ಬೆಂಗಳೂರಿನಲ್ಲಿ ಬೆಟ್ಟಿಂಗ್ ದಂಧೆ ಮೇಲೆ ಸಿಸಿಬಿ ದಾಳಿ; ಐವರು ಬಂಧನ, 12 ಲಕ್ಷ ರೂಪಾಯಿ ವಶ

| Updated By: preethi shettigar

Updated on: Apr 20, 2021 | 10:05 AM

ಕರ್ನಾಟಕ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಪೊಲೀಸರು ಎಷ್ಟೇ ಪ್ರಯತ್ನ ಮಾಡಿದರು, ಒಂದಲ್ಲ ಒಂದು ಕಡೆ ಬೆಟ್ಟಿಂಗ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಟ್ಟಿಂಗ್ ದಂಧೆ ನಡೆಸುವವರು ಪೊಲೀಸರ ಕೈಗೆ ಸಿಕ್ಕರೆ ಅವರ ಹೆಡೆಮುರಿ ಕಟ್ಟುವುದರಲ್ಲಿ ಎರಡು ಮಾತಿಲ್ಲ.

ಬೆಂಗಳೂರಿನಲ್ಲಿ ಬೆಟ್ಟಿಂಗ್ ದಂಧೆ ಮೇಲೆ ಸಿಸಿಬಿ ದಾಳಿ; ಐವರು ಬಂಧನ, 12 ಲಕ್ಷ ರೂಪಾಯಿ ವಶ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮಹಾಮಾರಿ ಕೊರೊನಾ ನಡುವೆಯೂ ಐಪಿಎಲ್ ಆರಂಭವಾಗಿದೆ. ಐಪಿಎಲ್ ಆರಂಭವಾಗುತ್ತಿದ್ದಂತೆ ಬೆಟ್ಟಿಂಗ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ ಹಲವು ಕಡೆ ಬೆಟ್ಟಿಂಗ್​ನಿಂದ ಹಲವರು ದುಡ್ಡು ಮಾಡುತ್ತಿದ್ದರೆ, ಇನ್ನು ಕೆಲವರು ಇದ್ದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಪೊಲೀಸರು ಎಷ್ಟೇ ಪ್ರಯತ್ನ ಮಾಡಿದರು, ಒಂದಲ್ಲ ಒಂದು ಕಡೆ ಬೆಟ್ಟಿಂಗ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಟ್ಟಿಂಗ್ ದಂಧೆ ನಡೆಸುವವರು ಪೊಲೀಸರ ಕೈಗೆ ಸಿಕ್ಕರೆ ಅವರ ಹೆಡೆಮುರಿ ಕಟ್ಟುವುದರಲ್ಲಿ ಎರಡು ಮಾತಿಲ್ಲ. ಹೀಗಿದ್ದೂ, ಯಾವುದೇ ಭಯವಿಲ್ಲದೆ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿರುವುದು ದುರಂತದ ಸಂಗತಿ.

ರಾಜ್ಯದ ರಾಜಧಾನಿಯಲ್ಲೂ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆ್ಯಪ್ ಮೂಲಕ ಬೆಟ್ಟಿಂಗ್ ಆಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳ ಬಳಿಯಿದ್ದ ಸುಮಾರು 12 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಮೂವರು ದರೋಡೆಕೋರರ ಬಂಧನ
ಶಿವಮೊಗ್ಗ: ಸಾಗರ ತಾಲೂಕಿನ ಶ್ರೀವಾಳದ ಚಿನ್ನಾಭರಣ ವ್ಯಾಪಾರಿ ಬಳಿ 7.50 ಲಕ್ಷ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಜೈವೀರ್, ಶಶಿಕುಮಾರ್, ಶರಣ್ ಎಂದು ತಿಳಿದುಬಂದಿದೆ. ಬಂಧಿತರಿಂದ ಪೊಲೀಸರು 1.40 ಲಕ್ಷ ನಗದು ಮತ್ತು ಒಂದು ಇಟಿಯೋಸ್ ಕಾರ್ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ

ಕಮರಿಪೇಟೆಯಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕ್ರಿಕೆಟ್ ಬೆಟ್ಟಿಂಗ್​, ಅಕ್ರಮ ಮದ್ಯ ಸಂಗ್ರಹಿಸಿದ್ದ ಮೂವರ ಬಂಧನ

ಸೋಂಕು ಧೃಡವಾದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಸೇರುವೆ ಎಂದಿದ್ದ ಶಾಸಕ ರೇಣುಕಾಚಾರ್ಯ ರಾತ್ರೋರಾತ್ರಿ ಬೆಂಗಳೂರಿಗೆ ಶಿಫ್ಟ್

(CCB police raided a betting in Bengaluru and seize 12 lack rs)

Published On - 9:54 am, Tue, 20 April 21