AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆನುಜುವೇಲಾದಿಂದ ಯಾರೇ ತೈಲ ಖರೀದಿಸಿದರೂ ಅವರಿಗೆ ಶೇ. 25 ಸುಂಕ: ಅಮೆರಿಕ ಅಧ್ಯಕ್ಷ ಘೋಷಣೆ; ಟ್ರಂಪ್​ ಕೋಪಕ್ಕೆ ಏನು ಕಾರಣ?

US to impose 25% tariffs on nations that buy Venezuela oil: ಅಮೆರಿಕ ರಾಷ್ಟ್ರಕ್ಕೆ ಅಪಾಯ ತರುತ್ತಿರುವ ವೆನುಜುವೇಲಾದಿಂದ ಯಾರೇ ತೈಲ ಖರೀದಿಸಿದರು, ಆ ದೇಶಕ್ಕೆ ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ವೆನುಜುವೇಲಾ ದೇಶ ಸಾಕಷ್ಟು ಸಂಖ್ಯೆಯಲ್ಲಿ ಕ್ರಿಮಿನಲ್​​ಗಳು, ಗ್ಯಾಂಗ್​​​ಸ್ಟರ್​​ಗಳು, ಭೂಗತಪಾತಕಿಗಳನ್ನು ಅಮೆರಿಕಕ್ಕೆ ಉದ್ದೇಶಪೂರ್ವಕವಾಗಿ ಕಳುಹಿಸುತ್ತಿದೆ ಎಂಬುದು ಟ್ರಂಪ್ ಆರೋಪ. ವೆನುಜುವೇಲಾದಿಂದ ಚೀನಾ ಅತಿಹೆಚ್ಚು ತೈಲ ಖರೀದಿಸುತ್ತಿದೆ. ಭಾರತವೂ ಸ್ವಲ್ಪ ಪ್ರಮಾಣದಲ್ಲಿ ಖರೀದಿ ಮಾಡುತ್ತಿದೆ.

ವೆನುಜುವೇಲಾದಿಂದ ಯಾರೇ ತೈಲ ಖರೀದಿಸಿದರೂ ಅವರಿಗೆ ಶೇ. 25 ಸುಂಕ: ಅಮೆರಿಕ ಅಧ್ಯಕ್ಷ ಘೋಷಣೆ; ಟ್ರಂಪ್​ ಕೋಪಕ್ಕೆ ಏನು ಕಾರಣ?
ಡೊನಾಲ್ಡ್ ಟ್ರಂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 25, 2025 | 12:55 PM

Share

ವಾಷಿಂಗ್ಟನ್, ಮಾರ್ಚ್ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸುಂಕ ಸಮರ ಮುಂದುವರಿಸಿದ್ದಾರೆ. ಏಪ್ರಿಲ್ 2ರಿಂದ ಅವರ ಪ್ರತಿಸುಂಕ (Retaliatory Tariffs) ಕ್ರಮ ಜಾರಿಗೆ ಬರುತ್ತಿದೆ. ಈಗ ವೆನುಜುವೇಲಾ ದೇಶದ ವಿರುದ್ಧ ಟ್ರಂಪ್ ಸುಂಕಾಸ್ತ್ರ ಹರಿಬಿಟ್ಟಿದ್ದಾರೆ. ಮಧ್ಯ ಅಮೆರಿಕದಲ್ಲಿರುವ ವೆನುಜುವೇಲಾ (Venezuela) ದೇಶದಿಂದ ಯಾರೇ ತೈಲ ಖರೀದಿಸಿದರೂ, ಆ ದೇಶದ ವಿರುದ್ಧ ಶೇ. 25ರಷ್ಟು ಸುಂಕ ಹೇರಲಾಗುವುದು ಎಂದು ಅಮೆರಿಕ ಅಧ್ಯಕ್ಷರು ಬೆದರಿಕೆ ಹಾಕಿದ್ದಾರೆ. ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್​​ನಲ್ಲಿ (Truth Social) ಪೋಸ್ಟ್ ಹಾಕಿದ್ದು, ಏಪ್ರಿಲ್ 2ರಿಂದ ಈ ಕ್ರಮ ಜಾರಿಗೆ ಬರುತ್ತದೆ ಎಂದಿದ್ದಾರೆ.

ವೆನುಜುವೇಲಾ ದೇಶದ ಮೇಲೆ ಟ್ರಂಪ್​​ಗೆ ಯಾಕೆ ಕೆಂಗಣ್ಣು?

ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್​ನಲ್ಲಿ ವೆನುಜುವೇಲಾ ವಿರುದ್ಧ ತಮಗ್ಯಾಕೆ ಕೋಪ ಎಂಬುದನ್ನು ವಿವರಿಸಿದ್ದಾರೆ. ವೆನುಜುವೇಲಾ ದೇಶವು ಸಾವಿರಾರು ಅಪರಾಧಿಗಳು, ಲೂಟಿಕೋರರು, ಗ್ಯಾಂಗ್​​ಸ್ಟರ್​​ಗಳನ್ನು ಅಮೆರಿಕಕ್ಕೆ ಕಳುಹಿಸಿದೆ ಎನ್ನುವುದು ಟ್ರಂಪ್ ಅವರ ಆರೋಪ.

ಭೂಗತಪಾತಕಿಗಳು, ಕೊಲೆಗಾರರು, ವಂಚಕರನ್ನು ಲಕ್ಷಾಂತರ ಸಂಖ್ಯೆಯಲ್ಲಿ ವೆನುಜುವೇಲಾ ಉದ್ದೇಶಪೂರ್ವಕವಾಗಿ ಅಮೆರಿಕಕ್ಕೆ ಕಳುಹಿಸಿದೆ. ಅಮೆರಿಕಕ್ಕೆ ಬಂದ ಗ್ಯಾಂಗುಳಲ್ಲಿ ಟ್ರೆನ್ ಡೀ ಅರಾಗುವಾ ಎನ್ನುವುದೂ ಒಂದು. ವಿದೇಶೀ ಭಯೋತ್ಪಾದಕ ಸಂಸ್ಥೆಗಳ ಪಟ್ಟಿಯಲ್ಲಿ ಇದೂ ಇದೆ. ಈ ಅಂಶಗಳನ್ನು ಉಲ್ಲೇಖಿಸಿರುವ ಟ್ರಂಪ್ ಅವರು, ಇವರೆಲ್ಲರನ್ನೂ ವೆನುಜುವೇಲಾಗೆ ಮರಳಿಸುವ ಪ್ರಕ್ರಿಯೆಯಲ್ಲಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ
Image
ಎಸ್​​​ಯುಸಿ ಮನ್ನಾ, ಟೆಲಿಕಾಂ ಕಂಪನಿಗಳು ನಿರಾಳ?
Image
ವಿದೇಶೀ ಹೂಡಿಕೆದಾರರಿಗೆ ನಿಯಮ ಸಡಿಲಿಸಿದ ಸೆಬಿ
Image
ಸಣ್ಣ ಮೊತ್ತದ ಯುಪಿಐ ಪಾವತಿಗೆ ಇನ್ಸೆಂಟಿವ್; ಸಂಪುಟ ಅನುಮೋದನೆ
Image
ಏಪ್ರಿಲ್​ನಲ್ಲೂ ಬಡ್ಡಿದರ ಕಟ್; 2025ರಲ್ಲಿ 4 ಬಾರಿ ಬಡ್ಡಿಕಡಿತ?

ಇದನ್ನೂ ಓದಿ: ಸಣ್ಣ ಸಾಲಗಳಿಗೆ ಹೆಚ್ಚುವರಿ ಶುಲ್ಕ ಬೇಡ; ಪಿಎಸ್​​ಎಲ್ ಗುರಿ ಮುಟ್ಟಬೇಕು: ಬ್ಯಾಂಕುಗಳಿಗೆ ಆರ್​​ಬಿಐ ತಾಕೀತು

‘ಅಮೆರಿಕ ಹಾಗೂ ಅದರ ಸ್ವಾತಂತ್ರ್ಯದ ಕಲ್ಪನೆಗಳಿಗೆ ವೆನುಜುವೇಲಾ ಮಾರಕ ಎನಿಸಿದೆ. ಹೀಗಾಗಿ, ಈ ದೇಶದಿಂದ ಯಾರಾದರೂ ಕೂಡ ತೈಲವನ್ನೇ ಆಗಲೀ ಅಥವಾ ಅನಿಲವನ್ನೇ ಆಗಲಿ ಖರೀದಿಸಿದರೆ ಆ ದೇಶಕ್ಕೆ ಶೇ. 25ರಷ್ಟು ಟ್ಯಾರಿಫ್ ಹಾಕಲಾಗುತ್ತದೆ’ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ವೆನುಜುವೇಲಾದಿಂದ ಚೀನಾ ಅತಿಹೆಚ್ಚು ತೈಲ ಖರೀದಿ…

ತೈಲ ಮತ್ತು ಅನಿಲವು ವೆನುಜುವೇಲಾದ ಪ್ರಮುಖ ರಫ್ತು ಸಂಪತ್ತು. ವಿಶ್ವದ ಹಲವು ದೇಶಗಳು ಇಲ್ಲಿಂದ ಕಚ್ಛಾ ತೈಲ ಖರೀದಿಸುತ್ತವೆ. ಆದರೆ, ವೆನುಜುವೇಲಾದ ಒಟ್ಟು ತೈಲ ರಫ್ತಿನಲ್ಲಿ ಶೇ. 68ರಷ್ಟು ಭಾಗವು ಚೀನಾಗೆ ಹೋಗುತ್ತದೆ. ಹೀಗಾಗಿ, ಟ್ರಂಪ್ ಅವರ ಅಸ್ತ್ರ ನೇರವಾಗಿ ಚೀನಾ ಮೇಲೆಯೇ ಬಿಟ್ಟಂತಿದೆ.

ಇದನ್ನೂ ಓದಿ: ಸರ್ಕಾರದಿಂದ ಎಸ್​​ಯುಸಿ ದರ ಮನ್ನಾ ಸಾಧ್ಯತೆ; ಏರ್​​ಟೆಲ್, ಜಿಯೋ, ವೊಡಾಫೋನ್​​ಗೆ ಸಾವಿರಾರು ಕೋಟಿ ರೂ ಉಳಿತಾಯ

ಚೀನಾದ ಸರಕುಗಳ ಮೇಲೆ ಟ್ರಂಪ್ ಅವರು ಶೇ. 20ರಷ್ಟು ಸುಂಕ ಹೇರಿದ್ದಾರೆ. ಈಗ ವೆನುಜುವೇಲಾದಿಂದ ಚೀನಾ ತೈಲ ಖರೀದಿ ಮುಂದುವರಿಸಿದಲ್ಲಿ ಹೆಚ್ಚುವರಿ ಶೇ. 25ರಷ್ಟು ಸುಂಕ ಹೇರಲಿದೆ ಅಮೆರಿಕ. ಹೀಗಾದಲ್ಲಿ, ಚೀನಾದ ಸರಕುಗಳು ಅಮೆರಿಕಕ್ಕೆ ರಫ್ತಾಗುವುದು ಬಹುತೇಕ ನಿಂತಂತಾಗುತ್ತದೆ.

ವೆನುಜುವೇಲಾದಿಂದ ಭಾರತದಿಂದಲೂ ತೈಲ ಖರೀದಿ…

ವೆನುಜುವೇಲಾ ದೇಶದ ತೈಲಕ್ಕೆ ಗ್ರಾಹಕರಾಗಿರುವ ದೇಶಗಳಲ್ಲಿ ಭಾರತವೂ ಇದೆ. ಆದರೆ, ಭಾರತದ ಒಟ್ಟಾರೆ ತೈಲ ಆಮದಿನಲ್ಲಿ ವೆನಿಜುವೆಲಾದ ಪಾಲು ಶೇ. 1.5ರಷ್ಟು ಮಾತ್ರ. ಹೀಗಾಗಿ, ಭಾರತಕ್ಕೆ ವೆನುಜುವೇಲಾದಿಂದ ತೈಲ ಖರೀದಿ ಕೈಬಿಟ್ಟರೂ ಯಾವ ಸಮಸ್ಯೆಯಾಗದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ