ಚಾಲಕರನ್ನು ನೌಕರರು ಎಂದು ಪರಿಗಣಿಸಿ: ಊಬರ್​ಗೆ ಲಂಡನ್​ ಸುಪ್ರೀಂಕೋರ್ಟ್​ ನಿರ್ದೇಶನ

ಕೋರ್ಟ್​ ತೀರ್ಪಿನ ಬಗ್ಗೆ ಊಬರ್​ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ನಾವು ಕೋರ್ಟ್​ ಆದೇಶವನ್ನು ಗೌರವಿಸುತ್ತೇವೆ ಎಂದು ಹೇಳಿದೆ.

  • TV9 Web Team
  • Published On - 20:38 PM, 19 Feb 2021
ಚಾಲಕರನ್ನು ನೌಕರರು ಎಂದು ಪರಿಗಣಿಸಿ: ಊಬರ್​ಗೆ ಲಂಡನ್​ ಸುಪ್ರೀಂಕೋರ್ಟ್​ ನಿರ್ದೇಶನ
ಊಬರ್​

ಲಂಡನ್​: ಊಬರ್​ ಸಂಸ್ಥೆಯಡಿಯಲ್ಲಿ ಕಾರು ಚಲಾಯಿಸುವವರನ್ನು ನೌಕರರು ಎಂದು ಪರಿಗಣಿಸುವಂತೆ ಲಂಡನ್ ಸುಪ್ರೀಂಕೋರ್ಟ್​ ಊಬರ್​ ಸಂಸ್ಥೆಗೆ ಆದೇಶಿಸಿದೆ. ಈ ಮೂಲಕ ಹಲವು ವರ್ಷಗಳಿಂದ ಕೋರ್ಟ್​ನಲ್ಲಿ ನಡೆಯುತ್ತಿದ್ದ ಪ್ರಕರಣದಲ್ಲಿ ಊಬರ್​ಗೆ ಸೋಲುಂಟಾಗಿದೆ.

ಊಬರ್​ ಚಾಲಕರನ್ನು ಸಂಸ್ಥೆ ಸಿಬ್ಬಂದಿ ಎಂದು ಪರಿಗಣಿಸಿಲ್ಲ. ಬದಲಿಗೆ ಅವರನ್ನು ಗುತ್ತಿಗೆ ನೌಕರರ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ಈಗ ಇಂಗ್ಲೆಂಡ್ ಕೋರ್ಟ್​ ನೀಡಿದ ಹೊಸ ಆದೇಶದ ಅಡಿಯಲ್ಲಿ, ಊಬರ್​ ಸಿಬ್ಬಂದಿಗೆ ಕನಿಷ್ಠ ವೇತನ, ರಜೆ, ಅನಾರೋಗ್ಯ ರಜೆಯ ಹಕ್ಕು ಹಾಗೂ ಉದ್ಯೋಗ ಭದ್ರತೆ ಒದಗಿಸುವುದು ಕಡ್ಡಾಯವಾಗಿದೆ.

ಊಬರ್​ ಸಂಸ್ಥೆ ಚಾಲಕರು 2016ರಲ್ಲಿ ಪ್ರಕರಣವೊಂದನ್ನು ದಾಖಲು ಮಾಡಿದ್ದರು. ನಮ್ಮನ್ನು ಹೆಚ್ಚು ದುಡಿಸಿಕೊಳ್ಳುತ್ತಾರೆ ಮತ್ತು ಕಡಿಮೆ ವೇತನ ನೀಡುತ್ತಾರೆ. ಹೀಗಾಗಿ, ನಮ್ಮನ್ನು ನೌಕರರು ಎಂದು ಪರಿಗಣಿಸುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈಗ ಊಬರ್​ ಸಂಸ್ಥೆಯ ಪರವಾಗಿ ತೀರ್ಪು ಹೊರ ಬಿದ್ದಿದೆ.

ಕೋರ್ಟ್​ ತೀರ್ಪಿನ ಬಗ್ಗೆ ಊಬರ್​ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ನಾವು ಕೋರ್ಟ್​ ಆದೇಶವನ್ನು ಗೌರವಿಸುತ್ತೇವೆ ಎಂದು ಹೇಳಿದೆ. ಈ ಮೂಲಕ ಕೋರ್ಟ್​​ ಆದೇಶವನ್ನು ಅನ್ವಯ ಮಾಡಿಕೊಳ್ಳುವ ಸೂಚನೆ ನೀಡಿದೆ.

ಇಂಗ್ಲೆಂಡ್​ನಲ್ಲಿ ಹೊರಡಿಸಿರುವ ಆದೇಶ ವಿಶ್ವಾದ್ಯಂತ ಪರಿಣಾಮ ಬೀರಲಿದೆ. ಭಾರತದಲ್ಲೂ ಸದ್ಯ ಚಾಲಕರನ್ನು ಊಬರ್​ ಸಂಸ್ಥೆ ಗುತ್ತಿಗೆ ಆಧಾರದ​ ಮೇಲೆ ತೆಗೆದುಕೊಂಡಿದೆ. ಹೀಗಾಗಿ, ಭಾರತ ಸೇರಿ ದೇಶದ ಅನೇಕ ರಾಷ್ಟ್ರಗಳಲ್ಲಿ ಊಬರ್​ ಚಾಲಕರು ಕೋರ್ಟ್​ನಲ್ಲಿ ಇದೇ ಮಾದರಿಯ ಅರ್ಜಿ ಸಲ್ಲಿಕೆ ಮಾಡಿ ತಮ್ಮನ್ನು ಸಿಬ್ಬಂದಿ ಎಂದು ಪರಿಗಣಿಸುವಂತೆ ಕೋರಬಹುದಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ಊಬರ್​-ಓಲಾ ಚಾಲಕರು ಪ್ರತಿಭಟನೆಗೆ ಇಳಿದಿದ್ದರು. ಪ್ರತಿ ಕಿ.ಮೀ.ಗೆ ಸಂಸ್ಥೆಗೆ ತೆಗೆದುಕೊಳ್ಳುತ್ತಿರುವ ಕಮಿಷನ್​ ಹಣವನ್ನು ಕಡಿಮೆ ಮಾಡಬೇಕು ಎನ್ನುವುದು ಚಾಲಕರ ಆಗ್ರಹವಾಗಿತ್ತು.

ಇದನ್ನೂ ಓದಿ: ಇದೇನಿದು Koo.. ಏನಿದರ ವಿಶೇಷತೆ? ಕೇಂದ್ರ ಸರ್ಕಾರ ಈ ಆ್ಯಪ್​ಗೆ ಮಹತ್ವ ಕೊಡ್ತಿರೋದೇಕೆ?