ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಅತಿ ವೇಗದಲ್ಲಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದಿರುವ ಘಟನೆ ಲಕ್ನೋದ ಲುಲು ಮಾಲ್ ಬಳಿ ನಡೆದಿದೆ. ಅಪಘಾತವಾದ ಬಳಿಕ ಕಾರನ್ನು ನಿಲ್ಲಿಸದೆ ಸ್ಕೂಟಿಯನ್ನು ಎಳೆದೊಯ್ದ ಪರಿಣಾಮ ಬೆಂಕಿಯ ಕಿಡಿಗಳು ಕಾಣಿಸುತ್ತಿದ್ದವು. ಚಾಲಕನನ್ನು ವಾರಣಾಸಿಯ ಎಂಜಿನಿಯರ್ ಬ್ರಜೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಖಾಸಗಿ ವಲಯದ ಉದ್ಯೋಗಿಯಾಗಿರುವ ಹಜರತ್‌ಗಂಜ್ ನಿವಾಸಿ ಮನೀಶ್ ಸಿಂಗ್ ತನ್ನ ಸಹೋದರಿ ತನು ಜೊತೆ ತೆಲಿಬಾಗ್ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸಹೋದರರು ಗಾಳಿಯಲ್ಲಿ ಹಾರಿದರು ಆದರೆ ಅದೃಷ್ಟವಶಾತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದಾಗ್ಯೂ, ಅವರ ಸ್ಕೂಟರ್ ಎಸ್‌ಯುವಿಯ ಚಕ್ರಗಳ ಅಡಿಯಲ್ಲಿ ಸಿಲುಕಿಕೊಂಡಿತ್ತು.
ಲಕ್ನೋ, ಮಾರ್ಚ್ 26: ಅತಿ ವೇಗದಲ್ಲಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದಿರುವ ಘಟನೆ ಲಕ್ನೋದ ಲುಲು ಮಾಲ್ ಬಳಿ ನಡೆದಿದೆ. ಅಪಘಾತವಾದ ಬಳಿಕ ಕಾರನ್ನು ನಿಲ್ಲಿಸದೆ ಸ್ಕೂಟಿಯನ್ನು ಎಳೆದೊಯ್ದ ಪರಿಣಾಮ ಬೆಂಕಿಯ ಕಿಡಿಗಳು ಕಾಣಿಸುತ್ತಿದ್ದವು. ಚಾಲಕನನ್ನು ವಾರಣಾಸಿಯ ಎಂಜಿನಿಯರ್ ಬ್ರಜೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಖಾಸಗಿ ವಲಯದ ಉದ್ಯೋಗಿಯಾಗಿರುವ ಹಜರತ್‌ಗಂಜ್ ನಿವಾಸಿ ಮನೀಶ್ ಸಿಂಗ್ ತನ್ನ ಸಹೋದರಿ ತನು ಜೊತೆ ತೆಲಿಬಾಗ್ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸಹೋದರರು ಗಾಳಿಯಲ್ಲಿ ಹಾರಿದರು ಆದರೆ ಅದೃಷ್ಟವಶಾತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದಾಗ್ಯೂ, ಅವರ ಸ್ಕೂಟರ್ ಎಸ್‌ಯುವಿಯ ಚಕ್ರಗಳ ಅಡಿಯಲ್ಲಿ ಸಿಲುಕಿಕೊಂಡಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos