Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐಪಿಎಲ್​ನಲ್ಲಿ 10 ನಿಮಯಗಳು ಬದಲಾವಣೆ

IPL 2025 Rule Changes: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 10 ನಿಯಮಗಳನ್ನು ಬದಲಿಸಲಾಗಿದೆ. ಈ ಎಲ್ಲಾ ನಿಯಮಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯದ ವೇಳೆ ಜಾರಿಗೆ ಬರಲಿದೆ. ಹಾಗಿದ್ರೆ ಈ ಬಾರಿಯ ಐಪಿಎಲ್​ನಲ್ಲಿ ಬದಲಾಗಿರುವ ನಿಯಮಗಳಾವುವು? ಎಂದು ನೋಡೋಣ...

IPL 2025: ಐಪಿಎಲ್​ನಲ್ಲಿ 10 ನಿಮಯಗಳು ಬದಲಾವಣೆ
Ipl 2025
Follow us
ಝಾಹಿರ್ ಯೂಸುಫ್
|

Updated on:Mar 22, 2025 | 7:59 AM

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಇಂದಿನಿಂದ ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಹಲವು ನಿಯಮಗಳು ಕೂಡ ಜಾರಿಯಾಗಲಿರುವುದು ವಿಶೇಷ. ಆ ನಿಯಮಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  1. ಎಂಜಲು ಬಳಕೆಗೆ ಅವಕಾಶ: ಕೋವಿಡ್ -19 ಸಾಂಕ್ರಾಮಿಕ ರೋಗದ ಭೀತಿ ಹಿನ್ನಲೆಯಲ್ಲಿ ಐಸಿಸಿ ಚೆಂಡಿನ ಮೇಲೆ ಎಂಜಲು ಬಳಕೆಯನ್ನು ನಿಷೇಧಿಸಿತ್ತು. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಈ ನಿಯಮವನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಬೌಲರ್​ಗಳು ಚೆಂಡಿನ ಮೇಲೆ ಎಂಜಲನ್ನು ಬಳಸಿ ರಿವರ್ಸ್ ಸ್ವಿಂಗ್ ಸಹಾಯವನ್ನು ಪಡೆಯಬಹುದು.
  2. ಎರಡು ಚೆಂಡುಗಳ ಬಳಕೆ: ರಾತ್ರಿ 7.30 ರಿಂದ ಶುರುವಾಗುವ ಪಂದ್ಯಗಳ ದ್ವಿತೀಯ ಇನಿಂಗ್ಸ್ ವೇಳೆ ಎರಡು ಚೆಂಡನ್ನು ಬಳಸಲು ಅವಕಾಶ ನೀಡಲಾಗಿದೆ. ಎರಡನೇ ಇನ್ನಿಂಗ್ಸ್‌ನ 11ನೇ ಓವರ್‌ನ ನಂತರ ಇಬ್ಬನಿಯ ಪರಿಣಾಮವನ್ನು ತಗ್ಗಿಸಲು ಅಂಪೈರ್‌ಗಳು ಚೆಂಡಿನ ಬದಲಾವಣೆಯನ್ನು ಅನುಮತಿಸಲಿದ್ದಾರೆ.
  3. ನಾಯಕನ ನಿಷೇಧ ತೆರವು: ಐಪಿಎಲ್​ನಲ್ಲಿ 3 ಬಾರಿ ಸ್ಲೋ ಓವರ್ ರೇಟ್​ ತಪ್ಪು ಮಾಡಿದ ನಾಯಕನಿಗೆ ಒಂದು ಪಂದ್ಯದ ನಿಷೇಧ ಹೇರಲಾಗುತ್ತಿತ್ತು. ಆದರೆ ಇನ್ಮುಂದೆ ಈ ನಿಯಮ ಇರುವುದಿಲ್ಲ. ಬದಲಾಗಿ ಡಿಮೆರಿಟ್ ಅಂಕಗಳು ಮತ್ತು 25 ರಿಂದ 75% ರಷ್ಟು ಪಂದ್ಯ ಶುಲ್ಕವನ್ನು ಕಡಿತ ಮಾಡಲಾಗುತ್ತದೆ.
  4. ವೈಡ್, ನೋಬಾಲ್​ಗೆ ಹೊಸ ತಂತ್ರಜ್ಞಾನ ಬಳಕೆ: ವೈಡ್ ಮತ್ತು ನೋ-ಬಾಲ್‌ಗಳ ತೀರ್ಪು ನೀಡಲು ಸಹ ತಂತ್ರಜ್ಞಾನವನ್ನು ಬಳಸಿಕೊಳ್ಳಲಿದ್ದಾರೆ. ಅಂದರೆ ತಲೆಯ ಮೇಲಿಂದ ಹೋದ ನೋ ಬಾಲ್ ಅಥವಾ ಬ್ಯಾಟರ್ ಆಫ್ ಸ್ಟಂಪ್​ನತ್ತ ಸಾಗಿದ್ದರೆ, ವೈಡ್ ತೀರ್ಪು ನೀಡಲು ಹಾಕ್-ಐ ಮತ್ತು ಬಾಲ್-ಟ್ರ್ಯಾಕಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಿದ್ದಾರೆ.
  5. ಇದನ್ನೂ ಓದಿ
    Image
    IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
    Image
    15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
    Image
    ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
    Image
    ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು
  6. ಪಂದ್ಯ ಶುಲ್ಕ ಜಾರಿ: ಈ ಬಾರಿಯ ಐಪಿಎಲ್​ನಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿರುವ ಆಟಗಾರರು ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. ಪಡೆಯಲಿದ್ದಾರೆ. ಅಂದರೆ ವೇತನವಲ್ಲದೆ, ಹೆಚ್ಚುವರಿ ಪಂದ್ಯ ಶುಲ್ಕ ಸಿಗಲಿದೆ.
  7. ಹೊಸ ಅಭ್ಯಾಸ ನಿಯಮಗಳು: ಬಿಸಿಸಿಐ ಪಂದ್ಯದ ಸ್ಥಳಗಳಲ್ಲಿ ಅಭ್ಯಾಸ ಮಾಡುವುದನ್ನು ನಿರ್ಬಂಧಿಸಿದೆ. ಇದರಲ್ಲಿ ಮುಕ್ತ ನೆಟ್ ಸೆಷನ್‌ಗಳ ನಿಷೇಧವೂ ಸೇರಿದೆ.
  8. ಡ್ರೆಸ್ಸಿಂಗ್ ರೂಮ್ ಪ್ರವೇಶ ನಿಷೇಧ : ಪಂದ್ಯದ ಮೊದಲು, ಸಮಯದಲ್ಲಿ ಅಥವಾ ನಂತರ ಆಟಗಾರರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಡ್ರೆಸ್ಸಿಂಗ್ ರೂಮ್‌ಗಳಿಗೆ ಪ್ರವೇಶಿಸುವುದನ್ನು ಬಿಸಿಸಿಐ ನಿಷೇಧಿಸಿದೆ. ಅವರು ಆಟದ ಮೈದಾನವನ್ನು ಪ್ರವೇಶಿಸಲು ಸಹ ಅವಕಾಶವಿಲ್ಲ.
  9. ಎಲ್ಇಡಿ ಬೋರ್ಡ್‌ ಬಳಿ ಕೂರುವುದು ನಿಷೇಧ: ಪಂದ್ಯ ನಡೆಯುವಾಗ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಬೌಂಡರಿ ಲೈನ್ ಬಳಿಯಿರುವ ಎಲ್ಇಡಿ ಬೋರ್ಡ್‌ಗಳು ಮುಂದೆ ಕುಳಿತುಕೊಳ್ಳುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಪ್ರತಿಯೊಬ್ಬರು ಡಗೌಟ್​ನಲ್ಲಿರುವುದನ್ನು ಕಡ್ಡಾಯ ಮಾಡಲಾಗಿದೆ.
  10. ಫ್ಲಾಪಿ ಹ್ಯಾಟ್​ಗೂ ನಿಷೇಧ: ಫ್ಲಾಫಿ ಹ್ಯಾಟ್ ಧರಿಸಿ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಕಾಣಿಸಿಕೊಳ್ಳುವಂತಿಲ್ಲ ಎಂದು ಬಿಸಿಸಿಐ ತಿಳಿಸಿದೆ.  ಈ ನಿಯಮವನ್ನು ಉಲ್ಲಂಘಿಸಿದರೆ ಮೊದಲ ಬಾರಿಗೆ ಎಚ್ಚರಿಕೆ ನೀಡಲಿದ್ದು, ಅದೇ ತಪ್ಪನ್ನು ಪುನರಾವರ್ತಿಸಿದರೆ ದಂಡ ವಿಧಿಸಲಾಗುತ್ತದೆ.
  11. ಸ್ಲೀವ್​ಲೆಸ್ ಜೆರ್ಸಿ ನಿಷೇಧ: ಪಂದ್ಯ ಮುಗಿದ ಬಳಿಕ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ತೋಳಿಲ್ಲದ ಜೆರ್ಸಿ ಧರಿಸಿ ಕಾಣಿಸಿಕೊಳ್ಳುವುದನ್ನು ಸಹ ನಿಷೇಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಮೊದಲ ಬಾರಿಗೆ ಎಚ್ಚರಿಕೆ ನೀಡಲಿದ್ದು, ಅದೇ ತಪ್ಪನ್ನು ಪುನರಾವರ್ತಿಸಿದರೆ ದಂಡ ವಿಧಿಸಲಾಗುವುದಾಗಿ ಬಿಸಿಸಿಐ ತಿಳಿಸಿದೆ.

Published On - 7:57 am, Sat, 22 March 25