ಅಕಾಲಿಕ ಮಳೆಯಿಂದ ಕೈಗೆ ಬಂದ ಬಾಳೆ ಬೆಳೆಯನ್ನು ಕಳೆದುಕೊಂಡ ಕಲಬುರಗಿ ನಂದೂರ ಗ್ರಾಮದ ರೈತ
ರಾಥೋಡ್ ಅವರ ಪತ್ನಿ ಹೇಳುವ ಪ್ರಕಾರ ಬಾಳೆ ಬೆಳೆಯಲು ಅವರು ಸುಮಾರು ₹ 2.5 ಲಕ್ಷ ಖರ್ಚು ಮಾಡಿದ್ದಾರೆ ಮತ್ತು ಬೇಸಿಗೆಯಲ್ಲಿ ನೀರು ಕಮ್ಮಿಯಾಗಿದ್ದರಿಂದ ₹ 1.5 ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿಯನ್ನು ಕೊರೆಸಿದ್ದಾರೆ. ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರಬೇಕಿದ್ದ ಬಾಳೆ ಮಳೆಯಿಂದಾಗಿ ನೆಲಕಚ್ಚಿದೆ ಎಂದು ವೇದನೆಯಿಂದ ಅವರು ಹೇಳುತ್ತಾರೆ.
ಕಲಬುರಗಿ, ಮೇ 15: ರಾತ್ರಿ ಸುರಿದ ಅಕಾಲಿಕ ಮಳೆ ಜಿಲ್ಲೆಯ ನಂದೂರ ಗ್ರಾಮದ ಕಿಶೋರ್ ರಾಠೋಡ್ (Kishore Rathod) ಹೆಸರಿನ ರೈತನ ಬಾಳೆತೋಟವನ್ನು ನಾಶಮಾಡಿದೆ. ಕಳೆದ ಒಂದು ವರ್ಷದಿಂದ ಅವರ ಕುಟುಂಬ ಜೋಪಾನ ಮಾಡಿಕೊಂಡು ಬಂದಿದ್ದ ಬಾಳೆಗಿಡಗಳು ನೆಲಕಚ್ಚಿವೆ ಮತ್ತು ಬಾಳೆಕಾಯಿ ಕೆಳಗೆಬಿದ್ದು ಹಾಳಾಗಿವೆ. ಇವತ್ತು ಬೆಳಗ್ಗೆ ತೋಟಕ್ಕೆ ಬಂದ ಕಿಶೋರ್ ಮಳೆಯಿಂದ ಆಗಿರುವ ಅನಾಹುತ ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪತ್ನಿ ಹೇಳುತ್ತಾರೆ. ನಮ್ಮ ವರದಿಗಾರನೊಂದಿಗೆ ರಾಠೋಡ್ ಕುಟುಂಬದ ಸದಸ್ಯರು ಮಾತಾಡಿದ್ದಾರೆ.
ಇದನ್ನೂ ಓದಿ: ಅಕಾಲಿಕ ಮಳೆಯಿಂದ ಬೆಳೆ ಹಾನಿ: ತರಕಾರಿ ಬೆಲೆ ಏರಿಕೆ, ಗ್ರಾಹಕರಿಗೆ ಸಂಕಷ್ಟ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ