ರಾಜ್ಯದಲ್ಲಿ ಕೊವಿಡ್ 3ನೇ ಅಲೆಯ ತಯಾರಿ ಮಾಡಿಕೊಳ್ಳಿ: ಕೇಂದ್ರ ಸಚಿವ ಸದಾನಂದಗೌಡ
ಕೊವಿಡ್ ಲಸಿಕೆಗೆ ರಾಜ್ಯ ಸರ್ಕಾರ ಗ್ಲೋಬಲ್ ಟೆಂಡರ್ ಕರೆದಿದ್ದ ವಿಚಾರವಾಗಿ ಮಾಹಿತಿ ನೀಡಿದ ಕೇಂದ್ರ ಸಚಿವ ಸದಾನಂದಗೌಡ, ರಾಜ್ಯ ಸರ್ಕಾರ ಕರೆದಿದ್ದ ಟೆಂಡರ್ಗೆ ಇಬ್ಬರು ಸ್ಪಂದಿಸಿ ಕೋಟ್ ಮಾಡಿದ್ದರು. ಆದರೆ ಇಬ್ಬರು ಕೂಡ ರಾಜ್ಯ ನೀಡಿದ್ದ ಅರ್ಹತೆಯಲ್ಲಿ ಅನರ್ಹರಾಗಿದ್ದಾರೆ ಎಂದರು.
ಬೆಂಗಳೂರು: ರಾಜ್ಯ ಸರ್ಕಾರ ಕೊವಿಡ್ 3ನೇ ಅಲೆ ತಡೆಯಲು ಅಗತ್ಯವಾದ ಪ್ರಮಾಣದಲ್ಲಿ ರೆಮ್ಡಿಸಿವಿರ್ ಔಷಧವನ್ನು ಈಗಿನಿಂದಲೇ ಸಂಗ್ರಹಿಸಬೇಕು. ರಾಜ್ಯಕ್ಕೆ ಬೇಕಿರುವ ಎಲ್ಲ ರೀತಿಯ ಔಷಧಗಳನ್ನೂ ಕೇಂದ್ರದಿಂದ ವಿತರಣೆ ಮಾಡಿದ್ದೇವೆ. ಕೊವಿಡ್ 2 ಅಲೆಯ ಗಂಭೀರತೆಯನ್ನು ಅರಿತು 3ನೇ ಅಲೆಯ ತಯಾರಿ ಮಾಡಿಕೊಳ್ಳಬೇಕು. ಕೇಂದ್ರ ಹಂಚಿಕೆ ಮಾಡಿರುವ ರೆಮ್ಡಿಸಿವಿರ್ನ್ನು ಸಂಗ್ರಹಿಸಿ ಇಡಬೇಕು ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೂಚನೆ ನೀಡಿದರು.
ರೆಮಿಡಿಸಿವಿರ್ ರೀತಿಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಆಂಪಟೋರಿಸನ್ ಪೂರೈಕೆ ಸಾಧ್ಯವಾಗುವುದಿಲ್ಲ. ಫಂಗಸ್ಗೆ ತುತ್ತಾದವರ ಸಂಖ್ಯೆಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳಿಸಬೇಕು. ಅದರ ಆಧಾರದಲ್ಲಿ ಔಷಧ ಬಿಡುಗಡೆ ಮಾಡಲಾಗುತ್ತದೆ. ಬ್ಲ್ಯಾಕ್ ಫಂಗಸ್ ಕೇಸ್ನಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಔಷಧ ಉತ್ಪಾದನೆಗೆ ಐದು ಹೊಸ ಲೈಸೆನ್ಸ್ ನೀಡಲಾಗಿದೆ. ನಿನ್ನೆ 10,600ರಷ್ಟು ಆಂಪಟೋರಿಸನ್ ಔಷಧವನ್ನು ರಾಜ್ಯಕ್ಕೆ ವಿತರಿಸಲಾಗಿದೆ.ಮೂರು ದಿನಗಳಲ್ಲಿ ಎಲ್ಲಾ ಬೇಡಿಕೆಯನ್ನು ಪೂರೈಸಲಾಗುವುದು ಎಂದು ಅವರು ತಿಳಿಸಿದರು.
ಕೊವಿಡ್ ಲಸಿಕೆಗೆ ರಾಜ್ಯ ಸರ್ಕಾರ ಗ್ಲೋಬಲ್ ಟೆಂಡರ್ ಕರೆದಿದ್ದ ವಿಚಾರವಾಗಿ ಮಾಹಿತಿ ನೀಡಿದ ಕೇಂದ್ರ ಸಚಿವ ಸದಾನಂದಗೌಡ, ರಾಜ್ಯ ಸರ್ಕಾರ ಕರೆದಿದ್ದ ಟೆಂಡರ್ಗೆ ಇಬ್ಬರು ಸ್ಪಂದಿಸಿ ಕೋಟ್ ಮಾಡಿದ್ದರು. ಆದರೆ ಇಬ್ಬರು ಕೂಡ ರಾಜ್ಯ ನೀಡಿದ್ದ ಅರ್ಹತೆಯಲ್ಲಿ ಅನರ್ಹರಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚು ಲಸಿಕೆ ನೀಡುವ ವಿಚಾರದ ಬಗ್ಗೆ ಸೋಮವಾರ ಉನ್ನತ ಮಟ್ಟದ ಸಮಿತಿಯಲ್ಲಿ ಮಾತಾಡುತ್ತೇನೆ ಎಂದರು.
ಇದನ್ನೂ ಓದಿ: ಕೊವಿಡ್ ಲಸಿಕೆಗೆ ಕಮಿಷನ್ ಆರೋಪ: ಕಮಲ್ ಪಂತ್ಗೆ ದೂರು; ಕಾಂಗ್ರೆಸ್ ವಿರುದ್ಧ ಹರಿಹಾಯ್ದ ರವಿಸುಬ್ರಹ್ಮಣ್ಯ
ಕೊವಿಡ್ ಕಡಿಮೆ ಆಗುತ್ತಿದೆ ಎಂದು ಕೈಕಟ್ಟಿ ಕೂರುವಂತಿಲ್ಲ; ಸಿಎಂ ಯಡಿಯೂರಪ್ಪ ಖಡಕ್ ಸೂಚನೆ
( Central Minister DV Sadananda Gowda directs make preferation to Covid 3rd wave in Karnataka)