ಗ್ರೇಟರ್ ಬೆಂಗಳೂರು ಡಿಕೆ ಶಿವಕುಮಾರ್ ಕಲ್ಪನೆಯ ಕೂಸು, ಬೆಂಗಳೂರಲ್ಲಿ ವಿನೂತನ ಪ್ರಯೋಗ: ಜಿ ಪರಮೇಶ್ವರ್
ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ನಮ್ಮ ರಾಜ್ಯದ ಸೊಸೆ ಮತ್ತು ದೇಶದ ಮಗಳು, ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಸಚಿವ ಕುಂವರ್ ವಿಜಯ್ ಶಾ ತಮ್ಮ ಕೀಳು ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ, ಅವರ ವಿರುದ್ಧ ಎಫ್ಐಅರ್ ದಾಖಲಿಸುವಂತೆ ಬೆಳಗಾವಿಯ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು, ಮೇ 15: ಇಂದು ತಮ್ಮ 64 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರಿಗೆ ಗೃಹ ಸಚಿವ ಜಿ ಪರಮೇಶ್ವರ್ ಶುಭಾಷಯಗಳನ್ನು ಕೋರಿದರು. ಮುಂದುವರಿದು ಮಾತಾಡಿದ ಅವರು ಇಂದಿನಿಂದ ಗ್ರೇಟರ್ ಬೆಂಗಳೂರು ಅಧಿನಿಯಮ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಕಲ್ಪನೆಯನ್ನು ಹುಟ್ಟುಹಾಕಿರುವ ಶಿವಕುಮಾರ್ಗೆ ಅಭಿನಂದನೆ ಸಲ್ಲಿಸಿದರು. ಗ್ರೇಟರ್ ಬೆಂಗಳೂರು ಅಧಿನಿಯಮವು ಸರ್ಕಾರದ ಕಾರ್ಯಕ್ರಮ ಮತ್ತು ಯೋಜನೆಗಳ ಮೇಲೆ ಹೆಚ್ಚಿನ ಫೋಕಸ್ ಮಾಡಿ ಎಲ್ಲರಿಗೂ ತಲುಪಿಸಲು ನೆರವಾಗುತ್ತದೆ, ಬೆಂಗಳೂರಲ್ಲಿ ಇದು ವಿನೂತನ ಪ್ರಯೋಗ, ಇದರ ಸಫಲತೆ ಮತ್ತು ಪ್ರಸ್ತುತತೆಯ ಬಗ್ಗೆ ಈಗಲೇ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ಹರೀಶ್ ಪೂಂಜಾ ದ್ವೇಷದ ರಾಜಕಾರಣ ಅಂದಿದ್ದು ಗೊತ್ತಿಲ್ಲ, ಶಾಸಕನ ವಿರುದ್ಧ ವಿನಾಕಾರಣ ಕೇಸ್ ಮಾಡಲಾಗಲ್ಲ: ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ