ಮೈಸೂರಿನಲ್ಲಿ ನಕಲಿ ರೆಮ್​ಡಿಸಿವಿರ್ ಮಾರಾಟ ಜಾಲ; ಮತ್ತಿಬ್ಬರ ಬಂಧನ

|

Updated on: Apr 21, 2021 | 9:47 AM

800 ರಿಂದ 900 ಬಾಟಲ್ ನಕಲಿ ರೆಮ್ಡಿಸಿವಿರ್ ಮಾರಾಟ ಮಾಡಿದ್ದ ಆರೋಪಿಗಳು ಆ್ಯಂಟಿಬಾಟಿಕ್ ಪೌಡರ್ನ ಬಳಸುತ್ತಿದ್ದರು. ಒಂದು ಬಾಟಲ್ಗೆ 100 ರೂಪಾಯಿ ಖರ್ಚು ಮಾಡಿ 4 ಸಾವಿರ ರೂಪಾಯಿಗೆ ಪ್ರಶಾಂತ್ ಮತ್ತು ಮಂಜುನಾಥ್ ಮೂಲಕ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಮೈಸೂರಿನಲ್ಲಿ ನಕಲಿ ರೆಮ್​ಡಿಸಿವಿರ್ ಮಾರಾಟ ಜಾಲ; ಮತ್ತಿಬ್ಬರ ಬಂಧನ
ಆರೋಪಿಗಳಾದ ಮಂಜುನಾಥ್ ಮತ್ತು ಪ್ರಶಾಂತ್
Follow us on

ಮೈಸೂರು: ಜಿಲ್ಲೆಯಲ್ಲಿ ನಕಲಿ ರೆಮ್​ಡಿಸಿವಿರ್ ಮಾರಾಟ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪ್ರತಿನಿಧಿಗಳಾದ ಪ್ರಶಾಂತ್ ಮತ್ತು ಮಂಜುನಾಥ್ ಎಂಬುವವರು ಪೊಲೀಸರ ವಶದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೊದಲು ಜೆಎಸ್ಎಸ್ ಆಸ್ಪತ್ರೆಯ ಸ್ಟಾಪ್ ನರ್ಸ್ ಗಿರೀಶ್ ಎಂಬುವವರನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿಯಿಂದ ಸುಮಾರು 2 ಲಕ್ಷದ 82 ಸಾವಿರ ನಗದು ವಶಪಡಿಸಿಕೊಳ್ಳಲಾಗಿತ್ತು.

800 ರಿಂದ 900 ಬಾಟಲ್ ನಕಲಿ ರೆಮ್​ಡಿಸಿವಿರ್ ಮಾರಾಟ ಮಾಡಿದ್ದ ಆರೋಪಿಗಳು ಆ್ಯಂಟಿಬಾಟಿಕ್ ಪೌಡರ್​ನ ಬಳಸುತ್ತಿದ್ದರು. ಒಂದು ಬಾಟಲ್ಗೆ 100 ರೂಪಾಯಿ ಖರ್ಚು ಮಾಡಿ 4 ಸಾವಿರ ರೂಪಾಯಿಗೆ ಪ್ರಶಾಂತ್ ಮತ್ತು ಮಂಜುನಾಥ್ ಮೂಲಕ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಗಿರೀಶ್ ಶಿವಪ್ಪ, ಮಂಗಳನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಆರೋಪಿಗಳಿಂದ ನಕಲಿ ಬಾಟಲ್​ಗಳು ವಶಕ್ಕೆ ಪಡೆಯಲಾಗಿತ್ತು. ಇದೀಗ ಮತ್ತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಜೂಜುಕೋರರ ಬಂಧನ
ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಅಚ್ಚಮ್ಮನಹಳ್ಳಿ ಗ್ರಾಮದ ಹೊರವಲಯದಲ್ಲಿ ಪೊಲೀಸರು ದಾಳಿ ನಡೆಸಿ ಸುಮಾರು ಐವರನ್ನು ಬಂಧಿಸಿದ್ದಾರೆ. ದಾಳಿ ನಡೆಸಿದ ವೈ.ಎನ್.ಹೊಸಕೋಟೆ ಪೊಲೀಸರು ಪೊಲೀಸ ಬಂಧಿತರಿಂದ 14.800 ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ

ಬಿಡುವಿಲ್ಲದೆ ಶವ ಸಂಸ್ಕಾರ ನಡೆಸಿ ಸುಸ್ತಾದ ಚಿತಾಗಾರದ ಸಿಬ್ಬಂದಿ; ಮನೆಗೆ ಹೋಗಲೂ ಸಮಯವಿಲ್ಲ

ರೆಮ್ಡಿಸಿವಿರ್ ಇಂಜೆಕ್ಷನ್ ಅಭಾವ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಘನಾ ಅಧ್ಯಕ್ಷ ಡಾ. ಹೆಚ್ ಎಮ್​ ಪ್ರಸನ್ನ

(CCB Police arrested two men accused of selling fake Remdesivir at mysuru)