Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕಾಲಿಕ ಮಳೆಯಿಂದ ಧಾರವಾಡದ ಮಾವು ಬೆಳೆಗಾರರಿಗೆ ಅಪಾರ ನಷ್ಟ; ಸಂಕಷ್ಟದಲ್ಲಿ ರೈತರು

ಧಾರವಾಡದಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾವಿನ ಕಾಯಿಗಳು ಮತ್ತು ಗಿಡಗಳ ಟೊಂಗೆಗಳು ಹಾನಿಗೊಳಗಾಗಿವೆ. ಈ ಹಿಂದೆ ಹೂವು ಉದುರಿ ಹೋಗಿದ್ದರಿಂದಲೇ ರೈತರು ಆತಂಕದಲ್ಲಿದ್ದರು. ಈಗಿನ ಹಾನಿಯಿಂದಾಗಿ ಅವರ ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ವರ್ಷಗಳಿಂದ ಮಾವು ಬೆಳೆಯನ್ನು ಅವಲಂಬಿಸಿರುವ ರೈತರು ಇದರಿಂದ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ವಿವೇಕ ಬಿರಾದಾರ

Updated on: Apr 12, 2025 | 9:13 PM

ಈ ಬಾರಿಯೂ ಧಾರವಾಡದ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಮಾವಿನ ಕಾಯಿಗಳು ಉದುರಿವೆ. ಜೊತೆಗೆ ಅನೇಕ ಕಡೆಗಳಲ್ಲಿ ಗಿಡದ ಟೊಂಗೆಗಳು ಕೂಡ ಮುರಿದಿವೆ. ಇದರಿಂದಾಗಿ ಈ ಬಾರಿಯೂ ಮಾವು ಬೆಳೆಗಾರರು ನಷ್ಟ ಅನುಭವಿಸುವ ಚಿಂತೆಯಲ್ಲಿದ್ದಾರೆ.

1 / 7
ಧಾರವಾಡ ಜಿಲ್ಲೆ ಆಲ್ಫ್ಯಾನ್ಸೋ ಮಾವಿಗೆ ಸಾಕಷ್ಟು ಪ್ರಸಿದ್ಧಿ. ಇಲ್ಲಿನ ಈ ತಳಿಗೆ ವಿದೇಶದಲ್ಲಿಯೂ ಬೇಡಿಕೆ ಇದೆ. ಹೀಗಾಗಿ ಬೇಸಿಗೆ ಬಂದರೆ ಸಾಕು ಮಾವು ಬೆಳೆಗಾರರು ಒಂದಷ್ಟು ಆದಾಯ ಬರುತ್ತೆ ಅನ್ನೋ ನಿರೀಕ್ಷೆಯಲ್ಲಿರುತ್ತಾರೆ. ಆದರೆ, ಈ ಬಾರಿ ಹೂವು ಬಿಟ್ಟ ಬಳಿಕ ಹವಾಮಾನ ವೈಪರೀತ್ಯದಿಂದಾಗಿ ಬಹುತೇಕ ಗಿಡಗಳು ಚಿಗುರೊಡೆದು ಬಿಟ್ಟವು. ಇದರಿಂದಾಗಿ ರೈತರು ಕಂಗಾಲಾಗಿ ಹೋದರು.

2 / 7
ಹೂವುಗಳು ಉದುರಿ, ಗಿಡಗಳೆಲ್ಲ ಖಾಲಿ ಖಾಲಿಯಾಗಿ ನಿಂತು ಬಿಟ್ಟವು. ಇಂಥ ಸ್ಥಿತಿಯಲ್ಲಿಯೇ ಇದೀಗ ಪೂರ್ವ ಮುಂಗಾರು ಮಳೆ ಬಿದ್ದಿದೆ. ಕೇವಲ ಮಳೆಯಾಗಿದ್ದರೇ ಅಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಅದರೊಂದಿಗೆ ಬೀಸಿದ ಬಿರುಗಾಳಿ ಹಾಗೂ ಬಿದ್ದ ಆಲಿಕಲ್ಲಿನಿಂದ ಮಾವಿನ ಕಾಯಿಗಳು ಕೂಡ ಉದುರಿ ಹೋಗಿವೆ.

3 / 7
ಗಾಳಿ ಹಾಗೂ ಮಳೆಯ ಹೊಡೆತಕ್ಕೆ ಬರೀ ಕಾಯಿಗಳಷ್ಟೇ ಉದುರಿಲ್ಲ. ಬದಲಿಗೆ ಬಹುತೇಕ ಕಡೆಗಳಲ್ಲಿ ರೆಂಬೆ-ಕೊಂಬೆಗಳು ಕೂಡ ಮುರಿದು ಬಿದ್ದಿವೆ. ಗಿಡಗಳು ಕಾಯಿ ಬಿಡುವ ವೇಳೆ. ಚಿಗುರೊಡೆದಿದ್ದಕ್ಕೆ ಕಂಗಾಲಾಗಿದ್ದ ರೈತರು, ಇದೀಗ ಈ ರೆಂಬೆಗಳು ಮುರಿದಿದ್ದಕ್ಕೆ ಮತ್ತಷ್ಟು ಪರದಾಡುತ್ತಿದ್ದಾರೆ.

4 / 7
ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್​ಗೂ ಅಧಿಕ ಮಾವಿನ ಬೆಳೆ ಇದೆ. ಆದರೆ ಬೇಡಿಕೆಗೆ ತಕ್ಕಂತೆ ಮಾವು ಪೂರೈಸಲು ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ರೈತರಿಗೆ ಸಾಧ್ಯವಾಗುತ್ತಿಲ್ಲ. ಇದೀಗ ಈ ಗಾಳಿ ಮತ್ತು ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಷವಿಡೀ ರೈತರು ಈ ಮಾವಿನ ಗಿಡಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿರುತ್ತಾರೆ.

5 / 7
ಎಕರೆಗೆ ಏನಿಲ್ಲವೆಂದರೂ 25 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ವಿವಿಧ ರೋಗಗಳಿಂದ ರಕ್ಷಿಸಿಕೊಳ್ಳಲು ಬಗೆ ಬಗೆಯ ರಸಾಯನಿಕ ಸಿಂಪರಣೆ ಮಾಡಿರುತ್ತಾರೆ. ಇಷ್ಟೆಲ್ಲ ಆದರೂ ಮತ್ತೆ ಇಂಥ ಗಾಳಿ, ಆಲೀಕಲ್ಲು ಮಳೆಯಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

6 / 7
ಎಷ್ಟೋ ದಶಕಗಳಿಂದ ಇದೇ ಕೃಷಿಯ ಮೇಲೆ ಅವಲಂಬಿತರಾಗಿರುವ ರೈತರು ಇತ್ತೀಚಿನ ದಿನಗಳಲ್ಲಿ ಮಾವಿನ ಸಹವಾಸವೇ ಬೇಡ ಅನ್ನುತ್ತಿದ್ದಾರೆ. ಎಷ್ಟೋ ಕಡೆಗಳಲ್ಲಿ ರೈತರು ಮಾವಿನ ಮರಗಳನ್ನು ಕತ್ತರಿಸಿ, ಬೇರೆ ಕೃಷಿ ಆರಂಭಿಸಿದ್ದಾರೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಮಾವಿನ ಉತ್ಪಾದನೆ ಕೂಡ ಕಡಿಮೆಯಾಗುತ್ತಾ ಸಾಗಿದೆ.

7 / 7
Follow us