AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಕಿರಾನಾ ಬೆಟ್ಟಗಳಲ್ಲಿ ವಿಕಿರಣ ಸೋರಿಕೆಯಾಗಿದ್ದು ಸುಳ್ಳು

ಭಾರತ ಮತ್ತು ಪಾಕಿಸ್ತಾನ ನಡುವಿನ ಸುದೀರ್ಘ ಮಿಲಿಟರಿ ಘರ್ಷಣೆ ಕದನ ವಿರಾಮದೊಂದಿಗೆ ಅಂತ್ಯಗೊಂಡಿದೆ. ಈ ಅವಧಿಯಲ್ಲಿ, ಭಾರತವು ಪಾಕಿಸ್ತಾನದೊಳಗಿನ ಭಯೋತ್ಪಾದಕ ನೆಲೆಗಳನ್ನು ಹಾಗೂ ಅದರ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿತು. ಏತನ್ಮಧ್ಯೆ, ಭಾರತವು ಪಾಕಿಸ್ತಾನದ ಪರಮಾಣು ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಅದಕ್ಕೆ ಹಾನಿ ಮಾಡಿದೆ ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿ ಹೋಗಿದ್ದವು. ಪಾಕಿಸ್ತಾನದಲ್ಲಿರುವ ಯಾವುದೇ ಪರಮಾಣು ತಾಣವನ್ನು ಗುರಿಯಾಗಿಸಿಕೊಂಡ ವರದಿಗಳನ್ನು ಭಾರತೀಯ ಮಿಲಿಟರಿ ಅಧಿಕಾರಿಗಳು ನಿರಾಕರಿಸಿದ್ದರು, ಇದೀಗ ಅದು ಸುಳ್ಳು ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯಾದ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(IAEA) ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ಕಿರಾನಾ ಬೆಟ್ಟಗಳಲ್ಲಿ ವಿಕಿರಣ ಸೋರಿಕೆಯಾಗಿದ್ದು ಸುಳ್ಳು
ಪಾಕಿಸ್ತಾನ
ನಯನಾ ರಾಜೀವ್
|

Updated on:May 15, 2025 | 11:09 AM

Share

ಇಸ್ಲಾಮಾಬಾದ್, ಮೇ 15: ಆಪರೇಷನ್ ಸಿಂಧೂರ್(Operation Sindoor) ಅಡಿಯಲ್ಲಿ ಪಾಕಿಸ್ತಾನದಲ್ಲಿ ಭಾರತೀಯ ವಾಯುಪಡೆ ನಡೆಸಿದ ಕಾರ್ಯಾಚರಣೆ ಬಳಿಕ ಕಿರಾನಾ ಬೆಟ್ಟಗಳಲ್ಲಿ ವಿಕಿರಣಗಳು ಸೋರಿಕೆಯಾಗುತ್ತಿದೆ ಎನ್ನುವ ಮಾಹಿತಿ ಹರಿದಾಡಿತ್ತು ಆದರೆ ಅದು ಸುಳ್ಳು ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯಾದ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(IAEA) ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ಯಾವುದೇ ಪರಮಾಣು ಸ್ಥಾವರದಿಂದ ವಿಕಿರಣ ಸೋರಿಕೆ ಅಥವಾ ಹೊರಸೂಸುವಿಕೆಯ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಪತ್ರಿಕಾ ವಿಭಾಗದ ಫ್ರೆಡೆರಿಕ್ ಡಹ್ಲ್ ಟೈಮ್ಸ್ ಆಫ್ ಇಂಡಿಯಾದ ಪ್ರಶ್ನೆಗೆ ಇಮೇಲ್ ಮೂಲಕ ನೀಡಿದ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಕೆಲವು ಸಾಮಾಜಿಕ ಮಾಧ್ಯಮಗಳು ಹಾಗೂ ವಿದೇಶಿ ಮಾಧ್ಯಮ ಸಂಸ್ಥೆಗಳು ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎನ್ನಲಾದ ಕಿರಾನಾ ಬೆಟ್ಟಗಳನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿತ್ತು ಎನ್ನುವ ಸುದ್ದಿಯನ್ನು ಬಿತ್ತರಿಸಿದ್ದವು.

ಭಾರತೀಯ ಸೇನೆಯೂ ಈ ಹೇಳಿಕೆ ತಿರಸ್ಕರಿಸಿತ್ತು ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ. ಭಾರ್ತಿ ಕೂಡ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಿರಾನಾ ಬೆಟ್ಟಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದಕ್ಕಾಗಿ ಧನ್ಯವಾದಗಳು. ನಮಗೆ ಇದರ ಬಗ್ಗೆ ತಿಳಿದಿರಲಿಲ್ಲ. ನಾವು ಕಿರಾನಾ ಬೆಟ್ಟಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಎಂದು ನಕ್ಕಿದ್ದರು.

ಇದನ್ನೂ ಓದಿ
Image
ಪ್ರಮುಖ ವಾಯುನೆಲೆ ಧ್ವಂಸಗೊಳಿಸಿದ ಭಾರತ, ಇದಕ್ಕೆ ಬೆದರಿತೇ ಪಾಕಿಸ್ತಾನ?
Image
ಪ್ರಬಲ ಸಮರ ತಂತ್ರ: ಭಾರತದ ಉದಾಹರಣೆ ಕೊಟ್ಟ ಜಾನ್ ಸ್ಪೆನ್ಸರ್
Image
1971 ಹಾಗೂ 2025ರ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ: ಶಶಿ ತರೂರ್
Image
ಭಾರತದ ಈ ಮಿಸೈಲ್ ದಾಳಿಗೆ ಪಾಕ್ ಮಾತ್ರವಲ್ಲ, ಅಮೆರಿಕಕ್ಕೂ ಆಗಿತ್ತು ನಡುಕ

ಮತ್ತಷ್ಟು ಓದಿ: ಇದು ಟಾಪ್ ಸೀಕ್ರೆಟ್… ಆಪರೇಷನ್ ಸಿಂದೂರದಿಂದ ಹಲವರ ಬಣ್ಣ ಬಯಲು; ಅಮೆರಿಕ ನಡುಗಲು ನಿಜ ಕಾರಣ ಏನು ಗೊತ್ತಾ?

ಅಮೆರಿಕದ ಮೌನ ಮೇ 13 ರಂದು ವಾಷಿಂಗ್ಟನ್ ಡಿಸಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ಥಾಮಸ್ ಪಿಗೋಟ್ ಅವರ ಬಳಿ, ವಿಕಿರಣ ಸೋರಿಕೆ ವರದಿಗಳ ನಂತರ ಅಮೆರಿಕವು ಪಾಕಿಸ್ತಾನಕ್ಕೆ ಯಾವುದೇ ತಂಡವನ್ನು ಕಳುಹಿಸಿದೆಯೇ ಎಂದು ಕೇಳಲಾಯಿತು. ಈ ಸಮಯದಲ್ಲಿ ನಾನು ಅದರ ಬಗ್ಗೆ ಏನೂ ಹೇಳಲಾರೆ ಎಂದು ಹೇಳಿ ಪಿಗ್ಗಾಟ್ ಪ್ರತಿಕ್ರಿಯಿಸಲು ನಿರಾಕರಿಸಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮವನ್ನು ಅಮೆರಿಕ ಸ್ವಾಗತಿಸಿತು ಮತ್ತು ಎರಡೂ ದೇಶಗಳ ನಡುವೆ ನೇರ ಸಂವಾದವನ್ನು ಪ್ರತಿಪಾದಿಸಿತು.

ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ವದಂತಿಗಳು ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತವು ಸರ್ಗೋಧಾ ಮತ್ತು ನೂರ್ ಖಾನ್ ವಾಯುನೆಲೆಗಳು ಸೇರಿದಂತೆ ಪಾಕಿಸ್ತಾನದ ಹಲವಾರು ಮಿಲಿಟರಿ ಸ್ಥಾಪನೆಗಳ ಮೇಲೆ ನಿಖರವಾದ ವಾಯುದಾಳಿಗಳನ್ನು ನಡೆಸಿತು. ದಾಳಿಯ ನಂತರ, ಸರ್ಗೋಧದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಕಿರಾನ ಬೆಟ್ಟಗಳ ಮೇಲೆ ದಾಳಿ ನಡೆದಿದೆ ಮತ್ತು ವಿಕಿರಣ ಸೋರಿಕೆ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. US B350 AMS ವಿಮಾನವು ಪಾಕಿಸ್ತಾನದ ವಾಯುಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ, ಈಜಿಪ್ಟ್‌ನಿಂದ ಬೋರಾನ್ (ವಿಕಿರಣವನ್ನು ನಿಯಂತ್ರಿಸುವ ಅಂಶ) ಹೊತ್ತೊಯ್ಯುವ ವಿಮಾನವು ಪಾಕಿಸ್ತಾನವನ್ನು ತಲುಪುವ ಬಗ್ಗೆಯೂ ವದಂತಿಗಳಿವೆ.

ಆದರೆ ಈ ಎಲ್ಲಾ ಅಂತೆಕಂತೆಗಳನ್ನು IAEA ನಿರಾಕರಿಸಿದೆ. ಭಾರತೀಯ ಅಧಿಕಾರಿಗಳು ಮತ್ತು ಪಾಕಿಸ್ತಾನ ಸರ್ಕಾರ ಕೂಡ ತಿರಸ್ಕರಿಸಿವೆ. ಪಾಕಿಸ್ತಾನ ಸರ್ಕಾರದಿಂದ ಬಂದ ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್ ಎಂದು ಹೇಳಲಾದ ವೈರಲ್ ದಾಖಲೆಯೂ ನಕಲಿ ಎಂದು ಕಂಡುಬಂದಿದೆ.

ಭಾರತ-ಪಾಕಿಸ್ತಾನ ಒಪ್ಪಂದ 1988 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡದ ಒಪ್ಪಂದಕ್ಕೆ ಸಹಿ ಹಾಕಲಾಗಿತು. ಇದರ ಅಡಿಯಲ್ಲಿ, ಎರಡೂ ದೇಶಗಳು ಪರಸ್ಪರರ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡದಿರಲು ಬದ್ಧವಾಗಿವೆ.

ಪಾಕಿಸ್ತಾನದ ಕಿರಾನಾ ಬೆಟ್ಟಗಳಲ್ಲಿರುವ ಪರಮಾಣು ಸಂಗ್ರಹಣಾ ಸೌಲಭ್ಯವನ್ನು ಭಾರತ ಗುರಿಯಾಗಿಸಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಹೇಳಿಕೆಗಳು ಬರುತ್ತಿವೆ . ಸರ್ಗೋಧಾದಲ್ಲಿರುವ ಮುಷಾಫ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡ ವರದಿಗಳು ಬಂದಾಗ ಈ ಹೇಳಿಕೆಗಳು ಪ್ರಾರಂಭವಾದವು.

ಕಿರಾನಾ ಬೆಟ್ಟಗಳ ಪ್ರದೇಶವು ಸರ್ಗೋಧದಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿದೆ. ಭಾರತದ ದಾಳಿಯು ಪಾಕಿಸ್ತಾನದ ಪರಮಾಣು ಸೌಲಭ್ಯಗಳಿಗೆ ಹಾನಿ ಮಾಡಿದೆ ಎಂದು ಸಹ ಹೇಳಲಾಗಿತ್ತು. ಕೆಲವು ಜನರು ವಿಕಿರಣ ಸೋರಿಕೆಯ ಬಗ್ಗೆಯೂ ಹೇಳಿಕೆಗಳನ್ನು ನೀಡಿದರು ಮತ್ತು ವಿಮಾನವು ಈಜಿಪ್ಟ್‌ನಿಂದ ಬೋರಾನ್ ಕೋಶಗಳನ್ನು ತಂದಿದೆ ಎಂದು ಹೇಳಿದರು. ಆದಾಗ್ಯೂ, ಪರಮಾಣು ಶಕ್ತಿ ಸಂಸ್ಥೆಯ ಹೇಳಿಕೆಯು ವಿಕಿರಣ ಸೋರಿಕೆಯನ್ನು ಸುಳ್ಳು ಎಂದು ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:27 am, Thu, 15 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ