Galwan Clash: ಗಾಲ್ವಾನ್ ಸಂಘರ್ಷದಲ್ಲಿ 4 ಸೈನಿಕರ ಸಾವು, ಕೊನೆಗೂ ಒಪ್ಪಿಕೊಂಡ ಚೀನಾ ಸರ್ಕಾರ

China Admits Casualties in Galwan: ಕಳೆದ ವರ್ಷ ಜೂನ್ 15ರಂದು ಗಾಲ್ವಾನ್‌ ಕಣಿವೆಯ ವಾಸ್ತವ ಗಡಿ ನಿಯಂತ್ರಣಾ ರೇಖೆ (ಎಲ್‌ಎಸಿ) ಬಳಿ ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ನಡುವೆ ಸಂಘರ್ಷವೇರ್ಪಟ್ಟಿತ್ತು.

Galwan Clash: ಗಾಲ್ವಾನ್ ಸಂಘರ್ಷದಲ್ಲಿ 4 ಸೈನಿಕರ ಸಾವು, ಕೊನೆಗೂ ಒಪ್ಪಿಕೊಂಡ ಚೀನಾ ಸರ್ಕಾರ
ಲಡಾಖ್​ನಲ್ಲಿ ಮಿಲಿಟರಿ ಟ್ರಕ್ ಸಂಚರಿಸುತ್ತಿರುವ
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 19, 2021 | 2:05 PM

ಬೀಜಿಂಗ್: ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ (Galwan Clash) ಹತರಾಗಿರುವ ಸೈನಿಕರ ಹೆಸರುಗಳನ್ನು ಚೀನಾ ಬಹಿರಂಗಪಡಿಸಿದೆ. ಪೂರ್ವ ಲಡಾಖ್ ನಲ್ಲಿ 8 ತಿಂಗಳುಗಳ ಹಿಂದೆ ಸಂಘರ್ಷ ನಡೆಿದಿದ್ದು, ನಾಲ್ವರು ಸೈನಿಕರು ಹತರಾಗಿದ್ದಾರೆ ಎಂದು ಚೀನಾ ಹೇಳಿದೆ. ಹತರಾಗಿರುವ ಯೋಧರಿಗೆ ಅಲ್ಲಿನ ಸರ್ಕಾರ ಶೌರ್ಯ ಪ್ರಶಸ್ತಿ ನೀಡಲು ಮುಂದಾಗಿದೆ ಎಂದು ಚೀನಾ ಮಿಲಿಟರಿಯ ಅಧಿಕೃತ ಪತ್ರಿಕೆ ಪಿಎಲ್ಎ ಡೈಲಿ ವರದಿ ಮಾಡಿದೆ.

ಕಳೆದ ವರ್ಷ ಜೂನ್ 15ರಂದು ಗಾಲ್ವಾನ್‌ ಕಣಿವೆಯ ವಾಸ್ತವ ಗಡಿ ನಿಯಂತ್ರಣಾ ರೇಖೆ (ಎಲ್‌ಎಸಿ) ಬಳಿ ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ನಡುವೆ ಸಂಘರ್ಷವೇರ್ಪಟ್ಟಿತ್ತು. ಈ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹತರಾಗಿದ್ದರು ಎಂದು ಭಾರತ ಹೇಳಿತ್ತು. ಆದರೆ ಗಾಲ್ವಾನ್ ಘರ್ಷಣೆಯಲ್ಲಿ ಹತರಾದ ಸೈನಿಕರ ವಿವರಗಳನ್ನು ಬಹಿರಂಗಪಡಿಸಲು ಚೀನಾ ನಿರಾಕರಿಸಿತ್ತು. ಅಲ್ಲದೆ ಯಾವುದೇ ಸೈನಿಕರು ಹತರಾಗಿಲ್ಲ ಎಂದು ಹೇಳಿಕೆ ನೀಡಿತ್ತು.

ಚೆನ್ ಹೋಂಗ್ ಜುನ್, ಚೆನ್ ಕ್ಲಿಯಾಂಗ್ರಾಂಗ್, ಕ್ಸಿಯೊ ಸಿಯೊನ್ ಮತ್ತು ವಾಂಗ್ ಜೊರೊಮ್ ಎಂಬ ಹೆಸರಿನ ಯೋಧರು ಹುತಾತ್ಮರಾಗಿದ್ದಾರೆ ಎಂದು ಪಿಎಲ್ಎ ಡೈಲಿ ವರದಿಯಲ್ಲಿ ಉಲ್ಲೇಖವಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. ಸಂಘರ್ಷದಲ್ಲಿ ಚೀನಾಪಡೆಯ ಸಾವು ನೋವಿನ ಬಗ್ಗೆ ಅಲ್ಲಿನ ಸರ್ಕಾರ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಫೆಬ್ರವರಿ 10ರಂದು ರಷ್ಯಾದ ಸುದ್ದಿ ಸಂಸ್ಥೆ ಟಿಎಎಸ್ಎಸ್ ಗಾಲ್ವಾನ್ ಸಂಘರ್ಷದಲ್ಲಿ 45 ಯೋಧರು ಹತರಾಗಿದ್ದಾರೆ ಎಂದು ವರದಿ ಮಾಡಿರುವುದಾಗಿ ಭಾರತದ ಸೇನಾ ಕಮಾಂಡರ್ (ಉತ್ತರಭಾಗ) ಉಲ್ಲೇಖಿಸಿದ ಬೆನ್ನಲ್ಲೇ ಚೀನಾ ಯೋಧರ ಸಾವಿನ ಸಂಖ್ಯೆ ಬಹಿರಂಗಪಡಿಸಿದೆ.

ಗಾಲ್ವಾನ್ ಕಣಿವೆ ಬಳಿ ಗಸ್ತು ತಿರುಗುವುದಕ್ಕೆ ಚೀನಾ ಸೈನಿಕರು ಅಡ್ಡಿ ಪಡಿಸಿದ್ದು ಗಾಲ್ವಾನ್ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಸಂಘರ್ಷದಲ್ಲಿ ಹಲವಾರು ಭಾರತೀಯರನ್ನು ಚೀನಾ ವಶಕ್ಕೆ ಪಡೆದುಕೊಂಡು ಆಮೇಲೆ ಬಿಡುಗಡೆ ಮಾಡಿತ್ತು . ಹುತಾತ್ಮರಾದ ಭಾರತೀಯ ಯೋಧ ಕರ್ನಲ್ ಸಂತೋಷ್ ಬಾಬು (ಕಮಾಂಡಿಗ್ ಆಫೀಸರ್ 16 ಬಿಹಾರ್) ಅವರಿಗೆ ಮರಣೋತ್ತರ ಮಹಾವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಜೂನ್ 15ರಂದು ನಡೆದದ್ದು ಏನು? ಭಾರತ-ಚೀನಾ ನಡುವಣ ಗಡಿ ಸಂಘರ್ಷ ದಶಕಗಳಷ್ಟು ಹಳೆಯದು. ಜೂನ್ 15ರಂದು,  20 ಭಾರತೀಯ ಯೋಧರು ಹುತಾತ್ಮರಾಗಲು ಕಾರಣವಾದ ಸಂಘರ್ಷದ ಮುನ್ಸೂಚನೆ ಜೂನ್ 6ರಂದೇ ದೊರೆತಿತ್ತು. ಲಡಾಖ್‌ನ ಗಾಲ್ವನ್ ವಾಸ್ತವ ಗಡಿ ರೇಖೆ ಬಳಿ ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಸೈನಿಕರು ಭಾರತದ ಗಡಿಯೊಳಗೆ ಬೀಡುಬಿಟ್ಟಿದ್ದರು. ಭಾರತಕ್ಕೆ ಸೇರಿದ ಭೂಪ್ರದೇಶದಲ್ಲಿ ಚೀನಾ ಯೋಧರು ಟೆಂಟ್ ಹಾಕಿರುವ ವಿಚಾರವಾಗಿ ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಟ್ಟದ ಮಾತುಕತೆ ಜೂನ್ 6ರಂದು ನಡೆದಿತ್ತು. ಚೀನಾ ಅಲ್ಲಿಂದ ಸೇನೆಯನ್ನು ಹಿಂಪಡೆದಿದೆ ಎಂದು ಹೇಳಿತ್ತಾದರೂ ಅದನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ.

ಜೂನ್ 15ರಂದು 16ನೇ ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ. ಸಂತೋಷ್ ಬಾಬು ನೇತೃತ್ವದ ಯೋಧರ ತಂಡ ಗಸ್ತು ತಿರುಗಿದಾಗ ಗಸ್ತು ಪಾಯಿಂಟ್ 14 (ಪಿಪಿ14) ಬಳಿ ಚೀನಾ ಯೋಧರ ಟೆಂಟ್ ಇರುವುದು ಗಮನಕ್ಕೆ ಬಂದಿತ್ತು. ಈ ವೇಳೆ ಬಲ ಪ್ರಯೋಗದ ಮೂಲಕ ಚೀನಾ ಸೈನಿಕರನ್ನು ಭಾರತೀಯ ಯೋಧರು ಗಸ್ತು ಪಾಯಿಂಟ್‌ 14ರ ಆಚೆಗೆ ಹಿಮ್ಮೆಟ್ಟಿಸಿದ್ದರು. ಬಳಿಕ ಚೀನಾ ಯೋಧರು ಭಾರತದ ನೆಲದಲ್ಲಿ ಹಾಕಿದ್ದ ಟೆಂಟ್‌ಗಳನ್ನು ಸಂತೋಷ್ ಬಾಬು ನೇತೃತ್ವದ ತಂಡ ಸುಟ್ಟುಹಾಕಿ ವೀಕ್ಷಣಾ ಪೋಸ್ಟ್‌ ಅನ್ನೂ ನಾಶಪಡಿಸಿತ್ತು. ನಂತರ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

ಇದನ್ನೂ ಓದಿ: ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬುಗೆ ಮಹಾವೀರ ಚಕ್ರ ಗೌರವ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ