ಡಿಎಂಕೆ ಒತ್ತಡಕ್ಕೆ ಮಣಿದು ನೀರು ಬಿಡುತ್ತಿದ್ದೀರಿ: ಸಿದ್ದರಾಮಯ್ಯ ಟ್ವೀಟ್​ಗೆ ರಾಜೀವ್ ಚಂದ್ರಶೇಖರ್ ತಿರುಗೇಟು

ಕಾವೇರಿ ವಿವಾದದ ಬಗ್ಗೆ 32 ಬಿಜೆಪಿ ಸಂಸದರು ಪ್ರಧಾನಿಯೊಂದಿಗೆ ಮೌನ ವಹಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಜೆಪಿ ನಡ್ಡಾ ಅವರ ವಿಡಿಯೋ ಹಂಚಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಇದು ನಿಮ್ಮ ಅನುಮಾನಾಸ್ಪದ ರಾಜಕೀಯವನ್ನು ಬಹಿರಂಗಪಡಿಸುತ್ತದೆ ಎಂದಿದ್ದಾರೆ.

ಡಿಎಂಕೆ ಒತ್ತಡಕ್ಕೆ ಮಣಿದು ನೀರು ಬಿಡುತ್ತಿದ್ದೀರಿ: ಸಿದ್ದರಾಮಯ್ಯ ಟ್ವೀಟ್​ಗೆ ರಾಜೀವ್ ಚಂದ್ರಶೇಖರ್ ತಿರುಗೇಟು
ರಾಜೀವ್ ಚಂದ್ರಶೇಖರ್ ಮತ್ತು ಸಿದ್ದರಾಮಯ್ಯ

Updated on: Sep 29, 2023 | 11:19 PM

ನವದೆಹಲಿ, ಸೆ.29: ಕಾವೇರಿ ವಿವಾದದ (Cauvery Dispute) ಬಗ್ಗೆ 32 ಬಿಜೆಪಿ ಸಂಸದರು ಪ್ರಧಾನಿಯೊಂದಿಗೆ ಮೌನ ವಹಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಟ್ವೀಟ್ ಮಾಡಿ ಜೆಪಿ ನಡ್ಡಾ ಅವರ ವಿಡಿಯೋ ಹಂಚಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ ಕೇಂದ್ರ ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ, ವಿದ್ಯುನ್ಮಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar), ಇದು ನಿಮ್ಮ ಅನುಮಾನಾಸ್ಪದ ರಾಜಕೀಯವನ್ನು ಬಹಿರಂಗಪಡಿಸುತ್ತದೆ ಎಂದಿದ್ದಾರೆ.

ನಿಮ್ಮ ಸರ್ಕಾರದ ಜವಾಬ್ದಾರಿಯನ್ನು ಸಂಸದರು ಮತ್ತು ಭಾರತ ಸರ್ಕಾರದ ಮೇಲೆ ಹಾಕುವ ಸ್ಮಾರ್ಟ್ ತಂತ್ರ ಎಂದು ನೀವು ಭಾವಿಸಬಹುದು, ಆದರೆ ಇದು ನಿಮ್ಮ ಅನುಮಾನಾಸ್ಪದ ರಾಜಕೀಯವನ್ನು ಬಹಿರಂಗಪಡಿಸುತ್ತದೆ ಎಂದು ರಾಜೀವ್ ಟ್ವೀಟ್ ಮಾಡಿದ್ದಾರೆ.

ವಿವಾದ ಸಂಬಂಧ ನೀವು ಯಾರೊಂದಿಗೂ ಸಮಾಲೋಚಿಸಿಲ್ಲ. ನಿಮ್ಮ ಯುಪಿಎ/ಇಂಡಿಯಾ ಮೈತ್ರಿ ಕೂಟದ ಡಿಎಂಕೆ ಮತ್ತು ನಿಮ್ಮ ರಾಜಕೀಯದ ಒತ್ತಡಕ್ಕೆ ಮಣಿದು ನಮ್ಮ ರೈತ ಸಹೋದರರಿಗೆ ಮೀಸಲಾದ ಅಮೂಲ್ಯವಾದ ನೀರನ್ನು ಬಿಡುಗಡೆ ಮಾಡಿದ್ದೀರಿ ಎಂದು ಟೀಕಿಸಿದರು.

ಇದನ್ನೂ ಓದಿ: ತಮಿಳುನಾಡುಗೆ ನೀರು ಬಿಡುವಂತೆ ಸಿಡಬ್ಲ್ಯೂಎಂಎ ಆದೇಶ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಅದೇ ರಾಗ ಅದೇ ತಾಳ!

ಗ್ಯಾರಂಟಿಗಳಿಗಾಗಿ ಜನರು ನಿಮಗೆ ಮತ ಚಲಾಯಿಸಿದ್ದಾರೆ. ಇತರರನ್ನು ದೂಷಿಸುವುದನ್ನು ನಿಲ್ಲಿಸಿ ಮತ್ತು ರೈತರು, ನಮ್ಮ ಕೃಷಿ ಆರ್ಥಿಕತೆ ಮತ್ತು ಕರ್ನಾಟಕ ಮತ್ತು ಬೆಂಗಳೂರಿನ ಜನರ ಜೀವನ ಮತ್ತು ಜೀವನೋಪಾಯವನ್ನು ಖಾತರಿಪಡಿಸಲು ಕಾರ್ಯನಿರ್ವಹಿಸಿ ಎಂದರು.

ಭ್ರಷ್ಟ ಮತ್ತು ಅವಕಾಶವಾದಿ ಕಾಂಗ್ರೆಸ್ ರಾಜಕಾರಣದ ಬಲಿಪೀಠದಲ್ಲಿ ಕರ್ನಾಟಕದ ಜನರಿಗೆ ದ್ರೋಹ ಮಾಡಬೇಡಿ. ಇದಕ್ಕೆ ನಾವು ನಿಮಗೆ ಅವಕಾಶ ನೀಡುವುದಿಲ್ಲ. ಸುಳ್ಳು ಹೇಳುವುದನ್ನು ನಿಲ್ಲಿಸಿ, ವಿಚಲಿತರಾಗುವುದನ್ನು ನಿಲ್ಲಿಸಿ ಮತ್ತು ನಮ್ಮ ರೈತರ ಜೀವನವನ್ನು ಖಾತರಿಪಡಿಸಲು ಕಾರ್ಯನಿರ್ವಹಿಸಿ ಎಂದರು.

ಸಿದ್ದರಾಮಯ್ಯ ಟ್ವೀಟ್​ನಲ್ಲಿ ಹೇಳಿದ್ದೇನು?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಭಾಷಣದ ವಿಡಿಯೋವನ್ನು ಹಂಚಿಕೊಂಡ ಸಿದ್ದರಾಮಯ್ಯ ಅವರು, “ನ್ಯಾಯಕ್ಕಾಗಿ ಕರ್ನಾಟಕದ ಕರೆ ಜೋರಾಗಿದೆ ಮತ್ತು ಸ್ಪಷ್ಟವಾಗಿದೆ. ಕಾವೇರಿ ವಿವಾದದ ಬಗ್ಗೆ 32 ಬಿಜೆಪಿ ಸಂಸದರು ಪ್ರಧಾನಿಯೊಂದಿಗೆ ಮೌನ ವಹಿಸಿದ್ದಾರೆ. ನ್ಯಾಯಕ್ಕಾಗಿ ನಮ್ಮ ರಾಜ್ಯದ ಅನ್ವೇಷಣೆ ಮುಂದುವರೆದಿದೆ. ನಮ್ಮ ಚುನಾಯಿತ ಪ್ರತಿನಿಧಿಗಳು ಕೇವಲ ಪ್ರಧಾನಿಯನ್ನು ಸಮರ್ಥಿಸಿಕೊಳ್ಳಲು ಸೀಮಿತವಾಗಿದ್ದಾರೆಯೇ?” ಎಂದು ಪ್ರಶ್ನಿಸಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ