮ್ ಡೇವಿಡ್ (ಆಸ್ಟ್ರೇಲಿಯಾ)
  5. ಜೋಶ್ ಹ್ಯಾಝಲ್​ವುಡ್ (ಆಸ್ಟ್ರೇಲಿಯಾ)
  6. ಲುಂಗಿ ಎನ್​ಗಿಡಿ (ಸೌತ್ ಆಫ್ರಿಕಾ)
  7. ರೊಮಾರಿಯೊ ಶೆಫರ್ಡ್ (ವೆಸ್ಟ್ ಇಂಡೀಸ್)
  8. ನುವಾನ್ ತುಷಾರ (ಶ್ರೀಲಂಕಾ

ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್​ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್​ವುಡ್, ರಾಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್​ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್​ಗಿಡಿ.