AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್​ನ ಪ್ರಮುಖ ವಾಯುನೆಲೆ ಧ್ವಂಸಗೊಳಿಸಿದ ಭಾರತ, ಇದಕ್ಕೆ ಬೆದರಿತೇ ಪಾಕಿಸ್ತಾನ?

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಇದರ ನಡುವೆಯೂ ಪಾಕಿಸ್ತಾನ ಏಕಾಏಕಿ ನಿನ್ನೆ(ಮೇ 10) ರಾತ್ರಿ ಡ್ರೋನ್ ದಾಳಿ ಮಾಡಿದೆ. ಇದಕ್ಕೆ ಭಾರತ ಸೇನಾಪಡೆ ಸಹ ತಿರುಗೇಟು ನೀಡಿದ್ದು, ಈ ದಾಳಿಯಲ್ಲಿ ಪಾಕಿಸ್ತಾನಕ್ಕೆ ಅತಿ ದೊಡ್ಡ ಪೆಟ್ಟು ಬಿದ್ದಿದೆ. ಭಾರತದ ಪ್ರತಿದಾಳಿಗೆ ಪಾಕ್​ನ ಪ್ರಮುಖ​ ಸೇನಾ ನೆಲೆ ಛಿದ್ರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಾಕ್​ನ ಪ್ರಮುಖ ವಾಯುನೆಲೆ ಧ್ವಂಸಗೊಳಿಸಿದ ಭಾರತ, ಇದಕ್ಕೆ ಬೆದರಿತೇ ಪಾಕಿಸ್ತಾನ?
Rahim Yar Khan Airbase
ರಮೇಶ್ ಬಿ. ಜವಳಗೇರಾ
|

Updated on: May 11, 2025 | 5:46 PM

Share

ಇಸ್ಲಾಮಾಬಾದ್‌, (ಮೇ 11): ಭಾರತ (India) ಹಾಗೂ ಪಾಕಿಸ್ತಾನದ (Pakistan) ನಡುವೆ ಏರ್ಪಟ್ಟಿದ್ದು, ಈ ದಾಳಿ ಪ್ರತಿದಾಳಿಯಲ್ಲಿ ಪಾಕಿಸ್ತಾನ ದೊಡ್ಡ ನಷ್ಟ ಅನುಭವಿಸಿದೆ ಎಂದು ವರದಿಯಿಂದ ತಿಳಿದುಬಂದಿದೆ. ಈ ಮೂಲಕಗಳ ಪ್ರಕಾರ ಭಾರತದ ಕ್ಚಿಪಣಿ ದಾಳಿಗೆ ಪಾಕಿಸ್ತಾನದ 10 ಸೇನಾ ನೆಲೆಗಳು ಧ್ವಂಸಗೊಂಡಿವೆ. ಅದರಲ್ಲೂ ಪ್ರಮುಖವಾಗಿ ಪಾಕಿಸ್ತಾನ ಮಿಲಿಟರಿಯ ಅತಿ ಮುಖ್ಯ ಏರ್​ಬೇಸ್ ಆಗಿರುವ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ (Rahim Yar Khan airbase) ಛಿದ್ರ ಛಿದ್ರವಾಗಿದೆ ಎಂದು ವರದಿಗಳು ತಿಳಿಸಿವೆ. ಇದಕ್ಕೆ ಪೂಕರವೆಂಬಂತೆ ಇದೀಗ ನೂರ್‌ ಖಾನ್‌ (Nur Khan) ವಾಯುನೆಲೆ ಮೇಲೆ ಹಾರಿಸಿದ್ದ ಕ್ಷಿಪಣಿಯ ಸ್ಯಾಟ್‌ಲೈಟ್‌ ಚಿತ್ರಗಳು ಬಿಡುಗಡೆಯಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ವಾಯುನೆಲೆಯ ಮೇಲೆ ಭಾರತ ಸೇನಾಪಡೆ ದಾಳಿ ನಡೆಸಿದ್ದು, ಭಾರತದ ಕ್ಷಿಪಣಿಗೆ ರಹೀಮ್ ಯಾರ್ ಖಾನ್ ವಾಯುನೆಲೆಗೆ ಹಾನಿಯಾಗಿದೆ. ಈ ಸಂಬಂಧ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ (ಪಿಸಿಎಎ) ಶನಿವಾರ ಸಂಜೆ ಹೊರಡಿಸಿದ ನೋಟಿಸ್​ ನಲ್ಲಿ ತಿಳಿಸಲಾಗಿದೆ. ಭಾರತ ಮಿಲಿಟರಿ ದಾಳಿ ಹಿನ್ನೆಲೆಯಲ್ಲಿ ವಾಯುನೆಲೆಯಲ್ಲಿರುವ ಏಕೈಕ ರನ್‌ವೇಯನ್ನು ಒಂದು ವಾರದವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: USA move: ಹೇಗಾದ್ರೂ ಕಿತ್ತಾಡಿಕೊಳ್ಳಿ ಎನ್ತಿದ್ದ ಅಮೆರಿಕ ದಿಢೀರ್ ಮಧ್ಯಪ್ರವೇಶಿಸಲು ಕಾರಣವಾಗಿತ್ತು ಭಾರತದ ಈ ಒಂದು ಅಟ್ಯಾಕ್

ಇಸ್ಲಾಮಾಬಾದ್​​ನಿಂದ 10 ಕಿಮೀ ದೂರದಲ್ಲಿದೆ. ಪಾಕಿಸ್ತಾನದ ಮಿಲಿಟರಿಯ ಮುಖ್ಯ ಸಾಗಣೆ ಕೇಂದ್ರಗಳಲ್ಲಿ ನೂರ್ ಖಾನ್ ವಾಯುನೆಲೆ ಸಹ ಒಂದು. ಯುದ್ಧವಿಮಾನಗಳಿಗೆ ರೀಫುಯಲೆಂಗ್ ವ್ಯವಸ್ಥೆ ಹೊಂದಿದೆ. ಸೇನೆಯ ಹೆಡ್​​ಕ್ವಾರ್ಟರ್ಸ್ ಪಕ್ಕದಲ್ಲೇ ಇದೆ. ಪಾಕಿಸ್ತಾನದ ನ್ಯಾಷನಲ್ ಏರೋಸ್ಪೇಸ್ ಸೆಂಟರ್ ಇರುವ ಬೇನಜೀರ್ ಇಂಟರ್​ನ್ಯಾಷನಲ್ ಏರ್ಪೋರ್ಟ್ ಕೂಡ ಸಮೀಪದಲ್ಲಿದೆ.

ಇದನ್ನೂ ಓದಿ
Image
ಭಾರತಕ್ಕೆ ಬ್ರಹ್ಮೋಸ್‌ ಮಿಸೈಲ್​​ ಬಲ: ಏನಿದರ ಮಹತ್ವ, ಸಾಮಾರ್ಥ್ಯ?
Image
ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದ ಐಎಎಫ್
Image
ಭಾರತದ ಈ ಮಿಸೈಲ್ ದಾಳಿಗೆ ಪಾಕ್ ಮಾತ್ರವಲ್ಲ, ಅಮೆರಿಕಕ್ಕೂ ಆಗಿತ್ತು ನಡುಕ
Image
ಶಾಂತಿ ಕಾಪಾಡಿ ಎಂದ ಚೀನಾ ವಿದೇಶಾಂಗ ಸಚಿವಗೆ ಅಜಿತ್ ದೋವಲ್ ಹೇಳಿದ್ದೇನು?

ನೂರ್ ಖಾನ್ ಮಾತ್ರವಲ್ಲ, ಚಕ್ಲಾಲ, ಮುರಿದ್, ರಫಿಕಿ, ರಹೀಂ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಮತ್ತಿತರ ವಾಯುನೆಲೆಗಳ ಮೇಲೆ ಭಾರತ ನಿಖರವಾಗಿ ಕ್ಷಿಪಣಿ ದಾಳಿ ಮಾಡಿದ್ದು ಪಾಕಿಸ್ತಾನವನ್ನು ಕಂಗೆಡೆಸಿತ್ತು. ನೂರ್ ಖಾನ್ ನೆಲೆಯಲ್ಲಿ ಎರಡು ಸ್ಫೋಟಗಳಾದವು. ಹೀಗೇ ಮುಂದುವರಿದಿದ್ದಲ್ಲಿ ಪಾಕಿಸ್ತಾನದ ನ್ಯೂಕ್ಲಿಯಾರ್ ಕಮಾಂಡ್ ಅಥಾರಿಟಿ ಮಣ್ಣುಪಾಲಾಗುವ ಸಾಧ್ಯತೆ ಇತ್ತು. ಹೀಗಾಗಿ ಪಾಕ್ ಕದನ ವಿರಾಮಕ್ಕಾಗಿ ಅಮೆರಿಕದ ಮೊರೆ ಹೋಗಿತ್ತು ಎನ್ನುವುದು ತಿಳಿದುಬಂದಿದೆ.

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್