ರಾಯಚೂರು, ಮೈಸೂರಿನಲ್ಲಿ ಗೃಹಿಣಿಯರ ಪ್ರತ್ಯೇಕ ಆತ್ಮಹತ್ಯೆ.. ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದ ಸಾವು
ಒಬ್ಬರನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದರೂ ಗಂಡ ವಿಚ್ಛೇದನ ನೀಡು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ಮನ ನೊಂದ ಮಹಿಳೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಯಚೂರು: ಪ್ರೀತಿಸಿ ಮದುವೆಯಾದ ಪ್ರೇಯಸಿಗೆ ವಿಚ್ಛೇದನ ನೀಡುವಂತೆ ಪತಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಪತ್ನಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದಲ್ಲಿ ನಡೆದಿದೆ. ರಶ್ಮಿ(32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಒಬ್ಬರನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದರೂ ಗಂಡ ವಿಚ್ಛೇದನ ನೀಡು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ಮನ ನೊಂದ ಮಹಿಳೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟನಲ್ಲಿ ತನಗೆ ಕಿರುಕುಳ ನೀಡ್ತಿದ್ದ ಪತಿ ಸೇರಿ ಹಲವರ ವಿರುದ್ದ ಆರೋಪಿಸಿದ್ದಾರೆ. ಸದ್ಯ ಪತಿ ಇಬ್ರಾಹಿಂ ಸೇರಿ 8 ಜನರ ವಿರುದ್ಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು ಇನ್ನು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಸದಾಶಿವಕೊಪ್ಪಲಿನಲ್ಲಿ ಗೃಹಿಣಿಯ ಅನುಮಾನಾಸ್ಪದ ಸಾವು ಸಂಭವಿಸಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಕೃತಿಕಾ(21) ಮೃತದೇಹ ಪತ್ತೆಯಾಗಿದೆ. 2 ವರ್ಷದ ಹಿಂದೆ ವಿಶ್ವನಾಥ್ ಜತೆ ಕೃತಿಕಾ ವಿವಾಹವಾಗಿತ್ತು. ವರದಕ್ಷಿಣೆಯಾಗಿ 3 ಲಕ್ಷ ನಗದು 100 ಗ್ರಾಂ ಚಿನ್ನ ನೀಡಲಾಗಿತ್ತು. ಇದಾದ ಬಳಿಕವೂ ಪತಿ ವಿಶ್ವನಾಥ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ಕೃತಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕೃತಿಕಾ ಪೋಷಕರು ಕಣ್ಣೀರು ಹಾಕಿದ್ದಾರೆ.
ಈ ಸಂಬಂಧ ಪತಿ ವಿಶ್ವನಾಥ್ ವಿರುದ್ಧ ಕ್ರಮಕ್ಕೆ ಕೃತಿಕಾ ಪೋಷಕರು ಒತ್ತಾಯಿಸಿ ಹುಣಸೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ವಿಶ್ವನಾಥ್ ಆರೋಗ್ಯ ಇಲಾಖೆ ನೌಕರನಾಗಿದ್ದಾನೆ. ಸದ್ಯ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿದ್ದ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ
Published On - 8:11 am, Tue, 20 April 21